ಯಲಹಂಕ ಉಪನಗರ ಪೊಲೀಸರಿಂದ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ವ್ಯಕ್ತಿಗಳನ್ನು ಬಂಧಿಸಿದ್ದು ಬಂಧಿತರಿಂದ 70ಲಕ್ಷ ಮೌಲ್ಯದ ಎಂಡಿಎಂಎ ಯನ್ನು ವಶ ಪಡಿಸಿಕೊಂಡರು
ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಬೆಟ್ಟ ಹಳ್ಳಿಯ ಮನೆಯಿಂದರಲ್ಲಿ ಮಾದಕ ವಸ್ತುವಾದ ಎಂಡಿ ಎಂಎಯನ್ನು ಮಾರಾಟ ಮಾಡುತ್ತಿರುವುದಾಗಿ ಸಾರ್ವಜನಿಕರು ತಿಳಿಸಿರುತ್ತಾರೆ

ಖಚಿತ ಮಾಹಿತಿ ಆಧಾರದ ಮೇರೆಗೆ ಯಲಹಂಕ ಉಪನಗರ ಪೊಲೀಸರು ಎಂ ಡಿ ಎಂ ಎ ಪ್ರಕರಣವನ್ನು ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಇಬ್ಬರು ವಿದೇಶಿ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತರು ಚಿಕಿತ್ಸೆ ಸಲುವಾಗಿ 2023 ನೇ ಸಾಲಿನಲ್ಲಿ ಭಾರತಕ್ಕೆ ಬಂದಿದ್ದು ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಬೆಟ್ಟ ಹಳ್ಳಿಯ ಮನೆ ಒಂದರಲ್ಲಿ ವಾಸ ಮಾಡಿಕೊಂಡಿದ್ದು ಹೆಚ್ಚು ಹಣ ಸಂಪಾದನೆ ಮಾಡುವ ಹಾಗೂ ಮೋಜಿನ ಜೀವನ ನಡೆಸುವ ಉದ್ದೇಶದಿಂದ ಜೆಪಿ ಪಾರ್ಕ್ ಬಳಿ ಅಪರಿಚಿತ ವ್ಯಕ್ತಿ ಒಬ್ಬನಿಂದ ಕಡಿಮೆ ಬೆಲೆಗೆ ಖರೀದಿಸಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದೆಂದು ಆರೋಪಿಗಳು ತಪ್ಪು ಒಪ್ಪಿಕೊಂಡರು
ಈ ಕಾರ್ಯಾಚರಣೆಯನ್ನು ಡಿಸಿಪಿ ಈಶಾನ್ಯ ವಿಭಾಗ ಸಜಿತ್ ವಿಜೇ ರವರ ಮಾರ್ಗದರ್ಶನದಲ್ಲಿ ಎಸಿಪಿ ಯಲಹಂಕ ಉಪ ವಿಭಾಗ ನರಸಿಂಹಮೂರ್ತಿರವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸುಧಾಕರ್ ರೆಡ್ಡಿ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









