ಕಾಟನ್ ಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ, ಬಾತ್ಮಿಧರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಕಾಟನ್ ಪೇಟೆಯ ಪಶುವೈದ್ಯ ಆಸ್ಪತ್ರೆಯ ಹಿಂಭಾಗದಲ್ಲಿ ಗೂಡ್ಸ್ ಆಟ ಒಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂದು ತಿಳಿಸಿರುತ್ತಾರೆ.
ಈ ಮಾಹಿತಿಯ ಅನ್ವಯ ಕಾಟನ್ ಪೇಟೆ ಪೊಲೀಸರು ಬಾತ್ಮಿಧಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ, ಸ್ಥಳದಲ್ಲಿದ್ದ ಇಬ್ಬರೂ ವ್ಯಕ್ತಿಗಳು ಗೂಡ್ಸ್ ಆಟೋ ಸಮೇತ ವಶಕ್ಕೆ ಪಡೆಯಲಾಯಿತು.
ಗುಡ್ ಆಟೋವನ್ನು ಪರಿಶೀಲಿಸಿದಾಗ ನಿಷೇಧಿತ ಮಾದಕ ವಸ್ತುವಾದ 53.5 ಕೆಜಿ ಗಾಂಜಾವಿರುವುದು ಪತ್ತೆಯಾಗಿರುತ್ತದೆ.
ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಪೊಲೀಸರು , ಒಬ್ಬ ವ್ಯಕ್ತಿಯು ರಾಜಸ್ಥಾನ ಮೂಲದವನಾಗಿದ್ದು, ಮತ್ತೋರ್ವನು ಒಡಿಸ್ಸಾ ರಾಜ್ಯದವನಾಗಿರುತ್ತಾನೆ. ಇವರುಗಳು ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಬಸ್ ಮತ್ತು ಕಾರ್ಗೋ ಸೇವೆಗಳ ಮೂಲಕ ಬೆಂಗಳೂರಿಗೆ ಸಾಗಾಣೆ ಮಾಡಿಸಿಕೊಂಡು, ನಂತರ ದೆಹಲಿ, ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ಇತರೆ ನಾಲ್ವರು ಸಹಚರರ ಜೊತೆ ಸೇರಿಕೊಂಡು ಸಾಗಾಣೆ/ಮಾರಾಟ ಮಾಡುತ್ತಿರುವುದಾಗಿಯೂ ಸಹ ತನಿಖೆಯ ವೇಳೆಯಲ್ಲಿ ಆರೋಪಿಗಳು ತಿಳಿಸಿದ್ದು
ತನಿಖೆಯನ್ನು ಮುಂದುವರಿಸಿ ಓರ್ವ ವ್ಯಕ್ತಿಯನ್ನು ವೈಟ್ ಫೀಲ್ಡ್ ನಲ್ಲಿ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿ ಕೊಂಡಿರುತ್ತಾನೆ ಹಾಗೂ ಮೂವರು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ತನಿಖೆಯನ್ನು ಮುಂದುವರಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿಯನ್ನು ನವದೆಹಲಿಯಿಂದ ವಶಕ್ಕೆ ಪಡೆಯಲಾಯಿತು.
ಈ ಪ್ರಕರಣದ ಪ್ರಮುಖ ವ್ಯಕ್ತಿಯನ್ನು ಬಿಹಾರದ ಹಾಜಿಪುರದಲ್ಲಿ ವಶಕ್ಕೆ ಪಡೆಯಲಾಯಿತು.

ಈತನು ತನ್ನ ಸಹಚರರನ್ನು ವಿವಿಧ ರಾಜ್ಯದ ಕಾರ್ಗೋ ಕಂಪನಿಗಳಲ್ಲಿ ನೇಮಿಸಿದ್ದು, ವಿಶಾಖಪಟ್ಟಣಂ ನ ತನ್ನ ಸಹಚರರಿಂದ ಗಾಂಜಾವನ್ನು ಖರೀದಿಸಿ, ಬಸ್ಗಳ ಮುಖಾಂತರ ಬೆಂಗಳೂರಿಗೆ ಸಾಗಿಸುತ್ತಿದ್ದರು. ಬೆಂಗಳೂರಿಗೆ ತಲುಪಿದ ಬಸ್ ನ ಕಾರ್ಗೋ ಸೇವಾ ಕಚೇರಿಯಿಂದ ಇತರೆ ಇಬ್ಬರು ಸಹಚರರು ಪಾರ್ಸೆಲ್ ಗಳನ್ನು ಸ್ವೀಕರಿಸಿದ ನಂತರ ಬೇರೊಂದು ಕಾರ್ಗೋ ಅಥವಾ ರೈಲಿನ ಮೂಲಕ ದೆಹಲಿಗೆ ನಕಲಿ ಜಿ.ಎಸ್.ಟಿ ಬಿಲ್ಗಳ ಮೂಲಕ ಕಳುಹಿಸುತ್ತಿದ್ದರು. ದೆಹಲಿ ಮೂಲದ ಸಹಚರನ್ನು ಈ ಗಾಂಜಾವನ್ನು ಪಡೆದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.
ಈ ಪ್ರಕರಣದ 6 ಆರೋಪಿಗಳ ವಶದಿಂದ 53.5 ಕೆಜಿ ಗಾಂಜಾ, 9 ಮೊಬೈಲ್, 10 ಸಿಮ್ ಕಾರ್ಡ್, 1 ಲ್ಯಾಪ್ಟಾಪ್, 1 ಗುಡ್ ಆಟೋ,8 ನಕಲಿ ಜಿಎಸ್‌ಟಿ ಬಿಲ್ಗಳ ವಶ. ಹುಟ್ಟು ಮೌಲ್ಯ 42,00,000/-(ನಲವತ್ತೆರಡು ಲಕ್ಷ ರೂಪಾಯಿ).
ಈ ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿಗಳು ಪೊಲೀಸ್ ಅಭಿರಕ್ಷೆಯಲ್ಲಿದ್ದು, ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು ನಗರದ ಪೊಲೀಸರು ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಜಾರ್ಖಂಡ್ ಪೊಲೀಸರೊಂದಿಗೆ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ರವರೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಂಡು, ಈ ಜಾಲವನ್ನು ಸಂಪೂರ್ಣವಾಗಿ ಭೇಧಿಸಲಾಗಿದೆ
ಈ ಯಶಸ್ವಿ ಪೊಲೀಸ್ ಕಾರ್ಯಾಚರಣೆಯು, ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಣೆ, ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಮತ್ತು ಸಮನ್ವಯತೆಯನ್ನು ಸಾಧಿಸಿರುವುದು ಕಂಡುಬರುತ್ತದೆ.
ಈ ಕಾರ್ಯಾಚರಣೆಯಲ್ಲಿ ಜಂಟಿ ಪೊಲೀಸ್ ಆಯುಕ್ತರು ಪಶ್ಚಿಮ ವಲಯದವರಾದ ಶ್ರೀ ವಂಶಿಕೃಷ್ಣ, ಐಪಿಎಸ್ ರವರ ಉಸ್ತುವಾರಿಯಲ್ಲಿ, ಉಪ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗದವರಾದ ಶ್ರೀ, ಎನ್ . ಗಿರೀಶ್, ಐಪಿಎಸ್ರವರ ಮಾರ್ಗದರ್ಶನದಲ್ಲಿ, ಶ್ರೀ ಕೆ ಎಂ ರಮೇಶ್ ಸಹಾಯಕ ಪೊಲೀಸ್ ಆಯುಕ್ತರು, ಚಿಕ್ಕಪೇಟೆ ಉಪ ವಿಭಾಗ ರವರ ನೇತೃತ್ವದಲ್ಲಿ, ಕಾಟನ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಯರ್ರಿಸ್ವಾಮಿಹಾಗೂ ಇತರೆ ಅಧಿಕಾರಿ ಸಿಬ್ಬಂದಿಯವರ ತಂಡ ಈ ಪ್ರಕರಣವನ್ನು ಭೇದಿಸಿವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









