ಕೋಣನಕುಂಟೆ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ ಆರೋಪಿತರಿಂದ ಒಂದು ಕೆಜಿ 122 ಗ್ರಾಂ ಗಾಂಜಾ,3 ಕೆಜಿ 44 ಗ್ರಾಂ ಆಶಿಶ್ ಆಯಿಲ್ ಹಾಗೂ ಒಂದು ಕಾರ್ ವಶ,ಒಟ್ಟು 46.10 ಲಕ್ಷ ರೂಗಳ ಕಾರ್ಯಚರಣೆ
ಕೋಣನಕುಂಟೆ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಲ್ಲಸಂದ್ರ ಬಳಿ ನಾರಾಯಣ ನಗರದ ಜೋಡಿ ರಸ್ತೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರು ಆರೋಪಿತರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದರು
ವಶಕ್ಕೆ ಪಡೆದ ಆರೋಪಿತರನ್ನು ವಿಚಾರಣೆ ಪಡಿಸಿದಾಗ ಒಡಿಸ್ಸಾ ರಾಜ್ಯದ ಅಪರಿಚಿತ ವ್ಯಕ್ತಿಯಿಂದ ಈ ಮಾದಕ ವಸ್ತು ಗಳಾದ ಗಾಂಜಾ ಮತ್ತು ಆಶಿಶ್ ಆಯಿಲ್ ಅನ್ನು ಬೇರೆ ಕಡೆಯಿಂದ ತಂದು ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಧಿಕ ಲಾಭಗಳಿಸುವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿರುತ್ತೇವೆ ಎಂದು ಆರೋಪಿಗಳು ಒಪ್ಪಿಕೊಂಡಿರುತ್ತಾರೆ
ಆರೋಪಿಗಳ ವಶದಲ್ಲಿದ್ದ ಒಂದು ಕೆಜಿ 122 ಗ್ರಾಂ ಗಾಂಜಾ ಮತ್ತು 3 ಕೆಜಿ 44 ಗ್ರಾಂ ಆಶಿಶ್ ಆಯಿಲ್ ಅನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ ಇವುಗಳ ಒಟ್ಟು ಮೌಲ್ಯ 46 ಲಕ್ಷದ 10,000 ರೂಪಾಯಿಗಳಾಗಿರುತ್ತದೆ ಜೊತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ವಶ ಪಡೆಸಿಕೊಳ್ಳಲಾಯಿತು
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರದ ಲೋಕೇಶ್ ಐಪಿಎಸ್, ರವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ ರವರ ನೇತೃತ್ವದಲ್ಲಿ ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪಾಪಣ್ಣ ಎಂ ಮತ್ತು ಅಧಿಕಾರಿ ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









