Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಡ್ರೈವರ್‌ಗಳ ಐಡಿಗಳನ್ನು ಸೃಷ್ಠಿಸಿಕೊಂಡು ವಂಚಿಸುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ.

CREDOPRESS MEDIA PVT LTD by CREDOPRESS MEDIA PVT LTD
December 16, 2024
in National News
0
ಡ್ರೈವರ್‌ಗಳ ಐಡಿಗಳನ್ನು ಸೃಷ್ಠಿಸಿಕೊಂಡು ವಂಚಿಸುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ.
0
SHARES
119
VIEWS
Share on FacebookShare on Twitter



ದಿನಾಂಕ:23/07/2024 ರಂದು ಲಕ್ಕಸಂದ್ರ ವಾಸಿಯಾದ ಪಿರಾದುದಾರರು ಆಗ್ನೆಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದಿಯವರು Smart Shift Logistics Solutions Pvt Ltd. ಎಂಬ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಪಿರಾದಿಯವರಿಗೆ ಅಪರಿಚಿತರು ಪಿರಾದುದಾರರ ಕಂಪನಿಯ ಅಪ್ಲಿಕೇಷನ್ ಆದ PORTER ಎಂಬ ಆಪ್ಲಿಕೇಷನ್‌ನನ್ನು ಬಳಸಿಕೊಂಡು ಫೇಕ್ ಕಸ್ಟಮರ್ ಐಡಿ ಹಾಗೂ ಫೇಕ್ ಡ್ರೈವರ್ ಐಡಿಗಳನ್ನು ಕ್ರಿಯೆಟ್ ಮಾಡಿರುತ್ತಾರೆ. ಈ ರೀತಿ ಫೇಕ್ ಐಡಿ ಬಳಸಿಕೊಂಡು, ಫೇಕ್ ಡ್ರೈವರ್‌ಗಳನ್ನು ಸೆಲೆಕ್ಟ್ ಮಾಡಿಕೊಂಡು, Geo Spoofing ಬಳಸಿಕೊಂಡು ದೂರದ ಸ್ಥಳಗಳಿಗೆ ಆರ್ಡರ್ ಮಾಡಿ ಫೇಕ್ ಕಸ್ಟಮರ್ ಕ್ರಿಯೆಟ್ ಮಾಡಿರುವ ಫೇಕ್ ಡ್ರೈವರ್‌ಗೆ ಹಣವನ್ನು ಅನ್‌ಲೈನ್ ಮೂಲಕ ಕಂಪನಿಯು ಸಂದಾಯ ಮಾಡುತ್ತಿದ್ದು, ಆರ್ಡರ್ ಕ್ಯಾನ್ಸಲ್ ಆದ ಬಳಿಕ, ಕಂಪನಿಯು ಕಸ್ಟಮರ್‌ಗೆ ರೀ ಫಂಡ್ ನೀಡಿದ್ದು, ಈ ಸಮಯದಲ್ಲಿ ಡ್ರೈವರ್ ಆರ್ಡ‌ನ್ನು ಪೂರ್ಣಗೊಳಿಸದೆ PORTER ಕಂಪನಿಯ ಅಪ್ಲಿಕೇಷನ್ ಮೂಲಕ ಕಂಪನಿಗೆ ವಂಚಿಸಿ ಹಣವನ್ನು ಪಡೆಯುತ್ತಿದ್ದರು.


ಇದೇ ರೀತಿ ಕಳೆದ 8 ತಿಂಗಳಿಂದ PORTER ಕಂಪನಿಗೆ ಮೋಸ ಮಾಡಿ, ಒಟ್ಟು 90 ಲಕ್ಷ ಹಣವನ್ನು PORTER ಕಂಪನಿಗೆ ನಷ್ಟವುಂಟು ಮಾಡಿರುತ್ತಾರೆ. ಜುಲೈ ಮಾಹೆಯಲ್ಲಿ ಬಿಸಿನೆಸ್ ಅಡಿಟ್ ಮಾಡುವಾಗ ಕಂಪನಿಗೆ ನಷ್ಟವುಂಟಾದ ಬಗ್ಗೆ ಹಾಗೂ ಪ್ರಾಡ್ ಮಾಡಿದ ಬಗ್ಗೆ ಬೆಳಕಿಗೆ ಬಂದಿರುತ್ತದೆ. ಈ ರೀತಿ ವಂಚಿಸಿ ಮೋಸ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿರುತ್ತಾರೆ. ದೂರನ್ನು ಪಡೆದ ಆತ್ಮೀಯ ವಿಭಾಗದ ಸಿ.ಇ.ಎನ್ ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿ.ಇ.ಎನ್ ಪೊಲೀಸರು ಪಿರಾದುದಾರರ ಕಂಪನಿಯ ಬ್ಯಾಂಕ್ ಖಾತೆದಾರರ ಕೆ.ವೈ.ಸಿ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿದ್ದು, ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಸಂದಾಯವಾಗಿರುವ ಖಾತೆದಾರರ ಕೆ.ವೈ.ಸಿ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟ ವ್ಯಕ್ತಿಗಳ ಮೊಬೈಲ್ ನಂಬರ್‌ ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳು, ತಾಂತ್ರಿಕ ಮಾಹಿತಿಯನ್ನು ಮತ್ತು ಬಾತ್ಮೀದಾರರ ಮುಖಾಂತರ ನಾಲ್ವರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗಿರುತ್ತದೆ.
ಬಳಿ
ಈ ನಾಲ್ವರು ವ್ಯಕ್ತಿಗಳ ಪೈಕಿ ಓರ್ವನನ್ನು ದಿನಾಂಕ:21/09/2024 ರಂದು ಹಾಸನ ಜಿಲ್ಲೆಯ ಹಿರಿಸೇವೆ ವೃತ್ತದ ಒಂದು ಮೊಬೈಲ್ ಫೋನ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ, ಆ ವ್ಯಕ್ತಿಯು ಪೋರ್ಟ‌್ರನಲ್ಲಿ ಡ್ರೈವರ್‌ಗಳು ಕಡಿಮೆ ಇರುವ ಸ್ಥಳದಲ್ಲಿ ಆತನೇ ಕಸ್ಟಮರ್ ಆಗಿ ಆರ್ಡರ್ ಬುಕ್ ಮಾಡಿಕೊಂಡು, ಕಸ್ಟಮರ್ ವ್ಯಾಲೆಟ್‌ನಿಂದ ಪೇ ಮಾಡಿ, ಆತನಿಗೆ ಆರ್ಡರ್ ಬೀಳುವಂತೆ ಮಾಡಿಕೊಂಡು, ನಂತರ ಫೇಕ್ Geo Spoofing ಅಪ್ಲಿಕೇಷನ್ ಮುಖಾಂತರ ಟ್ರಿಪ್ ಸ್ಟಾರ್ಟ್ ಮಾಡಿ ಅಲ್ಲೇ ಎಂಡ್ (ಮುಕ್ತಾಯ) ಎಂದು ಪೋರ್ಟರ್ ಅಪ್ಲಿಕೇಷನ್‌ನಲ್ಲಿ ತಿಳಿಸಿ, ತದನಂತರ ಡ್ರೈವರ್‌ನ ಪೋರ್ಟರ್ ವ್ಯಾಲೆಟ್‌ಗೆ ಹಣ ಬರುತ್ತದೆ. ಹಣ ಬಂದ ತಕ್ಷಣ ವ್ಯಾಲೆಟ್‌ನಿಂದ ವ್ಯಕ್ತಿಯು ಹೊಂದಿರುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ನಂತರ ಫೇಕ್ ಕಸ್ಟಮರ್ PORTER ಡ್ರೈವರ್ ಆರ್ಡ‌್ರನ್ನು ಪೂರ್ಣಗೊಳಿಸದೆ ಟ್ರಿಪ್‌ನ್ನು ಮುಕ್ತಾಯಗೊಳಿಸಿರುತ್ತಾರೆ. ಈ ರೀತಿ ಟ್ರಿಪ್‌ನ್ನು ಪೂರ್ಣಗೊಳಿಸದೆ ಮುಕ್ತಾಯ ಮಾಡಿದಾಗ PORTER ಕಂಪನಿಯು ಕಸ್ಟಮರ್‌ಗೆ ಹಣವನ್ನು ಹಿಂದಿರಿಗಿಸಿರುತ್ತದೆ.

ದಿನಾಂಕ:22/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆತನ ಇತರ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ದಿನಾಂಕ:24/09/2024 ರಂದು ಈ ಪ್ರಕರಣದ ಮತ್ತೋರ್ವ ಆರೋಪಿಯು ಠಾಣೆಗೆ ಹಾಜರಾಗಿದ್ದು, ಆತನಿಗೆ ನೋಟಿಸ್ ಜಾರಿ ಮಾಡಿ, ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:25/09/2024 ರಂದು ಮತ್ತೋರ್ವ ಅರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, 10 ದಿನಗಳ ಕಾಲ ಪೊಲೀಸ್‌ ಅಭಿರಕ್ಷೆಗೆ ಪಡೆಯಲಾಯಿತು.
ದಿನಾಂಕ:30/09/2024 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ದಿನಾಂಕ:03/10/2024 ರಂದು ಮತ್ತಿಬ್ಬರು ಆರೋಪಿಗಳನ್ನು ಬೆಂಗಳೂರ ನಗರದ ಶ್ರೀನಗರ ಮುಖ್ಯ ರಸ್ತೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:04/10/2024 ರಂದು ಈ ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್‌ ಅಭಿರಕ್ಷೆಗೆ ಪಡೆಯಲಾಯಿತು.
ಈ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳು ಇದೇ ರೀತಿ ಬೆಂಗಳೂರಿನಲ್ಲಿದ್ದುಕೊಂಡೆ Geo Spoofing ಮುಖಾಂತರ ನೆರೆರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಹ ಇದೇ ರೀತಿ PORTER ಕಂಪನಿಗೆ ವಂಚಿಸಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ತನಿಖೆ ಮುಂದುವರೆದಿದೆ.
ಆರೋಪಿತರು ಈ ಕೃತ್ಯವೆಸಗಲು ಕೆಲವು ದ್ವಿ-ಚಕ್ರ ವಾಹನಗಳ ನೊಂದಣಿ ನಂಬರ್‌ಗಳನ್ನು ನಮೂದಿಸಬೇಕಾಗಿರುವುದರಿಂದ ಆರೋಪಿಗಳು ಅವರ ಮನಸ್ಸಿಗೆ ಬರುವ ವಾಹನಗಳ ನೋಂದಣಿ ನಂಬರ್‌ಗಳನ್ನು ಬದಲಾಯಿಸಿ ಅದನ್ನು ಅಪ್‌ಲೋಡ್ ಮಾಡಿ ಪೋರ್ಟ್‌‌ ಡ್ರೈವರ್ ಅಕೌಂಟ್‌ಗಳನ್ನು ಕ್ರಿಯೆಟ್ ಮಾಡಿರುತ್ತಾರೆ.
ಇದಕ್ಕಾಗಿ ಬ್ಯಾಂಕ್ ಖಾತೆಗಳ ಅವಶ್ಯಕತೆ ಇದ್ದು, ಆರೋಪಿತರು ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಫೋರ್ಟ್‌‌ ಕಂಪನಿಯಿಂದ ಮೋಸದ ಹಣವನ್ನು ಸಂದಾಯ ಮಾಡಿಸಿಕೊಂಡು ನಂತರ ಅವರಿಂದ ಆರೋಪಿತರು ಫೋನ್ ಪೇ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಈ ರೀತಿ ಮೋಸದಿಂದ ಗಳಿಸಿದ ಹಣವನ್ನು ಆರೋಪಿತರು ಸ್ವಂತ ಊರಿನಲ್ಲಿ ಮನೆ ನಿರ್ಮಾಣಕ್ಕಾಗಿ, ವಿಲಾಸಿ ಜೀವನಕ್ಕಾಗಿ ಮತ್ತು ಸಾಲ ತೀರಿಸಿಕೊಳ್ಳವುದಕ್ಕಾಗಿ ಬಳಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.
ದಿನಾಂಕ:10/10/2024 ರಂದು ಪೊಲೀಸ್ ಅಭಿರಕ್ಷೆಯಲ್ಲಿದ್ದ ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.


ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರಾ ಫಾತಿಮಾ ರವರ ಮಾರ್ಗದರ್ಶನದಲ್ಲಿ ಆಗ್ನೆಯ ವಿಭಾಗ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗೋವರ್ಧನ್ ಗೋಪಾಲ್ ರವರ ನೇತೃತ್ವದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ.ಈಶ್ವರಿ ಪಿ.ಎಸ್ ರವರ ನೇತೃತ್ವದ ,ಸಬ್ ಇನ್ಸ್ಪೆಕ್ಟರ್ ಮಹಿಮುದಾ, ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಹಾಗೂಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಬಿಡದಿ ಪೊಲೀಸರಿಂದ ಗ್ಯಾಸ್‌ ಸಿಲಿಂಡರ್‌ ಕಳ್ಳತನ ಮಾಡಿದ್ದ ಆರೋಪಿತರ ಬಂಧನ
    Bengaluru District Police

    ಬಿಡದಿ ಪೊಲೀಸರಿಂದ ಗ್ಯಾಸ್‌ ಸಿಲಿಂಡರ್‌ ಕಳ್ಳತನ ಮಾಡಿದ್ದ ಆರೋಪಿತರ ಬಂಧನ

    March 13, 2026
    ರಾಜಸ್ಥಾನದಲ್ಲಿ ಅಡಗಿದ್ದ ಖದೀಮನ ಬಂಧನ; ₹3 ಕೋಟಿ ಮೌಲ್ಯದ ವಜ್ರ, ಚಿನ್ನಾಭರಣ ವಶ!
    Bengaluru City Police

    ರಾಜಸ್ಥಾನದಲ್ಲಿ ಅಡಗಿದ್ದ ಖದೀಮನ ಬಂಧನ; ₹3 ಕೋಟಿ ಮೌಲ್ಯದ ವಜ್ರ, ಚಿನ್ನಾಭರಣ ವಶ!

    March 13, 2026
    ನಂಬಿದ ಮನೆಯಲ್ಲೇ ಕೈಚಳಕ ತೋರಿದ್ದ ಕಳ್ಳ ಅಂದರ್!
    Bengaluru City Police

    ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ ಐವರು ಖದೀಮರ ಬಂಧನ

    March 12, 2026
    Next Post
    ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಸಂಪೂರ್ಣ ಸಹಕಾರ: ಸಿ.ಎಂ.ಸಿದ್ದರಾಮಯ್ಯ

    ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಸಂಪೂರ್ಣ ಸಹಕಾರ: ಸಿ.ಎಂ.ಸಿದ್ದರಾಮಯ್ಯ

    ಜಾತಿಗಣತಿ ವರದಿ ಬಗ್ಗೆ ಯಾರು ಆತಂಕ ಪಡುವುದು ಬೇಡ-ಗೃಹ ಸಚಿವ ಪರಮೇಶ್ವರ ಹೇಳಿಕೆ

    ಜಾತಿಗಣತಿ ವರದಿ ಬಗ್ಗೆ ಯಾರು ಆತಂಕ ಪಡುವುದು ಬೇಡ-ಗೃಹ ಸಚಿವ ಪರಮೇಶ್ವರ ಹೇಳಿಕೆ

    ಕನ್ನ ಕಳವು ಮಾಡುತ್ತಿದ್ದ ಐವರು ವ್ಯಕ್ತಿಗಳ ಬಂಧನ,

    ಕನ್ನ ಕಳವು ಮಾಡುತ್ತಿದ್ದ ಐವರು ವ್ಯಕ್ತಿಗಳ ಬಂಧನ,

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Crime News Cyber Crime Davangere police Electronic city Police Govindarajnagar Police Hebbagodi police Hoskote Police Hulimavu Police Indian Police News J. JOHN PREM J. JOHN PREM EDITOR Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police Namma Police Namma Police News Police News Prime News Renukaswamy Sadashivnagar Police SG Palya Police Siddapura Police Siddapura Police Station Vidyaranyapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.4K
      Subscribers
      0.4K
      Subscribers

    Contact Us

    info@nammapolice.com

    Recent News

    • ಬಿಡದಿ ಪೊಲೀಸರಿಂದ ಗ್ಯಾಸ್‌ ಸಿಲಿಂಡರ್‌ ಕಳ್ಳತನ ಮಾಡಿದ್ದ ಆರೋಪಿತರ ಬಂಧನ
    • ಪೊಲೀಸ್ ಸಮವಸ್ತ್ರ ಧರಿಸಿ ಸುಲಿಗೆ ಮಾಡಿದ್ದ ಖದೀಮರ ಬಂಧನ; ₹52.90 ಲಕ್ಷ ಮೌಲ್ಯದ ಸ್ವತ್ತು ವಶ
    • ರಾಜಸ್ಥಾನದಲ್ಲಿ ಅಡಗಿದ್ದ ಖದೀಮನ ಬಂಧನ; ₹3 ಕೋಟಿ ಮೌಲ್ಯದ ವಜ್ರ, ಚಿನ್ನಾಭರಣ ವಶ!

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved