ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲು ಹೋಬಳಿ ಪಾತೂರು ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಕೊಳವೆ ಬಾವಿಗೆ ಅಳವಡಿಸಿದ ಕೇಬಲ್ ಅನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೂರನ್ನು ದಾಖಲಿಸಿರುತ್ತಾರೆ.
ಆರೋಪಿಗಳು ಜಮೀನುಗಳಲ್ಲಿ ಕೊಳವೆಬಾವಿ ಮೋಟರ್ ನಲ್ಲಿರುವ 120 ಅಡಿ ಉದ್ದದ ಕೇಬಲ್ ವೈರ್ಗಳನ್ನು ಕಟ್ ಮಾಡಿಕೊಂಡು ಹೋಗಿದ್ದು ಇದರ ಬಗ್ಗೆ ಜಮೀನುದಾರರು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ತನಿಖೆಯನ್ನು ಮುಂದುವರಿಸಿದ ಪೆರೇಸಂದ್ರ ಪೊಲೀಸರು ಇಬ್ಬರು ಆರೋಪಿಗಳನ್ನು ಕಳುವು ಮಾಡಿದ ಮಾಲ್ ಸಮೇತ ಬಂಧಿಸಿದ್ದು ಮಾಲನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳಿಂದ ಬಂಧನದಿಂದ (ಒಂದು ಲಕ್ಷ ಇಪ್ಪತ್ತು ಸಾವಿರ)1,20,000/-ಮೌಲ್ಯದ,ಒಂದು ದ್ವಿಚಕ್ರ ವಾಹನ, 150 ಮೀಟರ್ ವಿದ್ಯುತ್ ಕೇಬಲ್ ವೈರ್ ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರು ಕುಶಾಲ್ ಚೌಕ್ಸೆ, ಜಗನ್ನಾಥ್ ರೈ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಶಿವಕುಮಾರ್ ಎಸ್ ಚಿಕ್ಕಬಳ್ಳಾಪುರ ಉಪ ವಿಭಾಗ ರವರ ನೇತೃತ್ವದಲ್ಲಿ ಗುಡಿಬಂಡೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನಿಕೃಷ್ಣ, ಪೆರೆಸಂದ್ರ ಪೊಲೀಸ್ ಠಾಣೆಯ ಪಿಎಸ್ಐ ಗುಣವತಿ ಮತ್ತು ಸಿಬ್ಬಂದಿಗಳಾದ ಶ್ರೀನಿವಾಸಪ್ಪ, ಬಾಬಾ ಜಾನ್, ಮಂಜುನಾಥ, ಮುಕುಂದ, ಮಧು ಕುಮಾರ್, ಅಶ್ವತಪ್ಪ ರವರುಗಳು ಈ ಈ ಪ್ರಕರಣದಲ್ಲಿ ಆರೋಪಿತರಿಂದ ಕಳುವಾದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.









