ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಬಾಭವಾನಿ ದೇವಸ್ಥಾನ ಕಳ್ಳತನ ನಡೆದಿದ್ದು ಸುಮಾರು 2 ಕೆಜಿ 740 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕದ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಲಹಂಕ ಉಪನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ
ಆರೋಪಿಯು ದೇವಸ್ಥಾನದ ಬಾಗಿಲನ್ನು ಮುರಿದು ದೇವಸ್ಥಾನದಲ್ಲಿದ್ದ ಬೆಳ್ಳಿಯ ವಿಗ್ರಹಗಳು ಮತ್ತು ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಹಾಗೂ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿರುತ್ತಾನೆ
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿ ಮೇರೆಗೆ ವಿದ್ಯಾರಣ್ಯಪುರದಲ್ಲಿರುವ ಆರ್ಚ್ ಬಳಿ ಓರ್ವ ವ್ಯಕ್ತಿ ಕಳುವು ಮಾಡಿದ್ದ 500 ಗ್ರಾಂ ಬೆಳ್ಳಿಯ ಹಸು ಮತ್ತು ಕರುವಿನ ವಿಗ್ರಹ, 500 ಗ್ರಾಂ ಬೆಳ್ಳಿಯ ಕಿರೀಟ ಒಂದು ಜೊತೆ ಬೆಳ್ಳಿಯ ದೀಪ, ಮೂರು ತಟ್ಟೆಗಳು,8 ತಾಳಿ,ಒಂದು ಮಾಲೆ ನಾಲ್ಕು ಸಾವಿರ ನಗುದು ಸಮೇತ ಆರೋಪಿಯನ್ನು ಬಂಧಿಸಲಾಯಿತು
ಈ ಕಾರ್ಯಾಚರಣೆಯಲ್ಲಿ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರದ ವಿಜೆ ಸುಜಿತ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರದ ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ಹಾಗೂ ಯಲಹಂಕ ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ಸುಧಾಕರ್ ರೆಡ್ಡಿ ರವರ ಸಿಬ್ಬಂದಿಯವರ ತಂಡ ಈ ಪ್ರಕರಣವನ್ನು ಭೇದಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ









