ಗೋವಿಂದರಾಜನಗರ ಪೊಲೀಸ್ ಠಾಣ ಸರಹದ್ದಿನ ಎರಡನೇ ಮುಖ್ಯ ರಸ್ತೆಯಲ್ಲಿ ರಾತ್ರಿ 9:00ಯಲ್ಲಿ ದ್ವಿಚಕ್ರ ವಾಹನವನ್ನು ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದು ಬೆಳಿಗ್ಗೆ ಎಂಟು ಗಂಟೆಯಲ್ಲಿ ಕೆಲಸಕ್ಕೆ ಹೋಗುವ ಮುನ್ನ ನೋಡಲಾಗಿ ಯಾರು ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಗೋವಿಂದರಾಜನಗರ ಪೊಲೀಸರು ವಿವಿಧಾಯಮಗಳಲ್ಲಿ ತನಿಖೆಯನ್ನು ಕೈಗೊಂಡು ಅಪರಾಧ ವಿಭಾಗದ ಸಿಬ್ಬಂದಿಯವರು ಠಾಣಾ ಸರಹದ್ದಿನ ಪಟ್ಟೇಗಾರ ಪಾಳ್ಯದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಓರ್ವ ವ್ಯಕ್ತಿಯು ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದನ್ನು ಗಮನಿಸಿ ಆತನನ್ನು ತಡೆಹಿಡಿದು ವಿಚಾರಿಸಲಾಗಿ ಆತನು ಸರಿಯಾದ ಮಾಹಿತಿಯನ್ನು ನೀಡದೆ ಇದ್ದಿದ್ದರಿಂದ ಆ ವ್ಯಕ್ತಿಯನ್ನು ದ್ವಿಚಕ್ರ ವಾಹನ ಸಮೇತ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ಆತನು ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಹಾಗೂ ಮನೆ ಕಳುವು ಸಹ ಮಾಡಿರುವುದಾಗಿ ತಿಳಿಸಿರುತ್ತಾನೆ
ಸುಧೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಪೊಲೀಸರು ಆರೋಪಿಯಿಂದ 29 ಲಕ್ಷ ಮೌಲ್ಯದ ಒಂದು ದ್ವಿಚಕ್ರವಾಹನ ಹಾಗೂ 35 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು
- ಗೋವಿಂದರಾಜನಗರ ಪೊಲೀಸ್ ಠಾಣೆಯ ಎರಡು ಮನೆ ಕಳವು ಪ್ರಕರಣ
- ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಎರಡು ಮನೆ ಕಳವು ಪ್ರಕರಣ
- ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಒಂದು ಮನೆ ಕಳವು ಪ್ರಕರಣ
- ಮೇಲುಕೋಟೆ ಪೊಲೀಸ್ ಠಾಣೆಯ ಒಂದು ಮನೆ ಕಳವು ಪ್ರಕರಣ
ಸೇರಿದಂತೆ ಒಟ್ಟು ಏಳು ಪ್ರಕರಣಗಳು ಪತ್ತೆ ಆಗಿರುತ್ತವೆ
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತಾರಾದ ಗಿರೀಶ್ ಎಸ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಚಂದನ್ ಕುಮಾರ್ ನೇತೃತ್ವದಲ್ಲಿ ಗೋವಿಂದರಾಜ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಮಣಿ ಕೆ ಹಾಗೂ ಸಿಬ್ಬಂದಿರವರ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್









