ಕಲಬುರಗಿ ನಗರ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಂದೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ದಿನಾಂಕ 28-09-2024 ರಂದು 08:50 ಪಿ.ಎಂ ಕ್ಕೆ ಪಿರ್ಯಾಧಿದಾರರಾದ ಸೂರ್ಯಕಾಂತ ತಂದೆ ಬಸವರಾಜ ಕಲಶೆಟ್ಟಿ ರವರು ಠಾಣೆಗೆ ಹಾಜರಾಗಿ ರಾತ್ರಿ ಸಮಯದಲ್ಲಿ ಯಾರೋ ಅಪರಿಚಿತ ಆರೋಪಿತರು ದಾಲ್ ಮಿಲ್ ಶೆಟರ್ ಮುರಿದು ದಾಲ್ ಮಿಲ್ ದಲ್ಲಿದ್ದ ಸುಮಾರು 17 ಕ್ವಿಂಟಲ್ ತೊಗರಿ ಬೇಳೆ ಅಂ.ಕಿ-1,48,000/-ರೂ ಕಿಮ್ಮತ್ತಿವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಪೊಲೀಸ ಠಾಣೆ ಗುನ್ನೆ ನಂ. 235/2024 ಕಲಂ 331(4), 305 ಬಿ.ಎನ್.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಮಾನ್ಯ ಶ್ರೀಮತಿ ಕನಿಕಾ ಸಿಕ್ರಿವಾಲ್, ಐ.ಪಿ.ಎಸ್ ಉಪ-ಪೊಲೀಸ್ ಆಯುಕ್ತರು (ಕಾ&ಸೂ), ಕಲಬುರಗಿ ನಗರ, ಶ್ರೀ ಪ್ರವೀಣ್ ಹೆಚ್, ನಾಯಕ್, ಉಪ ಪೊಲೀಸ್ ಆಯುಕ್ತರು (ಅ&ಸಂ), ಕಲಬುರಗಿ ನಗರ, ಶ್ರೀ ಡಿ.ಜಿ ರಾಜಣ್ಣ, ಸಹಾಯಕ ಪೊಲೀಸ್ ಆಯುಕ್ತರು ಸಬ್-ಅರ್ಬನ್ ಉಪ-ವಿಭಾಗ ಕಲಬುರಗಿ ನಗರ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಸುಶೀಲಕುಮಾರ, ಪಿ.ಐ. ವಿಶ್ವ ವಿದ್ಯಾಲಯ ಪೊಲೀಸ ಠಾಣೆ ಕಲಬುರಗಿ ನಗರ ನೇತೃತ್ವದಲ್ಲಿ ಅನೀಲ ಜೈನ್, ಪಿ.ಎಸ್.ಐ, ಹಾಗೂ ಸಿಬ್ಬಂದಿಯವರಾದ ಸಂಜಯಕುಮಾರ, ಪ್ರಕಾಶ, ರಾಜಕುಮಾರ, ಈರಣ್ಣ, ಕಿಶೋರ, ಸುಲ್ತಾನ, ಪ್ರಕಾಶರವರನ್ನೊಳಗೊಂಡ ತಂಡವು ದಿನಾಂಕ: 27-10-2024 ರಂದು ಶಹಾಬಾದ ರಿಂಗ್ ರೋಡ ಹತ್ತಿರ ಸಂಶಯಾಸ್ಪದ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಆರೋಪಿತರಾದ 1) ಈಶ್ವರ ತಂದೆ ಮಲ್ಕಪ್ಪಾ ಕಾಳನೂರ ವಯ: 25 ವರ್ಷ, ಉ: ಕೂಲಿ ಕೆಲಸ, ಸಾ:ಉಪಳಾಂವ ತಾ:ಜಿ: ಕಲಬುರಗಿ 2) ಮಹೇಶ ತಂದೆ ಭೀಮಶ್ಯಾ ವಾಡೇಕರ್ ವಯ: 35 ವರ್ಷ, ಉ: ಕೂಲಿ ಕೆಲಸ, ಸಾ: ಮಹಾಗಾಂವ ತಾ: ಕಮಲಾಪೂರ ಜಿ: ಕಲಬುರಗಿ, ಹಾವ: ಇಂದಿರಾ ನಗರ ಕಲಬುರಗಿ ಇವರು ಕಲಬುರಗಿ ನಗರದ ವಿವಿಧ ಏರಿಯಾಗಳಲ್ಲಿ ಮತ್ತು ನಂದೂರ ಇಂಡಸ್ಟ್ರಿಯಲ್ ಏರಿಯಾಗಳಲ್ಲಿರುವ ದಾಲ್ ಮಿಲ್‌ನಲ್ಲಿ ಕಳ್ಳತನ ಮಾಡಿದ ಬಗ್ಗೆ ತನ್ನೊಪ್ಪಿಕೊಂಡಿದ್ದು ಇರುತ್ತದೆ. ತೊಗರಿ ಬೇಳೆಗಳ ಒಟ್ಟು 10 ಚೀಲಗಳು ಅಂ.ಕಿ- 80,000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಟಂಟಂ ಅಂ.ಕಿ. 1,50,000/- ಹೀಗೆ ಒಟ್ಟು 2,30,000/- ಮೌಲ್ಯದ ಸ್ವತ್ತು ವಶಪಡಿಸಿಕೊಂಡು ಆರೋಪಿತರ ವಿರುದ್ಧ ದಸ್ತಗಿರಿ ಕ್ರಮ ಕೈಗೊಂಡಿದ್ದು ಇರುತ್ತದೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐ.ಪಿ.ಎಸ್.ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.









