ಪೊಲೀಸ್ ಇಲಾಖೆಯಲ್ಲಿ ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯದ ಜೊತೆಗೆ ಶಿಸ್ತು ಕಾಪಾಡುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂದು ಬೀದರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕವಾಯತನ್ನು ತೆಗೆದುಕೊಳ್ಳಲಾಯಿತು. ಕವಾಯತ್ತಿನ ಕಮಾಂಡರರಾಗಿ ಶ್ರೀ ಗದ್ದೆಪ್ಪ, ಆರ್.ಪಿ.ಐ ಡಿ.ಎ.ಆರ್ ಘಟಕ ರವರ ನೇತೃತ್ವದಲ್ಲಿ ನಡೆದಿದ್ದು, ಒಟ್ಟು 9 ತುಕಡಿಗಳಿದ್ದು, 1 ನೇ ತುಕಡಿ ಶ್ರೀ ಭರತ, ಎ.ಆರ್.ಎಸ್.ಐ, 2 ನೇ ತುಕಡಿ ಶ್ರೀ ನಾಗೇಂದ್ರ, ಪಿ.ಎಸ್.ಐ ಬ.ಕಲ್ಯಾಣ ಗ್ರಾಮೀಣ ಠಾಣೆ, 3 ನೇ ತುಕಡಿ ಶ್ರೀ ಪ್ರವೀಣ, ಎಮ್.ಡಿ, ಸಾಮಾಜಿಕ ಜಾಲತಾಣ ನಿಗಾ ಘಟಕ, 4 ನೇ ತುಕಡಿ ಶ್ರೀ ಸಿದ್ದಲಿಂಗ, ಪಿ.ಎಸ್.ಐ ಚಿಂತಾಕಿ ಠಾಣೆ, 5 ನೇ ತುಕಡಿ ಶ್ರೀ ಬಸಲಿಂಗಪ್ಪ, ಪಿ.ಎಸ್.ಐ ಹುಮನಾಬಾದ ಸಂಚಾರಿ, 6 ನೇ ತುಕಡಿ ಶ್ರೀ ವಿಶ್ವರಾಧ್ಯ, ಪಿ.ಎಸ್.ಐ ಧನ್ನೂರ ಠಾಣೆ, 7 ನೇ ತುಕಡಿ ಶ್ರೀ ಚಂದ್ರಶೇಖರ್ ನಿರ್ಣೆ, ಪಿ.ಎಸ್.ಐ ಕಮಲನಗರ, 8 ನೇ ತುಕಡಿ ಶ್ರೀ ಮಹೇಂದ್ರ, ಪಿ.ಎಸ್.ಐ ಮನ್ನಾಏಖೇಳಿ ಠಾಣೆ, 9 ನೇ ತುಕಡಿ ಶ್ರೀ, ಚಂದ್ರಶೇಖರ್, ಪಿ.ಎಸ್.ಐ ಕುಶನೂರ ರವರು ತುಕಡಿಯ ನೇತೃತ್ವವನ್ನು ವಹಿಸಿರುತ್ತಾರೆ.

9 ತುಕಡಿಗಳು ಉತ್ತಮ ಕವಾಯತನ್ನು ಪ್ರದರ್ಶಿಸಿದ್ದು, ಅದರಲ್ಲಿ ಶ್ರೀ ಸಿದ್ದಲಿಂಗ, ಪಿ.ಎಸ್.ಐ ಚಿಂತಾಕಿ ಪೊಲೀಸ್ ಠಾಣೆ ರವರ ಕಮಾಂಡಿಂಗ್ ನೇತೃತ್ವದ 4 ನೇ ತುಕಡಿಯು ಅತ್ಯೂತ್ತಮವಾಗಿ ಶಿಸ್ತುಬಧವಾಗಿ ಕವಾಯತ ಪ್ರದರ್ಶನ ಮಾಡಿರುತ್ತಾರೆ. ಶ್ರೀ, ಮಹೇಶ ಮೇಘಣ್ಣವರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ. ಹಾಗು ಹುಮನಾಬಾದ, ಭಾಲ್ಕಿ, ಡಿ.ಎ.ಆರ್ ಪೊಲೀಸ್ ಉಪಾಧೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು, ಜಿಲ್ಲೆಯ ಪೊಲೀಸರು ಶಿಸ್ತನ್ನು ಉತ್ತಮವಾಗಿ ಪ್ರದರ್ಶಿದ್ದು ಸಾರ್ವಜನಿಕರೊಂದಿಗೆಯು ಸಹ ಜನ ಸ್ನೇಹಿ, ಸಮುದಾಯ ಪೊಲೀಸಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯಾಗಿದೆ.









