ಬೆಂಗಳೂರು ನಗರದ ಸಿಸಿಬಿ ಮತ್ತು ಸೈಬರ್‌ಕ್ರೈಂ ಪೊಲೀಸ್ ಠಾಣೆಯು ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ವೋಡಾಫೋನ್ ಐಡಿಯಾ (ವಿ.ಐ.) ಸಹಯೋಗದೊಂದಿಗೆ ಅಕ್ರಮವಾಗಿ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಜಾಲದ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫೇಸ್-2, ನಾಯ್ಡು ಲೇಔಟ್‌ನ ವಸತಿ ಗೃಹವೊಂದರಲ್ಲಿ ನಡೆಸುತ್ತಿದ್ದ ಡೇಟಾ ಸೆಂಟರ್ ಮೇಲೆ ದಾಳಿ ನಡೆಸಲಾಯಿತು.ಈ ಕಾರ್ಯಾಚರಣೆಯಲ್ಲಿ 28 ಸಿಮ್ ಬಾಕ್ಸ್‌ಗಳು, ವಿವಿಧ ಕಂಪನಿಗಳ 1193 ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್ ಮತ್ತು ಇತರೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ ಸುಮಾರು 40,00,000/- (ನಲವತ್ತು ಲಕ್ಷ ರೂಪಾಯಿಗಳು) ಎಂದು ಅಂದಾಜಿಸಲಾಗಿದೆ.ಆರೋಪಿ ಕೇರಳ ಮೂಲದವನಾಗಿದ್ದು, ದುಬೈನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಿದೆ. ಆತನ ಪತ್ತೆ ಕಾರ್ಯ ಮುಂದುವರೆದಿದೆ.

ಬೆಂಗಳೂರು ನಗರ ಪೋಲಿಸರಿಂದ ಒಂದು ಮನವಿ ನಗರದ ಎಲ್ಲಾ ಡೇಟಾ ಸೆಂಟರ್‌ಗಳು ತಮ್ಮ ಮೂಲಸೌಕರ್ಯಗಳನ್ನು ಪರಿಶೀಲಿಸಿ, ಅಕ್ರಮ ಸಿಮ್ ಬಾಕ್ಸ್‌ಗಳು ಕಂಡುಬಂದಲ್ಲಿ ತಕ್ಷಣವೇ ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.







