ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರ ಮುಂಭಾಗ ನಿಲ್ಲಿಸಿದ್ದ ಬಸ್ನಲ್ಲಿ 55 ಲಕ್ಷ ರೂ ನಗದು ಕಳುವು ಮಾಡಿದ್ದ ಮಧ್ಯಪ್ರದೇಶದ ನಾಲ್ವರು ಕತರ್ನಾಕ್ ಕಳ್ಳರನ್ನು ಬಂಧಿಸಿರುತ್ತಾರೆ.
ವೆಂಕಟೇಶ್ವರ ರಾವ್ ಎಂಬವರು ಬೆಂಗಳೂರಿನ ಮನೆ ಮಾರಾಟ ಮಾಡಿ ಖರೀದಿದಾರರಿಂದ 55 ಲಕ್ಷ ಹಣ ದಾಖಲೆಗಳನ್ನು ಪಡೆದು ಕೆಎಸ್ಆರ್ಟಿಸಿ ಅಂಬಾರಿ ಬಸ್ನಲ್ಲಿ ಹೈದರಾಬಾದ್ ಗೆ ತೆರಳುತ್ತಿದ್ದರು.
ಪೆರೇಸಂದ್ರ ರಾಷ್ಟ್ರೀಯ ಹೆದ್ದಾರಿ ಹೋಟೆಲ್ ಒಂದರ ಬಳಿ ಊಟ ಮಾಡಲು ಬಸ್ ಹೋಟೆಲ್ ಒಂದರ ಬಳಿ ನಿಲ್ಲಿಸಿದ್ದು ಊಟ ಮಾಡಲು ಹೋಗಿದ್ದ ಸಮಯದಲ್ಲಿ ಕಳ್ಳರು ಬಸ್ನಲ್ಲಿದ್ದ 55 ಲಕ್ಷ ನಗದು ಹೊಂದಿದ್ದ ಬ್ಯಾಗನ್ನು ದೋಚಿ ಪರಾರಿ ಯಾಗಿದ್ದರು.

ಈ ಕಳ್ಳತನ ಪ್ರಕರಣವನ್ನು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದು ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು
ಗುಡಿಬಂಡೆ ವೃತ ನಿರೀಕ್ಷಕರಾದ ಡಿ ಎಚ್ ಮುನಿಕೃಷ್ಣ, ಮಂಚೇನಹಳ್ಳಿ ಪಿಎಸ್ಐ ಪುನೀತ್ ನಂಜರಾಯ್, ಸಿ ಎಚ್ ಸಿ ಅರುಣ್, ಸಿಪಿಸಿ ಗಳಾದ ಮೋಹನ್, ಮಂಜು ನಾಯಕ್, ಮಂಜುನಾಥ್ ಸೇರಿದಂತೆ ಹಲವರ ತಂಡ ಮಧ್ಯಪ್ರದೇಶಕ್ಕೆ ತೆರಳಿ ಮಧ್ಯಪ್ರದೇಶದ ಪೊಲೀಸರ ನೆರವನ್ನು ಪಡೆದು ಆರೋಪಿಗಳನ್ನು ಬಂಧಿಸಿ, ದೋಚಿದ್ದ ಅಷ್ಟು ಹಣವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣವನ್ನು ಭೇದಿಸಿದ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್ ಚೌಕ್ಸೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ









