ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಯಾರೋ ಇಬ್ಬರು ವ್ಯಕ್ತಿಗಳು ಒಂದು ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ತಿಳಿಸಿರುತ್ತಾರೆ
ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಶಕ್ಕೆ ಪಡೆದ ವ್ಯಕ್ತಿಗಳಿಂದ 3 ಕೆಜಿ 200 ಗ್ರಾಂ ಗಾಂಜಾ ಎರಡು ಮೊಬೈಲ್ ಫೋನ್, ಒಂದು ತೂಕದ ಯಂತ್ರ, ಒಂದು ದ್ವಿಚಕ್ರ, ವಾಹನವನ್ನು ವಶಪಡಿಸಿಕೊಂಡಿರುತ್ತಾರೆ
ವಶಕ್ಕೆ ಪಡೆದಿದ್ದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಮತ್ತೊಬ್ಬ ಆರೋಪಿ ಯ ಬಗ್ಗೆ ಮಾಹಿತಿ ನೀಡಿದ್ದು ಆರೋಪಿಯು ಗಾಂಜಾ ಮಾರಾಟ ಮಾಡಿಕೊಡುವಂತೆ ಆರೋಪಗಳಿಗೆ ಗಾಂಜಾವನ್ನು ನೀಡುತ್ತಿದ್ದಾನೆಂದು ಆರೋಪಿತರು ಮಾಹಿತಿಯನ್ನು ನೀಡಿರುತ್ತಾರೆ
ಮಾಹಿತಿಯನ್ನು ಆಧರಿಸಿ ಇನ್ನೊಬ್ಬ ಆರೋಪಿಯನ್ನು ಬಿಟಿಎಂ ಲೇಔಟ್ ನಲ್ಲಿ ಬಂಧಿಸಲಾಯಿತು ಬಂದಿತ ಆರೋಪಿಯನ್ನು ವಿಚಾರಿಸಲಾಗಿ ಗಾಂಜಾವನ್ನು ಕಡಿಮೆ ಬೆಲೆಗೆ ಓರ್ವ ಪರಿಚಯದ ವ್ಯಕ್ತಿಯಿಂದ ಪಡೆದಿರುವುದಾಗಿ ತಿಳಿಸಿರುತ್ತಾನೆ
ಈ ಪ್ರಕರಣದಿಂದ ಆರೋಪಿಗಳ ವರ್ಷದಿಂದ 3 ಕೆಜಿ 200 ಗ್ರಾಂ ಗಾಂಜಾ ಎರಡು ಮೊಬೈಲ್ ಫೋನ್ ಒಂದು ತೂಕದ ಯಂತ್ರ ಒಂದು ದ್ವಿಚಕ್ರ ವಾಹನ ಇವುಗಳ ಒಟ್ಟು ಮೌಲ್ಯ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳಾಗಿರುತ್ತದೆ
ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ವಿಜಯ ಸುಜಿತ್ ಐಪಿಎಸ್, ಸಹಾಯಕ ಪೊಲೀಸ್ ಆಯುಕ್ತರು ದೇವನಹಳ್ಳಿ ಉಪವಿಭಾಗ ನವೀನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಕೇಶ್ ಸಿ ಹಾಗೂ ಅಧಿಕಾರಿ ಸಿಬ್ಬಂದಿಯವರು ಈ ಪ್ರಕರಣವನ್ನು ಭೇದಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ









