ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣ ಸರಹದ್ದಿನ ಕತ್ರಿಗುಪ್ಪೆ ಬನಶಂಕರಿ ಮೂರನೇ ಹಂತದಲ್ಲಿ ವಾಸವಿರುವ ಪಿರಿಯಾದುದಾರರು ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ
ಪಿರಿಯಾದುದಾರರು ಮನೆಗೆ ಬಂದು ನೋಡಲಾಗಿ ಕೊಠಡಿಯ ಬೀರುವಿನಲ್ಲಿದ್ದ 24 ಲಕ್ಷ ನಗದು 175 ಗ್ರಾಂಚಿನ್ನಾಭರಣ ಮತ್ತು ಒಂದು ಕೆಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಕಳುವಾಗಿರುವುದಾಗಿ ತಿಳಿಸಿರುತ್ತಾರೆ
ಈ ಪ್ರಕರಣದ ಬೆನ್ನಟ್ಟಿದ ಚನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸರು ವಿವಿದಾಯ ಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆ ಹಾಕಿ, ಠಾಣಾ ಸರಹದ್ದಿನಲ್ಲಿರುವ ರಿಂಗ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡರು
ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಿಸಲಾಗಿ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಪ್ಪು ಒಪ್ಪಿಕೊಂಡಿರುತ್ತಾರೆ ಮತ್ತು ಅವರ ಮತ್ತೊಬ್ಬರ ಸಹಚರರ ಬಗ್ಗೆ ಮಾಹಿತಿಯನ್ನು ಸಹ ನೀಡಿರುತ್ತಾರೆ.
ಪೊಲೀಸರು ಆರೋಪಿತರಿಂದ 175 ಗ್ರಾಂ ಚಿನ್ನಾಭರಣ ಒಂದು ಕೆಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಹಾಗೂ ನಾಲ್ಕು ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ ಎರಡು ರಾಡ್ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡರು
ಪೂರ್ಣ ತನಿಖೆಯನ್ನು ಮುಂದುವರಿಸಿ ಆರೋಪಿಗಳ ಸಹಚಾರರಿಬ್ಬರ ಪೈಕಿ ಓರ್ವ ವ್ಯಕ್ತಿಯನ್ನು ಜಯನಗರ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಭಾಗಿಯಾಗಿ ಕೇಂದ್ರ ಕಾರಾಗೃಹದಲ್ಲಿರುವ ಬಗ್ಗೆ ಮಾಹಿತಿಯನ್ನು ಪಡೆದು ಆತನನ್ನು ಐದು ದಿನಗಳ ಕಾಲ ಪೊಲೀಸ್ ಅಭಿರುಕ್ಷೆಗೆ ಪಡೆದುಕೊಂಡು ಆರೋಪಿಯಿಂದ ಕಳುಮಾಡಿದ್ದ 5 ಲಕ್ಷ ನಗುವುದನ್ನು ವಶಪಡಿಸಿಕೊಳ್ಳಲಾಯಿತು
ಈ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಮತ್ತೋರ್ವ ವ್ಯಕ್ತಿಯ ಪತ್ತೆಕಾರ್ಯ ಪೊಲೀಸರು ಮುಂದುವರೆಸಿರುತ್ತಾರೆ
ಈ ಪ್ರಕರಣದ ಹಾರೋಪಿತರಿಂದ ಒಟ್ಟು 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು
ಈ ಪ್ರಕರಣದ ಮೂವರು ಆರೋಪಿ ಗಳಿಂದ 1), ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಒಂದು ಪ್ರಕರಣ
2) ಹನುಮಂತನಗರ ಪೊಲೀಸ್ ಠಾಣೆಯ ಒಂದು ದ್ವಿಚಕ್ರ ವಾಹನ ಕಳುವು ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ಪತ್ತೆ ಆಗಿರುತ್ತವೆ
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರದ ಲೋಕೇಶ್ ಜಗಲ ಸರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ವಿವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶಮಿದ್ ಪಾಷಾ ರವರ ನೇತೃತ್ವದಲ್ಲಿ ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ
ವರದಿ
ಶಶಿಕುಮಾರ್ ವಿ








