ಚಿಕ್ಕಬಳ್ಳಾಪುರ ಟೌನ್ ಪೊಲೀಸರಿಂದ ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನ ಬಂಧನ 9 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶ
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರಿಂದ ಮನೆ ಕಳವು ಮಾಡುತ್ತಿದ್ದ ಆರೋಪಿತನ ಬಂಧನ
ಆರೋಪಿತನ ಬಂಧನದಿಂದ ಸುಮಾರು 9 ಲಕ್ಷ ಬೆಲೆ ಬಾಳುವ 103 ಗ್ರಾಂ ತೂಕದ ಆಭರಣಗಳನ್ನು ವಶಪಡಿಸಿಕೊಂಡ ಚಿಕ್ಕಬಳ್ಳಾಪುರ ಟೌನ್ ಪೊಲೀಸರು
ಚಿಕ್ಕಬಳ್ಳಾಪುರ ಟೌನ್ ವ್ಯಾಪ್ತಿಗೆ ಒಳಪಡುವ ದೊಡ್ಡ ಭಜನೆ ಮನೆ ರಸ್ತೆ ಚಿಕ್ಕಬಳ್ಳಾಪುರ ಟೌನ್ ಮಂಜುನಾಥ್ ಎಂಬುವರು ಮನೆಯ ಡೋರ್ ಲಾಕ್ ಅನ್ನು ಹಾಕಿಕೊಂಡು ತಮ್ಮ ಸಂಬಂಧಿಕರ ನಾಮಕರಣ ಕಾರ್ಯಕ್ರಮಕ್ಕೆ ಮುಳಬಾಗಿಲಿಗೆ ಹೋಗಿದ್ದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಸುಮಾರು ಎಂಟು ಗಂಟೆಗೆ ಮನೆಗೆ ವಾಪಸ್ ಆಗಿದ್ದು ಆ ನಡುವಿನ ಅಂತರದಲ್ಲಿ ಯಾರೋ ಕಳ್ಳರು ತಮ್ಮ ಮನೆಯಲ್ಲಿರುವ ಬೆಲೆಬಾಳುವ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡಿರುವುದಾಗಿ ದೂರನ್ನು ಸಲ್ಲಿಸಿರುತ್ತಾರೆ
ಪ್ರಕರಣದ ತನಿಖೆಯನ್ನು ಕೈಗೊಂಡ ಚಿಕ್ಕಬಳ್ಳಾಪುರ ಟೌನ್ ಪೊಲೀಸರು ಮಧು ಎಂಬ ಆರೋಪಿಯನ್ನು ವಿಚಾರಿಸಲಾಗಿ ಕಳ್ಳತನ ಮಾಡಿರುವುದು ತಪ್ಪು ಒಪ್ಪಿಕೊಂಡಿರುತ್ತಾನೆ
ಆರೋಪಿತನಿಂದ ಬಂಧನ ದಿಂದ ಸುಮಾರು 8 ಲಕ್ಷದ 75,000 ಗಳು ಬೆಲೆ ಬಾಳುವ 103 ಗ್ರಾಂತೂಕದ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು
ಈ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ಅಧೀಕ್ಷಕರುಗಳಾದ ಜಗನ್ನಾಥ ರಾಯ್, ಚಿಕ್ಕಬಳ್ಳಾಪುರ ಉಪಾದೀಕ್ಷಕರಾದ ಶಿವಕುಮಾರ ಎಸ್ರವರುಗಳ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಪಿ ಸ್ ಐ ಅಮರ್, ಪಿಎಸ್ಐ ರತ್ನಬಾಯಿ, ಸಿಬ್ಬಂದಿಯವರಾದ ಲೋಕೇಶ್, ಫಕ್ಕೀರಜ್ಜ ಗೊಂದಿ, ಮಧುಸೂದನ್, ಲಕ್ಷ್ಮಣ್, ಆಯುಬ್ ಮುಲ್ಲಾ, ನರೇಂದ್ರ, ಅನಿಲ್, ರಾಜಣ್ಣ, ರವೀಂದ್ರ ಹಾಗೂ ಮುನಿಕೃಷ್ಣ ರವರ ತಂಡವು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆ ನಡೆಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಅವರನ್ನು ಮಾನ್ಯ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಕುಶಾಲ್ ಚೌಕ್ಸೆ ರವರು ಕರ್ತವ್ಯವನ್ನು ಪ್ರಶಂಸಿ ಶ್ಲಾಘಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ









