ಕೊತ್ತನೂರು ಪೊಲೀಸ್ ಠಾಣಾ ಸರಹದ್ದಿನ ಬೈರತಿ ಗ್ರಾಮದಲ್ಲಿ ವಾಸವಾಗಿರುವ ಪಿರಿಯಾದುದಾರರು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು ದೂರಿನಲ್ಲಿ ಪಿರಿಯಾದುದಾರರು 2025ನೇ ಸಾಲಿನ ಜನವರಿ ಮಾಹೆಯಲ್ಲಿ ಕೊಠಡಿಯ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕೊನೆಯದಾಗಿ ನೋಡಿರುತ್ತಾರೆ ನಂತರ ಮೇ ಮಾಹೆಯಲ್ಲಿ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನೋಡಲಾಗಿ, ಚಿನ್ನಾಭರಣಗಳು ಕಳುವಾಗಿರುವುದು ಕಂಡು ಬಂದಿದೆ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಕೆಲಸಗಾರರ ಮೇಲೆ ಅನುಮಾನವಿರುವದಾಗಿ ತಿಳಿಸಿರುತ್ತಾರೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಪಿರ್ಯಾದುದಾರರ ಅಣ್ಣನ ಮಗಳನ್ನು ಠಾಣೆಗೆ ಕರೆಸಿ, ಆಕೆಯನ್ನು ವಿಚಾರಣೆಗಳು ಪಡಿಸಲಾಗಿ, ಆಕೆಯ ಸ್ನೇಹಿತನೊಂದಿಗೆ ಸೇರಿಕೊಂಡು ಈ ಕೃತ್ಯ ವೆಸಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾಳೆ. ಹಾಗೂ ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಆಕೆಯೂ ಮತ್ತಿಬ್ಬರ ಸ್ನೇಹಿತರಿಗೆ ನೀಡಿ ಅವುಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾರ್ಪಡಿಸಿ, ಮಾರಾಟ ಮಾಡಿ ಹಣವನ್ನು ಪಡೆಯುತ್ತಿದ್ದುದ್ದಾಗಿ ತಿಳಿಸಿರುತ್ತಾಳೆ. ಮತ್ತು ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಮತ್ತಿಬ್ಬರು ಸ್ನೇಹಿತರ ಬಗ್ಗೆಯೂ ಸಹ ಮಾಹಿತಿಯನ್ನು ನೀಡಿರುತ್ತಾಳೆ. ಅದೇ ದಿನ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತನೋರ್ವ ನನ್ನು ಆತನು ವಾಸವಿರುವ ಕೊತ್ತನೂರಿನ ಮನೆಯಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೋಪ್ಪಿ ಕೊಂಡಿರುತ್ತಾರೆ.

ನಾಲ್ವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾರ್ಪಡಿಸಿ, ಚಿಕ್ಕಪೇಟೆಯ ಎರಡು ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. ಉಳಿದ ಚಿನ್ನಾಭರಣ ಹಾಗೂ ನಗದನ್ನು ಕತ್ತನೂರಿನ ವಾಸವಿರುವ ಆರೋಪಿಗಳಿಬ್ಬರ ಮನೆಯಲ್ಲಿಟ್ಟಿರುವುದಾಗಿ ತಿಳಿಸಿರುತ್ತಾರೆ.
ತನಿಖೆಯನ್ನು ಮುಂದುವರಿಸಿ ಚಿಕ್ಕಪೇಟೆಯ ಎರಡು ಜ್ಯುವೆಲರಿ ಅಂಗಡಿಗಳಿಂದ ಮತ್ತು ಕೊತ್ತನೂರಿನಲ್ಲಿ ವಾಸವಿರುವ ಆರೋಪಿಗಳಿಬ್ಬರ ವಾಸದ ಮನೆಯಿಂದ ಒಟ್ಟು 548 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ಮತ್ತು 10 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 65,00,000/-( ಆರವತ್ತೈದು ಲಕ್ಷ ರೂಪಾಯಿ).
ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಯುತರಾದ ವಿ.ಜೆ.ಸಜಿತ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಎಂ.ಮುರುಗೇಂದ್ರಯ್ಯ ರವರ ನೇತೃತ್ವದಲ್ಲಿ, ಕೊತ್ತನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ.ಎಂ.ಎಲ್.ಚೇತನ್ ಕುಮಾರ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









