ಕರ್ನಾಟಕರಾಜ್ಯಕಾನೂನುಸೇವೆಗಳಪ್ರಾಧಿಕಾರ (KSLSA) ಹಾಗೂ ಜಿಲ್ಲಾಕಾನೂನುಸೇವೆಗಳಪ್ರಾಧಿಕಾರ (DLSA) ವತಿಯಿಂದ ಶಾಲೆಯಲ್ಲಿ ಆಯೋಜಿಸಿದ್ದ ನಶಾಮುಕ್ತಭಾರತಅಭಿಯಾನ ಜಾಗೃತಿ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಶಾಲೆಯ ಸಮೀಪ ತಂಬಾಕು ಅಂಗಡಿ ಕಾರ್ಯನಿರ್ವಹಿಸುತ್ತಿರುವ ಕುರಿತು ದೂರು ನೀಡಿದರು.

ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಶಿಕ್ಷಣ ಸಂಸ್ಥೆಯ ನಿಷೇಧಿತ ವ್ಯಾಪ್ತಿಯೊಳಗೆ ತಂಬಾಕು ಅಂಗಡಿ ಕಾರ್ಯನಿರ್ವಹಿಸುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಂಗಡಿಯನ್ನು ಮುಚ್ಚಿಸಿ, ಅಂಗಡಿ ಮಾಲೀಕರ ವಿರುದ್ಧ ಸಿಗರೇಟ್ಮತ್ತುಇತರೆತಂಬಾಕುಉತ್ಪನ್ನಗಳಕಾಯ್ದೆ (COTPA), 2003ರ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿದರು.
COTPAಕಾಯ್ದೆಯಸೆಕ್ಷನ್ 6ರ ಪ್ರಕಾರ ಯಾವುದೇ ಶಿಕ್ಷಣ ಸಂಸ್ಥೆಯ 100ಯಾರ್ಡ್ (ಸುಮಾರು 91.4ಮೀಟರ್) ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, 18ವರ್ಷಕ್ಕಿಂತಕಡಿಮೆವಯಸ್ಸಿನಮಕ್ಕಳಿಗೆತಂಬಾಕುಉತ್ಪನ್ನಗಳನ್ನುಮಾರಾಟಮಾಡುವುದುಕೂಡಕಾನೂನುಬಾಹಿರವಾಗಿದೆ.

ಈ ಸಂದರ್ಭದಲ್ಲಿ KSLSA, DLSA ಹಾಗೂ ಪೊಲೀಸರು ಸಾರ್ವಜನಿಕರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದರು. ಶಾಲೆಗಳ ಸಮೀಪ ತಂಬಾಕು ಮಾರಾಟವಾಗುತ್ತಿದ್ದರೆ ಅಥವಾ ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ತಕ್ಷಣವೇ ಪೊಲೀಸ್ಸಹಾಯವಾಣಿ 112ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆ ಕರೆ ನೀಡಿದರು.
“ಡ್ರಗ್ಸ್‌ಗೆಇಲ್ಲಎನ್ನಿ,ತಂಬಾಕಿಗೆಇಲ್ಲಎನ್ನಿ,ಜೀವನಕ್ಕೆಹೌದುಎನ್ನಿ.”









