Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರು ವ್ಯಕ್ತಿಗಳ ಬಂಧನ. 29 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 11.60 ಲಕ್ಷ.

CREDOPRESS MEDIA PVT LTD by CREDOPRESS MEDIA PVT LTD
December 16, 2024
in Karnataka News,Karnataka State Police,Latest News
0
ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರು ವ್ಯಕ್ತಿಗಳ ಬಂಧನ. 29 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 11.60 ಲಕ್ಷ.
0
SHARES
10
VIEWS
Share on FacebookShare on Twitter


ಮೈಕೋಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಬಿಳೇಕಳ್ಳಿಯಲ್ಲಿರುವ ಅಪಾರ್ಟ್‌ ಮೆಂಟ್‌ವೊಂದರಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:08/08/2024 ರಂದು ಮೈಕೋಲೇಔಟ್ ಪೊಲೀಸ್‌ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:06/08/2024 ರಂದು ಮಧ್ಯಾಹ್ನ ಅಪಾರ್ಟ್‌ ಮೆಂಟ್ ಮುಂದೆ ಪಿರಾದುದಾರರು ದ್ವಿ-ಚಕ್ರ ವಾಹನವನ್ನು ಲಾಕ್ ಮಾಡಿ, ಕೀಯನ್ನು ಅಲ್ಲಿ ಬಿಟ್ಟು ಹೋಗಿರುತ್ತಾರೆ. ವಾಪಸ್ ಬಂದು ದ್ವಿ-ಚಕ್ರ ವಾಹನವನ್ನು ನೋಡಲಾಗಿ, ಯಾರೋ ಅಪರಿಚಿತರು ದ್ವಿ-ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಮೈಕೋಲೇಔಟ್ ಪೊಲೀಸ್‌ ಠಾಣೆಯಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ಹಾಗೂ ಇದೇ ರೀತಿಯ ಮತ್ತೆರಡು ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ಸಹ ಇದೇ ಅವದಿಯಲ್ಲಿ ದಾಖಲಾಗಿರುತ್ತವೆ.
ಈ ಮೂರು ಪ್ರಕರಣಗಳ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:27/10/2024 ರಂದು ಬನ್ನೇರುಘಟ್ಟ ಮುಖ್ಯರಸ್ತೆಯ ವೇಗಾಸಿಟಿ ಮಾಲ್ ಹಿಂಭಾಗದಲ್ಲಿ ಈ ಪ್ರಕರಣದಲ್ಲಿ ಕಳುವಾಗಿದ್ದ ಒಂದು ದ್ವಿ-ಚಕ್ರ ವಾಹನ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.


ದಿನಾಂಕ:28/10/2024 ರಂದು ಬೆಳಿಗ್ಗೆ ಠಾಣೆಯ ಮತ್ತೊಂದು ಪ್ರಕರಣದಲ್ಲಿ ಕಳುವಾಗಿದ್ದ ಒಂದು ದ್ವಿ-ಚಕ್ರ ವಾಹನ ಸಮೇತ ಇಬ್ಬರು ವ್ಯಕ್ತಿಗಳನ್ನು ಬಿ.ಟಿ.ಎಂ ಲೇಔಟ್‌ನ ಸೋಮೇಶ್ವರ ಕಾಲೋನಿಯಲ್ಲಿ ವಶಕ್ಕೆ ಪಡೆದಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು
ಮಾಡಿರುವುದಾಗಿ ತಿಳಿಸಿರುತ್ತಾರೆ.
ದಿನಾಂಕ:28/10/2024 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 8 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.


ದಿನಾಂಕ:28/10/2024 ರಂದು ದೇವರಚಿಕ್ಕನಹಳ್ಳಿಯ ಮುಖ್ಯರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಠಾಣೆಯ ಮತ್ತೊಂದು ಪ್ರಕರಣದಲ್ಲಿ ಕಳುವಾಗಿದ್ದ ಒಂದು ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಪ್ರಕರಣದಲ್ಲಿ ದ್ವಿ-ಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.


ದಿನಾಂಕ:29/10/2024 ರಂದು ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್‌’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್‌ ಅಭಿರಕ್ಷೆಗೆ ಪಡೆದ ಮೇಲೆ ತಿಳಿಸಿದ ಆರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ ದ್ವಿ-ಚಕ್ರ ವಾಹನಗಳನ್ನು ಮೈಕೋ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಕಡೆಗಳಲ್ಲಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾರೆ.


ದಿನಾಂಕ:29/10/2024 ರಂದು ಎಸ್.ಎನ್.ಎನ್ ರಾಜ್‌ಕ್ ಅಪಾರ್ಟ್‌ ಮೆಂಟ್‌ ವೊಂದರ ಪಕ್ಕದ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 7 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:29/10/2024 ರಂದು ಇಡಬ್ಲ್ಯೂಎಸ್ ಕಾಲೋನಿ, ಎಂ.ಇ.ಎಸ್ ಸ್ಕೂಲ್ ಪಕ್ಕದ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 3 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:29/10/2024 ರಂದು ಸೋಮೇಶ್ವರ ಕಾಲೋನಿಯ ಬ್ರಿಡ್ಜ್ ಬಳಿ ಪಕ್ಕದ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 5 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:30/10/2024 ರಂದು ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಕಳವು ಮಾಡಿ ನಿಲ್ಲಿಸಿದ್ದ 7 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅದೇ ದಿನ ಮೈಕೋ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಆರ್.ಟಿ.ಓ ಕಛೇರಿಯ ಬಳಿ ಕಳವು ಮಾಡಿ ನಿಲ್ಲಿಸಿದ್ದ 4 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಒಟ್ಟಾರೆಯಾಗಿ ಈ ಪ್ರಕರಣದ ಆರೋಪಿಗಳ ಬಂಧನದಿಂದ 29 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 11,60,000/-( ಹನ್ನೊಂದು ಲಕ್ಷದ ಆರವತ್ತು ಸಾವಿರ ರೂಪಾಯಿ).
ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ಮೈಕೋಲೇಔಟ್ ಪೊ. ಠಾಣೆಯ-3 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು, 2) ಮಡಿವಾಳ ಪೆ. ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ 3) ಎಸ್.ಜೆ.ಪಾಳ್ಯ ಪೊ. ಠಾಣೆಯ ದ್ವಿ-ಚಕ್ರ ವಾಹನ ಕಳವು ಪ್ರಕರಣ 4) ತಿಲಕ್‌ನಗರ ಮೊ. ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ 5) ಜೆ.ಪಿ.ನಗರ ಮೊ. ಠಾಣೆಯ-2 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು 6) ತಲಘಟ್ಟಪುರ ಪೊ. ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 7) ಪುಟ್ಟೇನಹಳ್ಳಿ ಮೊ, ಠಾಣೆಯ-2 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು, 8) ಬೇಗೂರು ಪೊ, ಠಾಣೆಯ- ದ್ವಿ-ಚಕ್ರ ವಾಹನ ಕಳವು ಪ್ರಕರಣ, 9) ಹೆಚ್‌.ಎಸ್‌.ಆರ್ ಲೇಔಟ್ ಪೊ. ತಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 10) ಸಿಟಿಮಾರ್ಕೆಟ್ ಪೊ. ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ 11) ಎಸ್.ಜೆ.ಪಾರ್ಕ್ ಮೊ. ತಾಣೆಯ-I ದ್ವಿ-ಚಕ್ರ ವಾಹನ ಕಳವು ಪ್ರಕರಣ, 12) ಕಗ್ಗಲಿಪುರ ಪ್ರೊ. ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ, 13) ಸರ್ಜಾಪುರ ಪೊ. ಠಾಣೆಯ-1 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 17 ದ್ವಿ-ಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ. ಉಳಿದ 12 ದ್ವಿ-ಚಕ್ರ ವಾಹನಗಳ ಮಾಲೀಕರುಗಳ ಪತ್ತೆ ಕಾರ್ಯ ಮುಂದುವರೆದಿದೆ.


ದಿನಾಂಕ:30/10/2024 ರಂದು ಆರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.


ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಸಾರಾ ಫಾತೀಮಾ, ಐಪಿಎಸ್‌ಹಾಗೂ ಮೈಕೋ ಲೇಔಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಶಿವಶಂಕರ ರೆಡ್ಡಿ, ಬಿರವರ ಮಾರ್ಗದರ್ಶನದಲ್ಲಿ ಮೈಕೋ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ರವರಾದ ಶ್ರೀ. ಗಿರೀಶ್.ಎಂ.ಎಲ್ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

    Tags: Bengaluru City PoliceBTM LayoutKarnataka NewsKarnataka State PoliceLatest NewsMico LayoutNamma PoliceNamma Police News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಗಾಂಜಾ, ಹೈಡೋ ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ 11 ವ್ಯಕ್ತಿಗಳ ಬಂಧನ.
    Bengaluru City Police

    ಗಾಂಜಾ, ಹೈಡೋ ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ 11 ವ್ಯಕ್ತಿಗಳ ಬಂಧನ.

    April 1, 2026
    ಸಿಸಿಬಿಯ ಆರ್ಥಿಕ ಅಪರಾಧ ದಳದ ಕಾರ್ಯಾಚರಣೆ
    Bengaluru City Police

    ಸಿಸಿಬಿಯ ಆರ್ಥಿಕ ಅಪರಾಧ ದಳದ ಕಾರ್ಯಾಚರಣೆ

    March 31, 2026
    ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮೊಬೈಲ್ ಕಳ್ಳತನ ಪ್ರಕರಣದ ವಿವರ ವಿವಿಧ ಕಂಪೆನಿಯ 21 ಮೊಬೈಲ್‌ಗಳ ವಶ, ಮೌಲ್ಯ ₹18 ಲಕ್ಷ
    Bengaluru City Police

    ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮೊಬೈಲ್ ಕಳ್ಳತನ ಪ್ರಕರಣದ ವಿವರ ವಿವಿಧ ಕಂಪೆನಿಯ 21 ಮೊಬೈಲ್‌ಗಳ ವಶ, ಮೌಲ್ಯ ₹18 ಲಕ್ಷ

    March 31, 2026
    Next Post
    ದೇವರ ಪೂಜೆಗೆ ಬಂದ ಹುಡುಗಿಯರಿಗೂ ಕಾಮುಕರ ಕಾಟ

    ದೇವರ ಪೂಜೆಗೆ ಬಂದ ಹುಡುಗಿಯರಿಗೂ ಕಾಮುಕರ ಕಾಟ

    ಚಿರತೆ ಉಗುರು, ಹಲ್ಲು ಸಾಗಿಸುತ್ತಿದ್ದ ವ್ಯಕ್ತಿ ಅರೆಸ್ಟ್

    ಚಿರತೆ ಉಗುರು, ಹಲ್ಲು ಸಾಗಿಸುತ್ತಿದ್ದ ವ್ಯಕ್ತಿ ಅರೆಸ್ಟ್

    Free Digital Literacy and Cybersecurity Training for Senior Citizens

    Free Digital Literacy and Cybersecurity Training for Senior Citizens

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Adugodi Police B Dayananada Begur Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hennur Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.4K
      Subscribers
      0.4K
      Subscribers

    Contact Us

    info@nammapolice.com

    Recent News

    • ಗಾಂಜಾ, ಹೈಡೋ ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ 11 ವ್ಯಕ್ತಿಗಳ ಬಂಧನ.
    • ಸಿಸಿಬಿಯ ಆರ್ಥಿಕ ಅಪರಾಧ ದಳದ ಕಾರ್ಯಾಚರಣೆ
    • ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮೊಬೈಲ್ ಕಳ್ಳತನ ಪ್ರಕರಣದ ವಿವರ ವಿವಿಧ ಕಂಪೆನಿಯ 21 ಮೊಬೈಲ್‌ಗಳ ವಶ, ಮೌಲ್ಯ ₹18 ಲಕ್ಷ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved