ಕೋಲಾರ ಜಿಲ್ಲೆ, ಮಾಲೂರು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ವೆಸ್ಟ್ರನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರ್ನಬ್ ಎಂಬ ಯುವಕನನ್ನು ರಾತ್ರಿ ಕೆಲಸದ ಪಾಳಿ ಮುಗಿಸಿ ನಡೆದುಕೊಂಡು ಹೋಗುತ್ತಿದ್ದವನನ್ನು ಶಿವಾರ ಪಟ್ಟಣದ ಬಳಿ ಚಾಕುವಿನಿಂದ ಹಿರಿದು ಕೊಲೆ ಮಾಡಿ ಯಾವುದೇ ಸಣ್ಣ ಕುರುಹು ಇಲ್ಲದೆ ಮುಂಬೈಯಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಮೂರು ತಿಂಗಳ ಪರಿಶ್ರಮದಿಂದ ಮಾಲೂರು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ಕ್ರೈಂ ತಂಡವನ್ನು ನಿಖಿಲ್ ಬಿ, ಕೋಲಾರ ಪೊಲೀಸ್ ಅಧೀಕ್ಷಕರು, ಮತ್ತು ಅಪರ ಪೊಲೀಸ್ ಅಧೀಕ್ಷಕರುಗಳಾದ ರವಿಶಂಕರ್ ಹಾಗೂ ಜಗದೀಶ್ ರವರ ಮಾರ್ಗದರ್ಶನದಂತೆ ಮಹಮ್ಮದ್ ಹುಮಾಯುನ್ ನಾಗ್ತೆ, ಪೊಲೀಸ್ ಉಪಾದೀಕ್ಷಕರು ರವರ ನೇತೃತ್ವದಲ್ಲಿ ಮಾಲೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಮಪ್ಪ ಬಿ ಗುತ್ತೇರ್, ಪಿಎಸ್ಐ ಗಳಾದ ಶಾಂತಮ್ಮ, ಗೀತಮ್ಮ, ಎ ಎಸ್ ಐ ರವರಾದ ಹನುಮಾನ್ ಸಿಂಗ್ ರೇಣುಪ್ರಸಾದ್ ಮತ್ತು ರಮೇಶ್ ಬಾಬು ಹಾಗೂ ಸಿಬ್ಬಂದಿಯವರಾದ ಮೂರ್ತಿ, ಅಶೋಕ್, ಮುರಳಿ, ನಾಗಪ್ಪ, ಮೋಹನ್, ನಾಗರಾಜ್, ಶೃತಿ, ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಮುರಳಿ ಹಾಗೂ ಶ್ರೀನಾಥ್ ರವರ ತಂಡವು ಹಲವಾರು ಸಿಸಿಟಿವಿ ದೃಶ್ಯಗಳ ಪರಿಶೀಲನೆ ಹಾಗೂ ಆಧುನಿಕ ತಂತ್ರಜ್ಞಾನದ ಸಹಾಯದ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.







