Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಗ್ರಾಹಕರ ಸೋಗಿನಲ್ಲಿ ಬಂದು ಕೋಟ್ಯಂತರ ಮೌಲ್ಯದ ಚಿನ್ನ ದೋಚಿದ್ದ ಖದೀಮರ ಬಂಧನ

CREDOPRESS MEDIA PVT LTD by CREDOPRESS MEDIA PVT LTD
June 17, 2026
in Bengaluru City Police,CREDOPRESS,Crime News,J. JOHN PREM EDITOR,Karnataka News,Karnataka State Police,Latest News,Namma Police,Namma Police News,National News
0
ಗ್ರಾಹಕರ ಸೋಗಿನಲ್ಲಿ ಬಂದು ಕೋಟ್ಯಂತರ ಮೌಲ್ಯದ ಚಿನ್ನ ದೋಚಿದ್ದ ಖದೀಮರ ಬಂಧನ
0
SHARES
6
VIEWS
Share on FacebookShare on Twitter

ಗ್ರಾಹಕರ ಸೋಗಿನಲ್ಲಿ ಬಂದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1 ಕೋಟಿ 64 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 8 ಗ್ರಾಂ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಮೇ 16 ರಂದು ಅವೆನ್ಯೂ ರಸ್ತೆಯ ಚಿಕ್ಕಪೇಟೆ ನಿವಾಸಿಯೊಬ್ಬರು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಎಂಟರ್‌ಪ್ರೈಸಸ್‌ವೊಂದರ ಮ್ಯಾನೇಜರ್ ಮತ್ತು ಸಿಬ್ಬಂದಿ, ತಮಗೆ ಸಗಟು ದರದಲ್ಲಿ ಚಿನ್ನಾಭರಣ ಬೇಕೆಂದು ನಂಬಿಸಿ ಸುಮಾರು 1 ಕೆಜಿ 514 ಗ್ರಾಂ ಚಿನ್ನವನ್ನು ಕಛೇರಿಗೆ ತರಿಸಿಕೊಂಡಿದ್ದರು. ಬಳಿಕ ಆಭರಣಗಳ ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಇಡೀ ಚಿನ್ನದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದರು. ಈ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ವಂಚನೆ ಮತ್ತು ಕಳವು ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು. ಮೇ 18 ರಂದು ಶೇಷಾದ್ರಿಪುರಂನ ಆನಂದ್ ರಾವ್ ಸರ್ಕಲ್ ಫ್ಲೈ ಓವರ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮೊದಲ ಆರೋಪಿಯನ್ನು ವಶಕ್ಕೆ ಪಡೆದರು. ಆತನನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಈ ಕೃತ್ಯದಲ್ಲಿ ಮಹಾರಾಷ್ಟ್ರದ ನಂಟಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು ಮುಂಬೈಗೆ ಧಾವಿಸಿ, ಅಲ್ಲಿನ ಪ್ರಾರ್ಥನಾ ಸಮಾಜದ ಬಳಿ ಮತ್ತೊಬ್ಬ ಸಹಚರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ಆರೋಪಿಗಳು ಕದ್ದ ಚಿನ್ನದ ಪೈಕಿ 220 ಗ್ರಾಂ ಚಿನ್ನವನ್ನುಮುಂಬೈನ ಜವೇರಿ ಬಜಾರ್‌ನಲ್ಲಿ ಮಾರಾಟ ಮಾಡಿದ್ದರು. ಪೊಲೀಸರು ಅಲ್ಲಿಂದಲೇ ಆ ಚಿನ್ನವನ್ನು ಗಟ್ಟಿಯ ರೂಪದಲ್ಲಿ ವಶಪಡಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, ಉಳಿದ ಚಿನ್ನಾಭರಣಗಳನ್ನು ಆರೋಪಿಗಳು ಬೆಂಗಳೂರಿನ ಚಿಕ್ಕಪೇಟೆ, ಅವಲಹಳ್ಳಿ ಮತ್ತು ಗುಟ್ಟಹಳ್ಳಿಯಲ್ಲಿರುವ ತಮ್ಮ ಸ್ನೇಹಿತರ ಮನೆಗಳಲ್ಲಿ ಬಚ್ಚಿಟ್ಟಿದ್ದರು. ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಅಲ್ಲಿಂದಲೂ 788 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಕೋರ್ಟ್ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಶ್ರೀಮತಿ ಪ್ರಭಾವತಿ ಪಾಂಡುರಂಗ ಅವರ ನೇತೃತ್ವದಲ್ಲಿ, ಮಲ್ಲೇಶ್ವರಂ ಇನ್ಸ್‌ಪೆಕ್ಟರ್ ಶ್ರೀಮತಿ ಭಾಗ್ಯವತಿ ಜೆ. ಬಂಟಿ ಮತ್ತು ಅವರ ದಕ್ಷ ಸಿಬ್ಬಂದಿ ವರ್ಗ ಈ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    Tags: Bengaluru City PoliceIndian Police NewsKarnataka NewsLatest NewsMalleshwaram PoliceNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    Bengaluru City Police

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    June 22, 2026
    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    CREDOPRESS

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    June 19, 2026
    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ
    Bengaluru City Police

    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    June 19, 2026
    Next Post
    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Bagalkot district police B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Karwar Police Kodagu Police Kolar Police Konanakunte Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    • ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    • ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved