ಕೆ ಆರ್ ಪುರಂ ಪೊಲೀಸ್ ಠಾಣಾ ಸರಹದ್ದಿನ ಸೀಗೆಹಳ್ಳಿ ಮುಖ್ಯರಸ್ತೆಯಲ್ಲಿ ಜ್ಯುವೆಲರಿ ಅಂಗಡಿಯಲ್ಲಿ ಕೆಲಸಗಾರನೊಬ್ಬ ಕೆಲಸ ಮಾಡಿಕೊಂಡಿರುತ್ತಾನೆ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಜ್ಯುವೆಲರಿ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನನ್ನು ಅಂಗಡಿಯಲ್ಲಿ ಬಿಟ್ಟು ಊಟಕ್ಕೆ ಎಂದು ಮನೆಗೆ ಹೋಗಿದ್ದ ಮಾಲಿಕ ಅದೇ ದಿನ ಸಂಜೆ 4:00 ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯೊಳಗೆ ಬಂದು ಕೆಲಸಗಾರನಿಗೆ ಚಾಕು ತೋರಿಸಿ ಹೆದರಿಸಿ ಆರು ಟ್ರೇಗಳಲ್ಲಿದ್ದ 600 ಗ್ರಾಂತೂಕದ ಚಿನ್ನದ ನಲವತ್ತೊಂದು ಚೈನ್ಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಬೋರುಂಡ ಗ್ರಾಮದಲ್ಲಿ ಈ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿ ಹಾಗೂ ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಈ ಪ್ರಕರಣದಲ್ಲಿ ಮತ್ತೊಬ್ಬರು ಸಹಚರರೊಂದಿಗೆ ಸೇರಿಕೊಂಡು ಕೃತ್ಯ ಎಸೆಗಿರುವುದಾಗಿ ಆರೋಪಿತರು ತಪ್ಪು ಒಪ್ಪಿಕೊಂಡಿರುತ್ತಾರೆ
ಈ ಪ್ರಕರಣದ ಮತ್ತೊಬ್ಬ ಸಹಜರನನ್ನು ಅನ್ನಪೂರ್ಣೇಶ್ವರಿ ನಗರದ ಮೂಡಲ ಪಾಳ್ಯದಲ್ಲಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿ ಆರೋಪಿಯು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾನೆ
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಚಿನ್ನಾಭರಣಗಳನ್ನು ಅವರುಗಳ ವಾಸದ ಮನೆಯಲ್ಲಿಟ್ಟಿರುವುದಾಗಿ ಮತ್ತೋರ್ವ ಆರೋಪಿಯು ಚಿನ್ನಾಭರಣಗಳನ್ನು ಬೋರ್ಂಡ ಗ್ರಾಮದಲ್ಲಿ ಚಿನ್ನದ ಕೆಲಸ ಮಾಡುವ ಓರ್ವ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ
ಈ ಪ್ರಕರಣದಲ್ಲಿ ಮತ್ತೊಬ್ಬರೂ ಸಹಚರರನ್ನು ರಾಜಸ್ಥಾನದಲ್ಲಿ ವಶಕ್ಕೆ ಪಡೆದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ತಪ್ಪು ಒಪ್ಪಿಕೊಂಡಿರುತ್ತಾರೆ
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳಿಂದ 50 ಲಕ್ಷ ರೂಪಾಯಿ ಮೌಲ್ಯದ 478 ಗ್ರಾಮ ಚಿನ್ನಾಭರಣ ಕೃತಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಮತ್ತು ಚಾಕುವನ್ನು ಪೊಲೀಸರು ವಶಪಡಿಸಿಕೊಂಡರು
ಈ ಕಾರ್ಯಾಚರಣೆಯನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುನಾರೆ, ಐಪಿಎಸ್
ಎಸಿಪಿ ಕರೀನಾ ಸುವರ್ಣ ರವರ ಮಾರ್ಗದರ್ಶನದಲ್ಲಿ ಕೆ ಆರ್ ಪುರಂ ಠಾಣೆಯ ಇನ್ಸ್ಪೆಕ್ಟರ್ ರಾಮಮೂರ್ತಿ ಹಾಗೂ ಸಿಬ್ಬಂದಿಯರವರ ತಂಡ ಈ ಪ್ರಕರಣವನ್ನು ಭೇದಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ









