ದಿನಾಂಕ 16.6.2025 ರಂದು ಪೊಲೀಸ್ ಕಮಿಷನರ್ ಕಚೇರಿಯ ಸಭಾಂಗಣದಲ್ಲಿ ಬೆಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಗಳ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆಯನ್ನು ಹಮ್ಮಿಕೊಂಡಲಾಗಿತ್ತು
ಸಭೆಯಲ್ಲಿ ಹಲವಾರು ಸಲಹಾ ಸೂಚನೆಗಳನ್ನು ಅಧಿಕಾರಿಗಳು ನೀಡಿರುತ್ತಾರೆ
ಸೋಶಿಯಲ್ ಮೀಡಿಯಾ ಸಿಬ್ಬಂದಿಯು ಅಪರಾಧ ವಿಭಾಗ ಹಾಗೂ ಗುಪ್ತ ವಾರ್ತೆ ರವರೊಂದಿಗೆ ಸಮನ್ವಯವಹಿಸಿ ಮಾಹಿತಿಯನ್ನು ಕಲೆ ಹಾಕಬೇಕಾಗಿ ಹಾಗೂ ಸದರಿ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಲಾಗಿದೆ
ಮುಂಬರುವ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಯಾವುದೇ ವ್ಯಕ್ತಿಗಳು ಕಾನೂನು ಬಾಹಿರ ಕೃತ್ಯಗಳಲ್ಲಿ ಮತ್ತು ಸುಳ್ಳು ಮಾಹಿತಿಯನ್ನು ಹರಡುವುದು ದ್ವೇಷ ಭಾಷಣ ಸುಳ್ಳು ಮಾಹಿತಿ ಗಳಿಂದ ಕೋಮು ಸಂಘರ್ಷ ಹಾಗೂ ಶಾಂತಿಭಂಗ ಉಂಟುಮಾಡುವ ವ್ಯಕ್ತಿಗಳ ವಿರುದ್ಧ ಮತ್ತು ಘರ್ಷಣೆಗಳಿಗೆ ಕಾರಣಕರ್ತರಾಗುವ ರವರ ವಿರುದ್ಧ ಕೂಡಲೇ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಹೇಳಲಾಯಿತು.
ವರದಿ
ಶಶಿಕುಮಾರ್ ವಿ








