ಶಹಾಪುರ: ಅನೇಕ ಕಡೆಗಳಲ್ಲಿ ಮನೆಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿ ಸುತ್ತುತ್ತಿದ್ದ ಆರೋಪಿಯ ಪಿಂಗರ್ ಪ್ರಿಂಟ್ ಆಧಾರದ ಮೇಲೆ ಪೋಲಿಸರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಸೇರಿದಂತೆ ಒಟ್ಟು 15, ಲಕ್ಷದ 15 ಸಾವಿರ 500 ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದು ಪೋಲಿಸರ್ ತನಿಖೆ ಸಾಧನೆ ಶ್ಲಾಘನೀಯವಾದದ್ದಾಗಿದೆ, ಡಿವೈಎಸ್ಪಿ ಜಾವೇದ ಇನಾಮದಾರ ಪತ್ರಿಕೆಗೆ ತಿಳಿಸಿರು.
ನಗರದ ಸಿಪಿಐ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂತೋಷ ತಂದೆ ಶಿವಣ್ಣ ಸಾ.ನಂದ್ಯಾಳ ವಿಜಯಪುರ ಜಿಲ್ಲಾ ನಿವಾಸಿಯಾಗಿರುತ್ತಾನೆ, ಇತನು ರಬಕವಿ ಬನ್ನಟ್ಟಿ ಅಲ್ಲದೆ ಯಾದಗಿರಿ ಜಿಲ್ಲಾ, ತಾಲುಕಿನ ದರ್ಶನಾಪುರ, ಗೋಗಿ ಕೆ ಗ್ರಾಮಗಳಲ್ಲಿ ಕಳ್ಳತ್ತನ ಮಾಡಿಕೊಂಡು ಒಟ್ಟು 4 ಪ್ರಕರಣಗಳನ್ನು ಭಾಗಿಯಾಗಿ ಪರಾರಿಯಾಗಿದ್ದನು, ಗೋಗಿ ಮತ್ತು ಭೀ, ಗುಡಿ ಪೋಲಿಸ್ ಠಾಣೆಯಲ್ಲಿ ಪ್ರತೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.
ಈ ಕುರಿತು ತಿವೃ ಶೋಧಕಾರ್ಯಕ್ಕೆ ಮುಂದಾದ ಪೋಲಿಸರು, ಯಾದಗಿರಿ ಎಸ್ಪಿ, ಪ್ರತ್ಯೇಕಶಂಕರ್‌ರವರ ನಿರ್ಧೇಶನದಲ್ಲಿ, ಸುರುಪುರ ಡಿವೈಎಸ್ಪಿ ಜಾವೇದ ಇನಾಮದಾರವರ ಮಾರ್ಗದರ್ಶನದಲ್ಲಿ, ಶಹಾಪುರ ಸಿಪಿಐ ಶರಣಗೌಡ ನ್ಯಾಮಣನವರ್ ನೇತೃತ್ವದಲ್ಲಿ, ಗೋಗಿ ಪಿಎಸ್, ಐ, ದೇವಿಂದ್ರಡ್ಡಿ, ಮತ್ತು ಕ್ರೆಂ ಪಿಎಸ್‌ಐ, ಚಂದ್ರನಾಥರವರ ತಂಡದ ಎಚ್. ಸಿಗಳಾದ ಶ್ರೀಶೈಲ್ ಸಜ್ಜನ್, ದೇವಿಂದ್ರಪ್ಪ ಪಿಸಿ, ಭೀಮನಗೌಡ ಬಸನಗೌಡ, ನಾಗಪ್ಪ ಸೊಮಯ್ಯನವರು ಆರೋಪಿಯನ್ನು ತನಿಖೆ ಕಾರ್ಯ ಕೈಗೊಂಡು, ಫಿಂಗರ್ ಪ್ರಿಂಟ್ ಆಧಾರದಲ್ಲಿ ಕಳ್ಳನನ್ನು ಬಾಗಲಕೊಟ್, ವಿಜಯಪುರ, ರಬಕವಿ, ಬನ್ನಟ್ಟಿಗಳನ್ನು ಸೂಕ್ತ ತನಿಖೆ ಕೈಗೊಂಡು ಸುರುಪುರ ಬಸ್ ನಿಲ್ದಾಣದಲ್ಲಿ ಪಬ್ಲಿಕ ಮೋಬೈಲ್ ನಲ್ಲಿ ಮಾತನಾಡಿದ್ದ ಜಾಡನ್ನು ಕಂಡುಹಿಡಿದುಕೊಂಡು ಕೊಡೆಕಲ್ ನಲ್ಲಿ ಬಾಡಿಗೆ ಮನೆಯಲ್ಲಿ ಅಡಿಗಿಕೊಂಡು, ಬಾಡಿಗೆ ಕಾರೊಂದನ್ನು ಪಡೆದುಕೊಂಡು ಸುತ್ತಿದ್ದಾಗ ಪೋಲಿಸರು ಆರೋಪಿ ಸಂತೋಷನನ್ನು ಬಂಧಿಸಿದರು.
ಬಂಧಿಸಿದ ಆರೋಪಿತನಿಂದ 11 ತೊಲೆ ಬಂಗಾರದ ಆಭರಣ, ಕಿಮತ್ತು ಒಟ್ಟು 11 ಲಕ್ಷ, ರೂ. 4 ಲಕ್ಷದ 15 ಸಾವಿರ 500 ರೂ.ಗಳನ್ನು ನಗದು ಹಣವನ್ನು ಜಿಪ್ತಿ ಮಾಡಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಜಾವೇದ ಇನಾಮದಾರ ಪತ್ರಕರ್ತರಿಗೆ ವಿವರಣೆ ನೀಡಿದರು.
ವರದಿ:- ಸಿದ್ದು ಪಟ್ಟೇದಾರ್









