Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಮಾಲಿಕ ಮಲಗಿದ್ದಾಗಲೇ ಮನೆಗಳ್ಳತನ, 75 ಲಕ್ಷ ಮೌಲ್ಯಯುತ ವಸ್ತುಗಳ ಜಪ್ತಿ

CREDOPRESS MEDIA PVT LTD by CREDOPRESS MEDIA PVT LTD
July 1, 2025
in National News
0
ಮಾಲಿಕ ಮಲಗಿದ್ದಾಗಲೇ ಮನೆಗಳ್ಳತನ, 75 ಲಕ್ಷ ಮೌಲ್ಯಯುತ ವಸ್ತುಗಳ ಜಪ್ತಿ
0
SHARES
16
VIEWS
Share on FacebookShare on Twitter

ನಕಲಿ ಕೀಗಳನ್ನು ಬಳಸಿ ಮನೆ ಕನ್ನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿ ಸೇರಿದಂತೆ ಇಬ್ಬರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯ ವ್ಯಾಪ್ತಿಯ ವೆಂಕಟಾಪುರ, ಕೋರಮಂಗಲ 1ನೇ ಹಂತದಲ್ಲಿ ವಾಸವಿರುವ ಪಿರಾದುದಾರರು ತಮ್ಮ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡಿ, ಕೀಯನ್ನು ಬಾಗಿಲಿನಲ್ಲೇ ಮರೆತು ಮಲಗಿದ್ದರು. ಬೆಳಗ್ಗೆ 6:00 ಗಂಟೆಗೆ ಮನೆ ಮಾಲೀಕರು ಎದ್ದು ನೋಡಿದಾಗ,ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

 ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, ಭಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ, ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಪಿ. ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು. ಆತನ ಬಳಿ ಕಳವು ಮಾಡಿದ್ದ 1 ಜೊತೆ ಚಿನ್ನದ ಕಿವಿಯ ಓಲೆ (3 ಗ್ರಾಂ) ಪತ್ತೆಯಾಗಿದೆ. ವಿಚಾರಣೆ ವೇಳೆ, ಆರೋಪಿಯು ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ ಆಭರಣಗಳನ್ನು ಮತ್ತೋರ್ವ ವ್ಯಕ್ತಿಗೆ ನೀಡುತ್ತಿರುವುದಾಗಿ ತಿಳಿಸಿದ್ದು, ಅದೇ ದಿನ ಆತನ ಮಾಹಿತಿ ಮೇರೆಗೆ ಮತ್ತೋರ್ವ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ.
ಬಂಧಿತರಿಂದ ಒಟ್ಟು 779 ಗ್ರಾಂ ಚಿನ್ನಾಭರಣಗಳು, 100 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಟ್ಟಿಗೆ ನಕಲಿ ಕೀಗಳನ್ನು ತಯಾರಿಸುವ ಸಲಕರಣೆಗಳು ಹಾಗೂ 138 ನಕಲಿ ಕೀಗಳೂ ಸೇರಿದ್ದವು. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 75 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಇಬ್ಬರು ಆರೋಪಿಗಳ ಬಂಧನದಿಂದ ಒಟ್ಟು 13 ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ, ಮಡಿವಾಳ ಪೊಲೀಸ್ ಠಾಣೆಯ 3 ಪ್ರಕರಣಗಳು, ಹುಳಿಮಾವು ಪೊಲೀಸ್ ಠಾಣೆಯ 3 ಪ್ರಕರಣಗಳು, ಮೈಕೋಲೇಔಟ್ ಪೊಲೀಸ್ ಠಾಣೆಯ 1 ಪ್ರಕರಣ, ಮಹದೇವಪುರ ಪೊಲೀಸ್ ಠಾಣೆಯ 1 ಪ್ರಕರಣ, ಬಂಡೇಪಾಳ್ಯ ಪೊಲೀಸ್ ಠಾಣೆಯ 1 ಪ್ರಕರಣ, ಸುಬ್ರಮಣ್ಯಪುರ ಪೊಲೀಸ್ ಠಾಣೆಯ 1 ಪ್ರಕರಣ, ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯ 1 ಪ್ರಕರಣ, ಆರ್.ಆರ್. ನಗರ ಪೊಲೀಸ್ ಠಾಣೆಯ 1 ಪ್ರಕರಣ, ಮತ್ತು ಬೇಗೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿವೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ, ಐ.ಪಿ.ಎಸ್., ಮತ್ತು ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ವಾಸುದೇವ್ ವಿ.ಕೆ. ಇವರ ಮಾರ್ಗದರ್ಶನದಲ್ಲಿ, ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಮೊಹಮ್ಮದ್ ಎಂ.ಎ. ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    Bengaluru City Police

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    June 22, 2026
    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    CREDOPRESS

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    June 19, 2026
    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ
    Bengaluru City Police

    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    June 19, 2026
    Next Post
    ಪರಪ್ಪನ ಅಗ್ರಹಾರ ಪೊಲೀಸರಿಂದ ಕಂಪನಿಯ ಕೆಲಸಗಾರನಿಂದಲೇ ಶೋರೂಮ್ ನಲ್ಲಿಟ್ಟಿದ್ದ 19 ಲಕ್ಷ ಬೆಲೆಬಾಳುವ ಲ್ಯಾಪ್ಟಾಪ್ಗಳು ಮೊಬೈಲ್ ಫೋನ್ ಗಳು ವಶ

    ಪರಪ್ಪನ ಅಗ್ರಹಾರ ಪೊಲೀಸರಿಂದ ಕಂಪನಿಯ ಕೆಲಸಗಾರನಿಂದಲೇ ಶೋರೂಮ್ ನಲ್ಲಿಟ್ಟಿದ್ದ 19 ಲಕ್ಷ ಬೆಲೆಬಾಳುವ ಲ್ಯಾಪ್ಟಾಪ್ಗಳು ಮೊಬೈಲ್ ಫೋನ್ ಗಳು ವಶ

    ಗೋವಿಂದರಾಜ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ 29 ಲಕ್ಷ ಮೌಲ್ಯದ ಚಿನ್ನಾಭರ ಮತ್ತು ಒಂದು ದ್ವಿಚಕ್ರ ವಾಹನ ವಶ ಮನೆಗಳಲ್ಲಿ ಕಳುವು ಮಾಡುತ್ತಿದ್ದ ಓರ್ವ ಆರೋಪಿಯ ಬಂಧನ

    ಗೋವಿಂದರಾಜ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ 29 ಲಕ್ಷ ಮೌಲ್ಯದ ಚಿನ್ನಾಭರ ಮತ್ತು ಒಂದು ದ್ವಿಚಕ್ರ ವಾಹನ ವಶ ಮನೆಗಳಲ್ಲಿ ಕಳುವು ಮಾಡುತ್ತಿದ್ದ ಓರ್ವ ಆರೋಪಿಯ ಬಂಧನ

    ಕೆ ಆರ್ ಪುರಂ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಜ್ಯುವೆಲರಿ ಅಂಗಡಿಯ ಕೆಲಸಗಾರನನ್ನು ಬೆದರಿಸಿ 50 ಲಕ್ಷ ರೂಪಾಯಿ ಮೌಲ್ಯದ 478 ಗ್ರಾಂ ಚಿನ್ನಾಭರಣ ದೋಚಿದ್ದ ಹೊರ ರಾಜ್ಯದ ಐವರು ಆರೋಪಿಗಳ ಬಂಧನ

    ಕೆ ಆರ್ ಪುರಂ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಜ್ಯುವೆಲರಿ ಅಂಗಡಿಯ ಕೆಲಸಗಾರನನ್ನು ಬೆದರಿಸಿ 50 ಲಕ್ಷ ರೂಪಾಯಿ ಮೌಲ್ಯದ 478 ಗ್ರಾಂ ಚಿನ್ನಾಭರಣ ದೋಚಿದ್ದ ಹೊರ ರಾಜ್ಯದ ಐವರು ಆರೋಪಿಗಳ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Dakshina kannada district police Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police Mangaluru Police MDMA Namma Police Namma Police News Police News Prime News Ramanagara District Police Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    • ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    • ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved