190 ಲಕ್ಷ ಮೌಲ್ಯದ 09 ಕಾರುಗಳ ವಶ.
ಹುಳಿಮಾವು ಪೊಲೀಸ್ ಠಾಣಾ ಸರಹದ್ದಿನಲ್ಲಿ, ಪಿರ್ಯಾದುದಾರರ ಮಾರುತಿ ಸ್ವಿಪ್ಟ್ ಕಾರ್‌ನ್ನು ಓರ್ವ ವ್ಯಕ್ತಿಯು ದಿನಾಂಕ:25/03/2024 ರಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದುಕೊಂಡು ಹೋಗಿರುತ್ತಾನೆ. ನಂತರ ಅವರ ಕಾರ್‌ಗೆ ಅಳವಡಿಸಿದ್ದ ಜಿ.ಪಿ.ಎಸ್‌ನ್ನು ತೆಗೆದುಹಾಕಿ ಪಿರ್ಯಾದುದಾರರ ಸಂಪರ್ಕಕ್ಕೆ ಸಿಗದೆ ತೆಲೆಮರಿಸಿಕೊಂಡು ಮೋಸ ಮಾಡಿರುತ್ತಾರೆಂದು ದಿನಾಂಕ: 08.06.2024 ರಂದು ದೂರನ್ನು ನೀಡಿದ್ದು, ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಭಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:09.06,2024 ರಂದು ಓರ್ವ ವ್ಯಕ್ತಿಯನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ, ಆತನು ಕಾರುಗಳನ್ನು ಕಳ್ಳತನ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ನಂತರ ಆತನನ್ನು ಬೆಂಗಳೂರಿಗೆ ಕರೆತಂದು ದಿನಾಂಕ:10/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿ 6 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು, ಆತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಕಳ್ಳತನ ಮಾಡಿದ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಅವುಗಳ ಪೈಕಿ ಮೂರು ಕಾರುಗಳನ್ನು ಅಡಮಾನವಿಟ್ಟಿದ್ದು, ಆರು ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ. ನಂತರ ಅಡಮಾನವಿಟ್ಟಿದ್ದ ಮತ್ತು ಮಾರಾಟ ಮಾಡಿದ್ದವರ ಕಡೆಯಿಂದ ವಿವಿಧ ಕಂಪನಿಗಳ 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ನಂತರ ದಿನಾಂಕ:15/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರೂಡಿಸಿ ಹೆಚ್ಚಿನ ವಿಚಾರಣೆಗಾಗಿ ಇನ್ನೂ 4 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದು, ಸುದೀರ್ಘವಾಗಿ ವಿಚಾರಣೆ ಮಾಡಿ ಆತನ ವಶದಿಂದ ಮತ್ತೊಂದು ಕಾರನ್ನು ಸಹ ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ಆರೋಪಿಯಿಂದ ಒಟ್ಟು 9 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಯು ಇತರೆ ಕಾರು ಮಾಲಿಕರಿಂದ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ನಕಲಿ ದಾಖಲೆಗಳನ್ನು ಸಷ್ಠಿಸಿ ಮಾಲಿಕರಿಗೆ ಮತ್ತು ಕಾರು ಖರೀದಿದಾರರಿಗೆ ಮೋಸ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ನಂತರ ಆತನನ್ನು ದಿನಾಂಕ:19/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಲಾಗಿ ಮಾನ್ಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
ಈ ಕಾರ್ಯಚಾರಣೆಯನ್ನು ಬೆಂಗಳೂರು ನಗರದ ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಸಿ.ಕೆ.ಬಾಬಾ, ಐ.ಪಿ.ಎಸ್ ಹಾಗೂ ಶ್ರೀ ಮಂಜುನಾಥ್, ಸಹಾಯಕಪೊಲೀಸ್ ಆಯುಕ್ತರು ಎಲೆಕ್ಟ್ರಾನಿಕ್ ಸಿಟಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಹುಳಿಮಾವು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಯ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.










