ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿ ಯ ಪಿ ಜಿ ಒಂದರಲ್ಲಿ ವಾಸವಿರುವ ಪಿರಿಯಾದುದಾರರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ
ದೂರಿನಲ್ಲಿ ಪಿರಿಯಾದುದಾರರು ತಾನಸರಹದ್ದಿನ ಹೂಡಿಯಲ್ಲಿರುವ ಹೋಂಡಾ ಶೋರೂಮ್ ಮುಂಬಾಗ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರಿಯಾದುದಾರರ ಕೈಯಲ್ಲಿದ್ದ ಮೊಬೈಲ್ ಫೋನನ್ನು ಕಿತ್ತುಕೊಂಡು ಪರಾರಿ ಆಗಿರುತ್ತಾರೆ ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮಿದಾರರಿಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ಹೂಡಿ ಬಸ್ ನಿಲ್ದಾಣದ ಬಳಿ ಪ್ರಕರಣದಲ್ಲಿ ಸುಲಿಗೆಯಾಗಿದ್ದ ಮೊಬೈಲ್ ಫೋನ್ ಸಮೇತ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಲಾಗಿ ಆ ಪ್ರಕರಣದಲ್ಲಿ ಮೊಬೈಲ್ ಫೋನ್ ಸೋಲಿಗೆ ಮಾಡಿರುವುದಾಗಿ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ತನ್ನ ಸಹಚರರಾದ ಮತ್ತಿಬ್ಬರೊಂದಿಗೆ ಸೇರಿಕೊಂಡು ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದ ಪೊಲೀಸರು ಸುಲಿಗೆ ಮಾಡುತ್ತಿದ್ದ ಮೊಬೈಲ್ ಫೋನ್ ಗಳನ್ನು ಆರೋಪಿಯು ಸ್ನೇಹಿತನೊಬ್ಬನ ಮುಖಾಂತರ ಮತ್ತೆ ಇಬ್ಬರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ಹಾಗೂ ಕೃತಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಹೆಬ್ಬಾಳದ ಸಹಕಾರ ನಗರದಲ್ಲಿ ವಾಸವಿರುವ ಆತನ ತಂಗಿಯ ಗಂಡನಿಗೆ ನೀಡಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ
ತನಿಖೆಯನ್ನು ಮುಂದುವರಿಸಿದ ಮಹದೇವಪುರ ಪೊಲೀಸರು ಆರೋಪಿಯು ಸ್ನೇಹಿತನ ಮುಖಾಂತರ ಮತ್ತಿಬ್ಬರು ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ ಸುಮಾರು 79 ವಿವಿಧ ಕಂಪನಿಯ ಮೊಬೈಲ್ ಫೋನ್ ಗಳನ್ನು ಹಾಗೂ ಆತನ ತಂಗಿಯ ಗಂಡನಿಗೆ ನೀಡಿದ್ದ ಕೃತಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡರು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು ಅವರುಗಳ ಪತ್ತೆಕಾರ್ಯ ಮುಂದುವರೆದಿದೆ ಎಂದು ಮಹದೇವಪುರ ಪೊಲೀಸರು ತಿಳಿಸಿರುತ್ತಾರೆ
ಈ ಪ್ರಕರಣದ ಆರೋಪಿಯ ಬಂದನದಿಂದ 20 ಲಕ್ಷ ಮೌಲ್ಯದ 80 ಮೊಬೈಲ್ ಫೋನ್ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿರುತ್ತಾರೆ. ಹಾಗೂ ಈ ಪ್ರಕರಣದ ಆರೋಪಿಯ ಬಂಧನದಿಂದ ಮಹದೇವಪುರ ಪೊಲೀಸ್ ಠಾಣೆಯ ಆರು ಮೊಬೈಲ್ ಫೋನ್ ಸುಲಿಗೆ ಪ್ರಕರಣಗಳು ಪತ್ತೆ ಆಗಿರುತ್ತವೆ
ಈ ಕಾರ್ಯಚರಣೆಯನ್ನು ವೈಟ್ಫೀಲ್ಡ್ ಡಿಸಿಪಿ ಕೆ ಪರಶುರಾಮ್ ಐಪಿಎಸ್, ಎಸಿಪಿ ವೈಟ್ಫೀಲ್ಡ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮಹದೇವಪುರ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ಪ್ರವೀಣ್ ಬಾಬು ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









