ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತಮಿಳುನಾಡು ರಾಜ್ಯದ ಕೊಯಮತ್ತೂರು ಊರಿನಲ್ಲಿರುವ ಟ್ರಾನ್ಸ್ಪೋರ್ಟ್ ಕಂಪನಿಯ ವ್ಯವಸ್ಥಾಪಕರು ದೂರನ್ನು ಸಲ್ಲಿಸಿದ್ದು
ದೂರಿನಲ್ಲಿ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಎರಡು ತಿಂಗಳಿನಿಂದ ಓರ್ವ ಚಾಲಕನನ್ನು ನೇಮಕ ಮಾಡಿಕೊಂಡಿರುತ್ತಾರೆ
ಕಂಪನಿಯ ವತಿಯಿಂದ ಟಾಟಾ ಸಿಗ್ನ ಎಂಬ ಹದಿನಾರು ಗಾಲಿ ಯ ಲಾರಿಯನ್ನು ಆತನಿಗೆ ನೀಡಿದ್ದು ಆತನು ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿರುವ ಜೆ ಎಸ್ ಡಬ್ಲ್ಯೂ ಸ್ಟೀಲ್ನಿಂದ ಮೂರು ಸ್ಟೀಲ್ ಕಾಯಿಲ್ ರೋಲ್ ಗಳನ್ನು ತಮಿಳುನಾಡಿನ ಕುಯಂತ್ತೂರಿನಲ್ಲಿರುವ ಕಾರ್ಖಾನೆಯಿಂದಕ್ಕೆ ಸಾಗಿಸುವ ಸಲುವಾಗಿ ಕಳುಹಿಸಿಕೊಟ್ಟಿದ್ದರು ಅದರಂತೆ ಚಾಲಕನು ಜೆ ಎಸ್ ಡಬ್ಲ್ಯೂ ಸ್ಟೀಲ್ ನಿಂದ 27 ಲಕ್ಷ ಬೆಲೆಬಾಳುವ ಮೂರು ಸ್ಟೀಲ್ ಕಾಯಿಲ್ ರೋಲ್ ಗಳನ್ನು ತೆಗೆದುಕೊಂಡು ಕೊಯಂಬತ್ತೂರ್ ಕಾರ್ಖಾನೆಗೆ ಹೊರಟಿರುತ್ತಾನೆ
ಲಾರಿಯೂ ಸರಿಯಾದ ದಿನಕ್ಕೆ ಕಾರ್ಖಾನೆಗೆ ತಲುಪದಿದ್ದ ಕಾರಣ ಲಾರಿಗೆ ಅಳವಡಿಸಿದ್ದ ಜಿಪಿಎಸ್ ತಂತ್ರಾಂಶದಿಂದ ಲಾರಿಯ ಚಲನವಲನಗಳ ಬಗ್ಗೆ ಪರಿಶೀಲಿಸಿದಾಗ ಜಾಲಹಳ್ಳಿ ಎಚ್ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಚಾಲಕನು ಲಾರಿಯನ್ನು ಸುಮಾರು 2 ಗಂಟೆಗಳ ಕಾಲ ನಿಲ್ಲಿಸಿದ್ದು ನಂತರ ಅಲ್ಲಿಂದ ಶ್ರವಣಬೆಳಗೊಳದ ಬಳಿ ಹೋಗಿ ಕಾಲಿ ಲಾರಿ ನಿಲ್ಲಿಸಿ ಪರಾರಿ ಯಾಗಿರುತ್ತಾನೆ
ಈ ಪ್ರಕರಣದ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಜಾಲಹಳ್ಳಿಯಲ್ಲಿರುವ ಎಚ್ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಕಂಪನಿ ಎಂದರೆ ಮುಂಭಾಗ ಈ ಪ್ರಕರಣದಲ್ಲಿ ಕಳುವಾಗಿದ್ದ ಮೂರು ಸ್ಟೀಲ್ ಕಾಯಿಲ್ ರೋಲ್ ಗಳನ್ನು ಹಾಗೂ ಆ ಕಂಪನಿಯ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಓರ್ವ ವ್ಯಕ್ತಿಯು ಕಂಪನಿಯಲ್ಲಿ ಮೂರು ಸ್ಟೀಲ್ ಕಾಯಿಲ್ ರೋಲ್ ಗಳನ್ನು ಇಟ್ಟುಕೊಳ್ಳುವಂತೆ ತಿಳಿಸಿದ್ದಾನೆಂದು ವ್ಯಕ್ತಿಗಳು ತಿಳಿಸಿರುತ್ತಾರೆ
ಈ ಪ್ರಕರಣದಲ್ಲಿ ಭಾಗಿಯಾಗಿರುವ ಚಾಲಕನನ್ನು ಬೆಂಗಳೂರಿನ ರಮೋಹಳ್ಳಿ ಬಳಿ ಇರುವ ದೊಡ್ಡ ಆಲದ ಮರದ ಹತ್ತಿರ ವರ್ಷಕ್ಕೆ ಪಡೆದು ಚಾಲಕನನ್ನು ವಿಚಾರಣೆಗಳು ಪಡಿಸಿದಾಗ ಈ ಪ್ರಕರಣದಲ್ಲಿ ತಾನು ಹಾಗೂ ಇತರೆ ಮೂವರು ಸೇರಿಕೊಂಡು ಈ ಕೃತ್ಯ ಹೆಸರಿಗಿರುವುದಾಗಿ ತಿಳಿಸಿರುತ್ತಾನೆ
ಈ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸುಧೀರ್ಘವಾಗಿ ವಿಚಾರಣೆಗಳ ಪಡಿಸಿ ಆರೋಪಿತರಿಂದ 27 ಲಕ್ಷ ಮೌಲ್ಯದ ಮೂರು ಸ್ಟೀಲ್ ಕಾಯಿಲ್ ರೋಲ್ ಗಳನ್ನು ವಶಪಡಿಸಿಕೊಳ್ಳಲಾಯಿತು
ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪಪೋ ಪೊಲೀಸ್ ಆಯುಕ್ತರದ ಬಾಬಾ ಸಾಬ್ ನ್ಯಾಮೇಗೌಡ ಐಪಿಎಸ್, ಎಸಿಪಿ ಮೇರಿ ಶೈಲಜಾ, ಪೊಲೀಸ್ ಇನ್ಸ್ಪೆಕ್ಟರ್ ಸಿದ್ದೇಗೌಡ ಹಾಗೂ ಅಧಿಕಾರಿಗಳ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









