https://www.facebook.com/share/v/173uXBvJ2r
5 ವರ್ಷಗಳ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾನ್ಯ 2ನೇ ಎಫ್.ಟಿ.ಎಸ್ ನ್ಯಾಯಾಲಯವು ಮಹತ್ವದ ತೀರ್ಪನ್ನು ಪ್ರಕಟಿಸಿದೆ. 2020ರ ಅಕ್ಟೋಬರ್ 10ರಂದು ನಡೆದ ಈ ಘಟನೆಯಲ್ಲಿ ಅಪರಾಧಿ ದಿನೇಶ್ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗಂಭೀರವಾಗಿ ಗಾಯಗೊಳಿಸಿದ್ದನು. ನ್ಯಾಯಾಲಯವು POCSO ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಆರೋಪಿಗೆ ಒಟ್ಟಾರೆಯಾಗಿ 24 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹1.25 ಲಕ್ಷ ದಂಡ ವಿಧಿಸಲಾಗಿದೆ. ಸರ್ಕಾರವು ಲೈಂಗಿಕ ಹಲ್ಲೆಗೆ ಒಳಗಾದ ಅಪ್ರಾಪ್ತ ನೊಂದ ಬಾಲಕಿಗೆ 5 ಲಕ್ಷ ಮೊತ್ತದ ಪರಿಹಾರವನ್ನು ನೀಡಬೇಕಾಗಿ ಆದೇಶ ಹೊರಡಿಸಿದೆ. ಸಂತ್ರಸ್ತೆಯ ಗೌಪ್ಯತೆ ಕಾಪಾಡಲು ನ್ಯಾಯಾಲಯವು ಮಾಧ್ಯಮಗಳಿಗೆ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ಅಭಿಯೋಗದ ಪರವಾಗಿ 2ನೇ ಎಫ್.ಟಿ.ಎಸ್.ಸಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಎ ವಿ ಮಧುರವರು ಸಾಕ್ಷಿಗಳ ವಿಚಾರಣೆ ನಡೆಸಿದ್ದು, ಶ್ರೀಮತಿ ಜಹೀದಾ ಬಾನು ಡಿ ಕನ್ನೊಳ್ಳಿ ರವರು ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ಶ್ರೀರಾಂಪುರ ಪೊಲೀಸ್ ಠಾಣೆಯ ಹಿಂದಿನ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಶ್ರೀ ಸುನಿಲ್ ವೈ ನಾಯಕ್ ಅವರು ನಡೆಸಿದ್ದು, ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದರು.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









