ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ ಒಂದನೇ ಬ್ಲಾಕ್ ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವ ಪಿರಿಯಾದುದಾರರು, ಸಿದ್ದಾಪುರ ಪೊಲೀಸ್ ಠಾಣೆ ಮನೆಕೆಲಸದಕೆಯ ಮೇಲೆ ಕಳ್ಳತನದ ದೂರನ್ನು ಸಲ್ಲಿಸಿರುತ್ತಾರೆ.
ಪಿರಿಯಾದುದಾರರು ಕೆಲಸದಾಖೆಗೆ ಕರೆ ಮಾಡಲಾಗಿ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಅನುಮಾನ ಗೊಂಡ ವೈದ್ಯರು ಮನೆಯಲ್ಲಿರುವ ಕಬೋರ್ಡ್ ನೋಡಲಾಗಿ, ಕಬೋರ್ಡ್ ನಲ್ಲಿಟ್ಟಿದ್ದ ಡೈಮಂಡ್ ಮತ್ತು ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ವಸ್ತುಗಳು, ಮೊಬೈಲ್ ಫೋನ್ ಗಳು, ಬೆಲೆಬಾಳುವ ವಾಚುಗಳು ಕಾಣೆಯಾಗಿರುತ್ತವೆ . ಇವುಗಳನ್ನು ಕೆಲಸದಾಖೆಯೇ ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಕೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಕೆಯನ್ನು ಕೈಗೊಂಡು, ಪಿರಿಯಾದುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯನ್ನು ತೆಲಂಗಾಣ ರಾಜ್ಯದ ನ್ಯೂ ರಂಗಪುರ ಗ್ರಾಮದಲ್ಲಿರುವ ಆಕೆಯ ತಂಗಿಯ ವಾಸದ ಮನೆಯಿಂದ ಪ್ರಕರಣದಲ್ಲಿ ಕಳುವಾಗಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳ ಸಮೇತ ವಶ ಕ್ಕೆ ಪಡೆದುಕೊಂಡರು ವಶಕ್ಕೆ ಪಡೆದ ಕೆಲಸದಾಖೆಯನ್ನು ವಿಚಾರಣೆಗಳು ಪಡಿಸಿದಾಗ ಡೈಮಂಡ್ ರಿಂಗ್, ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕಳುವು ಮಾಡಿರುವುದಾಗಿ ತಪೋಪ್ಪಿ ಕೊಂಡಿರುತ್ತಾಳೆ. ಹಾಗೂ ಕಳವು ಮಾಡಿದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತನ್ನ ವಶದಲ್ಲಿಯೇ ಇಟ್ಟುಕೊಂಡು ಡೈಮಂಡ್ ರಿಂಗ್ ಅನ್ನು ಆಕೆಯ ತಂಗಿಯ ಗಂಡನ ಮುಖಾಂತರ ಮಾರಾಟ ಮಾಡಿಸಿರುವುದಾಗಿ ತಿಳಿಸಿರುತ್ತಾಳೆ. ಆರೋಪಿತೆಯ ತಂಗಿಯ ಗಂಡನನ್ನು ವಶಕ್ಕೆ ಪಡೆದುಕೊಂಡರು.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಆತನು ಡೈಮೆಂಡ್ ರಿಂಗನ್ನು ತೆಲಂಗಾಣದ ರಂಗಪುರಂ ಗ್ರಾಮದ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು 10.45 ಗ್ರಾಂ ಡೈಮಂಡ್ ರಿಂಗನ್ನು ವಶಪಡಿಸಿಕೊಳ್ಳಲಾಗಿರುತ್ತಾರೆ.
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ಒಟ್ಟು 5.40 ಗ್ರಾಂ ಡೈಮೆಂಡ್ರಿಂಗ್, 10.45 ಗ್ರಾಂ ಡೈಮಂಡ್ ಓಲೆ, 11.50 ಗ್ರಾಂ ಚಿನ್ನಾಭರಣ, ಒಂದು ಕೆಜಿ 62 ಗ್ರಾಂ ಬೆಳ್ಳಿಯ ವಸ್ತುಗಳು, 4 ಮೊಬೈಲ್ ಫೋನ್ ಗಳು, ಐದು ಬೆಲೆ ಬಾಳುವ ವಾಚುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 22,00,000 ( ಇಪ್ಪತ್ತೆರಡು ಲಕ್ಷ ರೂಪಾಯಿ)
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ ಬರಮಪ್ಪ ಜಗಲ ಸರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ನಾರಾಯಣಸ್ವಾಮಿ ವಿ ರವರ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮೋಹನ್ ಡಿ ಪಟೇಲ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









