ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಸರಹಳ್ಳಿಯ ಮಲ್ಲಸಂದ್ರ ಪೈಪ್ ಲೈನ್ ರಸ್ತೆಯಲ್ಲಿ ವಾಸವಿರುವ ದೂರುದಾರರು ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಆಗಿರುವ ಬಗ್ಗೆ ದೂರನ್ನು ದಾಖಲಿಸಿರುತ್ತಾರೆ
ದೂರಿನಲ್ಲಿ ಬೆಳಗ್ಗೆ ಮನೆಯ ಮುಂಬಾಗಿಲಿಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು ಸಂಜೆ ವಾಪಸ್ ಮನೆಗೆ ಬಂದು ನೋಡಲಾಗಿ ಯಾರೋ ಕೊಠಡಿಯ ಬೀರುವಿನ ಲಾಕರನ್ನು ಮೀಟಿ ಲಾಕರ್ ನಲ್ಲಿಟ್ಟಿದ್ದ 19 ಗ್ರಾಂ ಚಿನ್ನಾಭರಣ ಮತ್ತು 1,56,000 ನಗದು ಹಾಗೂ ಕೆಲವೊಂದು ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ದಾಖಲಿಸಿರುತ್ತಾರೆ
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಬಾಗಲಗುಂಟೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಜಾಲಹಳ್ಳಿ ಕ್ರಾಸ್ ಬಳಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳ ಪಡಿಸಿದ ಪೊಲೀಸರು ಈ ಪ್ರಕರಣದಲ್ಲಿ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ
ಆತನು ನೀಡಿದ ಮಾಹಿತಿ ಮೇರೆಗೆ ಆರೋಪಿಯ ಸಹೋದರಿಯರು ಪ್ರಕರಣದಲ್ಲಿ ಕಳುವಾಗಿದ್ದ ದಾಖಲಾತಿಗಳನ್ನು ಠಾಣೆಗೆ ತಂದು ನೀಡಿದ್ದು ಈ ಕೃತ್ಯದಲ್ಲಿ ಇನ್ನೂ ನಾಲ್ವರು ಸಹಚರರು ಭಾಗಿಯಾಗಿರುವುದಾಗಿ ಆರೋಪಿಯು ಮಾಹಿತಿ ನೀಡಿದ್ದು
ಆರೋಪಿಯು ನೀಡಿದ ಮಾಹಿತಿ ಮೇರೆಗೆ ಯಶವಂತಪುರದ ಗೋವರ್ಧನ್ ಟಾಕೀಸ್ ಬಳಿ ನಾಲ್ವರು ವ್ಯಕ್ತಿಗಳನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರನ್ನು ವಿಚಾರಣೆಗಳ ಪಡಿಸಿ ಈ ಪ್ರಕರಣದಲ್ಲಿ ಚಿನ್ನಾಭರಣ ನಗದು ಹಾಗೂ ದಾಖಲಾತಿಗಳನ್ನು ಕಳುವು ಮಾಡಿರುವುದಾಗಿ ತಪ್ಪೋಪ್ಪಿ ಕೊಂಡಿರುತ್ತಾರೆ
ಈ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ಸುಧೀರ್ಘವಾಗಿ ವಿಚಾರಣೆಗಳ ಪಡಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತ ಒಬ್ಬನ ಸಹೋದರಿಯೇ ಈ ಕೃತ್ಯವನ್ನು ಮಾಡಿಸಿದ್ದಾಗಿ ತಿಳಿಸಿರುತ್ತಾರೆ. ಹಾಗೂ ಆಕೆಯ ಬಗ್ಗೆ ಮಾಹಿತಿಯನ್ನು ನೀಡಿದ್ದು ಮತ್ತು ಪ್ರಕರಣದಲ್ಲಿ ಕಳುವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡಿನ ತಿರುಚಿ ಆಂಧ್ರಪ್ರದೇಶದ ಪೆರುಪಳ್ಳಿಯ ಇರುವೆ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ
ತನಿಖೆಯನ್ನು ಮುಂದುವರಿಸಿ ತಮಿಳುನಾಡಿನ ತಿರುಚಿ ಆಂಧ್ರ ಪ್ರದೇಶದಲ್ಲಿ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ 10 ಲಕ್ಷ ಮೌಲ್ಯದ 99 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡರು.
ಈ ಕಾರ್ಯಚರಣೆಯನ್ನು ನಾಗೇಶ್ ಡಿ ಎಲ್ ಐಪಿಎಸ್ ಉಪ ಪೊಲೀಸ್ ಆಯುಕ್ತರು ವಾಯುವ್ಯ ವಿಭಾಗ ಬೆಂಗಳೂರು ನಗರ ಇವರ ಮಾರ್ಗದರ್ಶನದಲ್ಲಿ ಅಶೋಕ್ ಎಂಎಸ್ ಎಸಿಪಿ ಪೀಣ್ಯ ಉಪ ವಿಭಾಗ ರವರ ನೇತೃತ್ವದಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹನುಮಂತರಾಜು ಎಂ ಹಾಗೂ ಅಧಿಕಾರಿ ಸಿಬ್ಬಂದಿಯವರ ತಂಡ ಪ್ರಕರಣವನ್ನು ಭೇದಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ
ನಮ್ಮ ಪೊಲೀಸ್ ನ್ಯೂಸ್









