ಭಾರತ ದೇಶದಲ್ಲಿ ಕ್ರಿ.ಶ 1600 ರಲ್ಲಿಪಾಶ್ಚಿಮಾತ್ಯ ದೇಶಗಳು ಭಾರತ ದೇಶಕ್ಕೆ ವ್ಯಾಪಾರಕ್ಕೆಂದು ಆಗಮಿಸಿ, ತಮ್ಮ ದೇಶದ ಹಾನಿಕಾರಕ ಬೆಳೆ ತಂಬಾಕನ್ನು ನಮ್ಮ ದೇಶದಕ್ಕೆ ಪರಿಚಯಿಸಿದರು. ಈಗ ಭಾರತ ದೇಶವು ತಂಬಾಕು ಉತ್ಪಾದನೆಯಲ್ಲಿ ಮತ್ತು ಬಳಕೆಯಲ್ಲಿ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದ್ದು, ತಂಬಾಕು ಸೇವನೆಯಿಂದ ಕ್ಯಾನ್ಸರ್ ದಂತಹ ಭಯಾನಕ ಕಾಯಿಲೆಗಳಿಂದ ವಿಶ್ವದಾದ್ಯಂತ ಪ್ರತಿ ವರ್ಷ 60 ಲಕ್ಷ ಜನರು ತಂಬಾಕಿನಿಂದ ಸಾವನ್ನಪ್ಪುತ್ತಿದ್ದು, ಜಿಲ್ಲೆಯಲ್ಲಿ ಇದನ್ನು ತಡೆಗಟ್ಟಲು ಬೀದರ್ ಜಿಲ್ಲಾ ಪೊಲೀಸರಿಂದ ಪ್ರಸ್ತುತ ವರ್ಷದಲ್ಲಿ COTPA ಕಾಯ್ದೆ 2003 ರ ಅಡಿ 14 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 303 ಸ್ಥಳ ದಂಡ ವಿಧಿಸಿ 32,500=00 ರೂ ದಂಡ ವಸೂಲಿ ಮಾಡಲಾಗಿದೆ.

ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೀದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೀದರ್. ಇವರ ಸಂಯುಕ್ತಾಶ್ರಯದಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ ಕೋಪ್ಪಾ- 2023 ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಅಧ್ಯಕ್ಷತೆಯಲ್ಲಿ ತರಬೇತಿಯನ್ನು ರಾಜ್ಯ ತಂಬಾಕು ನಿಯಂತ್ರಣ ಘಟಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಮಹಾತೇಂಶ. ಬಿ. ಉಳ್ಳಾಗಡ್ಡಿ. COTPA ಕಾಯ್ದೆ- 2003ರಬಗ್ಗೆ ತರಬೇತಿ ನೀಡಿದರು.
ತರಬೇತಿಯಲ್ಲಿ ಜೀದರ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಯವರು, ಜಿಲ್ಲಾ ಸಲಹೆಗಾರ ಶ್ರೀ ಪ್ರಕಾಶ್ ವಗ್ಗೆ, ಜಿಲ್ಲಾ ಸಮಾಜ ಕಾರ್ಯಕರ್ತರಾದ ಶ್ರೀ ಮಹೇಶ್ ಬಿ, ಆಪ್ತ ಸಮಾಲೋಚಕರಾದ ಶ್ರೀ ಸುದರ್ಶನ್ ರವರು ಉಪಸ್ಥಿತರಿದ್ದರು.









