ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸರು ಮನೆ ಕನ್ನ ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 475 ಗ್ರಾಂ ಚಿನ್ನಾಭರಣ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 44.24 ಲಕ್ಷ ಎಂದು ಅಂದಾಜಿಸಲಾಗಿದೆ. ಈ ನಾಲ್ವರ ಬಂಧನದಿಂದಾಗಿ ಒಟ್ಟು ಒಂಬತ್ತು ಮನೆ ಕಳವು ಪ್ರಕರಣಗಳು ಭೇದಿಸಲ್ಪಟ್ಟಿವೆ.
ದೂರುದಾರರ ತಾಯಿ ತರಕಾರಿ ತರಲು ಮನೆಗೆ ಬೀಗ ಹಾಕಿ ಅರ್ಧ ಗಂಟೆಯ ನಂತರ ಹಿಂದಿರುಗಿದಾಗ, ಮನೆ ಬಾಗಿಲು ಮೀಟಿ ಒಳಗೆ ಪ್ರವೇಶಿಸಿ, ಬೆಳ್ಳಿ ಕಡಗ ಮತ್ತು ಪಾಸ್‌ಪೋರ್ಟ್ ಇದ್ದ ಬಾಕ್ಸ್ ಕಳವು ಮಾಡಿದ್ದು ಪತ್ತೆಯಾಗಿತ್ತು. ಒಟ್ಟು 5 ಸಹಚರರೊಂದಿಗೆ ಸೇರಿಕೊಂಡು ಬೆಂಗಳೂರು, ಹಾಸನ, ಬೀದರ್, ಹುಬ್ಬಳ್ಳಿ ಮತ್ತು ಚಿತ್ರದುರ್ಗದಲ್ಲಿ ಮನೆ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಸಹಚರನಿಗಾಗಿ ಪೊಲೀಸರ ಶೋಧ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್ ಎಸ್ IPS ಅವರ ಮಾರ್ಗದರ್ಶನದಲ್ಲಿ, ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಚಂದನ್ ಕುಮಾರ್ ಎನ್ ಅವರ ನೇತೃತ್ವದಲ್ಲಿ, ಗೋವಿಂದರಾಜ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಸುಬ್ರಮಣಿ ಕೆ ಮತ್ತು ತಂಡವು ಯಶಸ್ವಿಯಾಗಿ ನಡೆಸಿದೆ









