ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ, ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಶಿವನಗೌಡಾ ಪಾಟೀಲ, ಪೊಲೀಸ್ ಉಪಾಧೀಕ್ಷಕರು ಬೀದರ ರವರ ನೇತೃತ್ವದಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪಿ.ಐ ಶ್ರೀ ವಿಜಯಕುಮಾರ, ಶ್ರೀ ಪ್ರಭಾಕರ ಪಾಟೀಲ್, ಪಿ.ಎಸ್.ಐ, ಶ್ರೀ ಅಬ್ದುಲ್ ಸಮದ ರವರು ತಮ್ಮ ಸಿಬ್ಬಂದಿ ರವರಾದ ಶ್ರೀ ಮೋಹನರಾಜ, ಶ್ರೀ ದೀಪಕ, ಶ್ರೀ ರಾಹುಲ ಹಿಬಾರೆ, ಶ್ರೀ ಪ್ರಕಾಶ, ಶ್ರೀ ಭರತ, ಶ್ರೀ ಸತೀಶ, ಶ್ರೀ ನಿಂಗಪ್ಪಾ, ಶ್ರೀ ಮಲ್ಲಿಕಾರ್ಜುನ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು ತಂಡವು ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ, ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿ ಆಧಾರದ ಮೇರಗೆ ಆರೋಪಿತನನ್ನು ವಶಕ್ಕೆ ಪಡೆದು ಅವನಿಂದ 9 ದ್ವಿಚಕ್ರ ವಾಹನ ಅ:ಕಿ: 3,50,000=00ರೂಪಾಯಿ ಬೆಲೆ ಬಾಳುವ ವಾಹನವನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ.
ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ..









