On 15th June 2024, the Bengaluru City Police, in collaboration with the Nightingales Medical Trust, observed World Elder Abuse Awareness Day at the Police Commissioner’s office. During this event, the Police Commissioner Bengaluru City, inaugurated a training program on digital literacy and cyber-security aimed at supporting senior citizens.
This program, organized monthly across all zones/Divisions in Bengaluru, aims to educate and empower elderly citizens. In October, digital literacy and cyber-security sessions were conducted in Malleswaram and Sahakar Nagar. Around 180 senior citizensattended these sessions and expressed appreciation for the valuable information provided.
Similarly, on Saturday, November 9, 2024, a training session for senior citizens on digital literacy and cyber-security will be held from 10:00 AM to 1:00 PM at CSI Church, Byrathi Cross, Hennur Road, Kothanur, Bengaluru- 77. All senior citizens are encouraged to take advantage of this opportunity.
For more information, please contact:
Phone: 080-23352833
Mobile: 7899241090

ಹಿರಿಯರ ನಾಗರಿಕರಿಗೆ ಉಚಿತ ಡಿಜಿಟಲ್ ಸಾಕ್ಷರತೆ ಹಾಗೂ ಸೈಬರ್ ಸುರಕ್ಷತೆ ತರಬೇತಿ ಕುರಿತು.
ದಿನಾಂಕ:15.06.2024 ರಂದು ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸಹಯೋಗದೊಂದಿಗೆ, ವಿಶ್ವ ಹಿರಿಯರ ನಿಂದನ ಜಾಗೃತಿ ದಿನವನ್ನು ಪೊಲೀಸ್ ಆಯುಕ್ತ ರವರ ಕಛೇರಿಯಲ್ಲಿ ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯರಿಗೆ ಅನುಕೂಲವಾಗುವಂತಹ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆಯ ಸುರಕ್ಷತೆಯ ತರಬೇತಿಕಾರ್ಯಕ್ರಮವನ್ನು ಮಾನ್ಯ ಪೊಲೀಸ್ ಆಯುಕ್ತರವರು ಚಾಲನೆಯನ್ನು ನೀಡಿರುತ್ತಾರೆ. ಅದರಂತೆ ಪ್ರತಿ ತಿಂಗಳು, ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಿ ಹಿರಿಯ ನಾಗರಿಕರಿಗೆ ಅರಿವನ್ನು ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿತ್ತು.
ಅದೇ ರೀತಿ ಅಕ್ಟೋಬರ್ ಮಾಹೆಯಲ್ಲಿ ಮಲ್ಲೇಶ್ವರಂ ಮತ್ತು ಸಹಕಾರ ನಗರದಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಸುಮಾರು 180 ಜನ ಹಿರಿಯ ನಾಗರಿಕರು ಭಾಗವಹಿಸಿ, ಉಪಯುಕ್ತವಾದ ಮಾಹಿತಿಯನ್ನು ಪಡೆದುಕೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ಇದೇ ಪ್ರಕಾರ 2024 ರ ನವೆಂಬರ್ ತಿಂಗಳ 9 ನೇ ತಾರೀಖು ಶನಿವಾರ ಬೆಳಗ್ಗೆ 10-00 ರಿಂದ ಮಧ್ಯಾಹ್ನ 1-00 ಗಂಟೆಯ ವರೆಗೆ ಸಿ.ಎಸ್.ಐ ಚರ್ಚ್, ಬೈರತಿ ಕ್ರಾಸ್, ಹೆಣ್ಣೂರು ರಸ್ತೆ, ಕೊತ್ತನೂರು, ಬೆಂಗಳೂರು-77 ಇಲ್ಲಿ ಹಿರಿಯ ನಾಗರಿಕರಿಗೆ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆ ತರಬೇತಿ ನೀಡಲಾಗುತ್ತಿದೆ. ಹಿರಿಯ ನಾಗರಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:080-23352833. 3.7899241090.










