ನಿಷೇಧಿತ ಮಾದಕ ವಸ್ತು ಎಂಡಿಎಂಎ ಕಿಸ್ಟೆಲ್‌ನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡಗ್ ಪೆಡರ್‌ನ ಬಂಧನ, 1 ಕೆ.ಜಿ 577 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ವಶ, ಮೌಲ್ಯ ಕೆ 2 ಕೋಟಿ 36 ಲಕ್ಷ.
ದಿನಾಂಕ:24/10/2024 ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀನಿಧಿ ಲೇಔಟ್, ದೊಡ್ಡನಾಗಮಂಗಲದ ಮನೆಯೊಂದರಲ್ಲಿ ವಾಸವಿರುವ ಓರ್ವ ವಿದೇಶಿ ಡಡರ್‌ನ್ನು ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎಕ್ರಿಸ್ಟಲ್‌ನ್ನು ಮನೆಯಲ್ಲಿಟ್ಟುಕೊಂಡು, ಗಿರಾಕಿಗಳಿಗೆ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಿಗಿರುತ್ತಾನೆಂದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ಸಿಸಿಬಿ ಯ ಮಾದಕದವ ನಿಗ್ರಹ ದಳದ ಅಧಿಕಾರಿಗಳಿಗೆ ದೊರೆತ್ತಿರುತ್ತದೆ.

ಈ ಮಾಹಿತಿಯನ್ನು ಆಧಾರಿಸಿ ಸಿಸಿಬಿ ಯ ಮಾದಕದವ ನಿಗ್ರಹ ದಳದಲ್ಲಿ ಪ್ರಕರಣವನ್ನು ದಾಖಲಿಸಿ, ನಂತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಾತ್ಮೀದಾರರು ತಿಳಿಸಿದ ಡಗ್ ಡರ್‌ನ ಮನೆಯ ಮೇಲೆ ದಾಳಿ ಮಾಡಿ, ಓರ್ವ ವಿದೇಶಿ ಡಪೆಡರ್‌ನನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ವಶಕ್ಕೆ ಪಡೆದುಕೊಂಡ ವಿದೇಶಿ ಮೂಲದ ವ್ಯಕ್ತಿಯಿಂದ 1 ಕೆ.ಜಿ 577 ಗ್ರಾಂ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎಕಿಸಲ್, ಒಂದು ಮೊಬೈಲ್ ಫೋನ್, ಒಂದು ಎಲೆಕ್ಟ್ರಾನಿಕ್ ತೂಕದಯಂತ್ರ ವಶಕ್ಕೆ ಪಡೆದುಕೊಂಡಿರುತ್ತಾರೆ. ಇವುಗಳ ಒಟ್ಟು ಮೌಲ್ಯ 2,36,000,00/-(ಎರಡುಕೋಟಿ ಮೂವತ್ತಾರು ಲಕರೂಪಾಯಿ)
ವಶಕ್ಕೆ ಪಡೆದ ವಿದೇಶಿ ಮೂಲದ ವ್ಯಕ್ತಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ,ಈ ವ್ಯಕ್ತಿಯು 2020ನೇ ಸಾಲಿನ ಜನವರಿ ಮಾಹೆಯಲ್ಲಿ ಮೆಡಿಕಲ್ ವೀಸಾದಡಿಯಲಿಭಾರತಕ್ಕೆ ಬಂದು,ದೆಹಲಿ ಬಳಿಯ ಗ್ರೇಟರ್ ನೋಯ್ಡಾದಲ್ಲಿ ವಾಸವಾಗಿದ್ದುಕೊಂಡು ಕ್ಷೌರಿಕ ಕೆಲಸ ಮಾಡಿಕೊಂಡಿರುತ್ತಾನೆ.

ಈ ಆರೋಪಿಗೆ, ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಓರ್ವ ವಿದೇಶಿ ಮೂಲದ ಮಹಿಳಾ ಡಗ್ ಪೆಡರ್ ಜೊತೆ ಸಂಪರ್ಕವಿದ್ದು, ಆಕೆಯಿಂದ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎಕ್ಸಿಸಲ್ ಅನ್ನು ಪಡೆದು, ಆಕೆಯು ತಿಳಿಸುವ ಗಿರಾಕಿಗಳಿಗೆ ಹಾಗೂ ಆರೋಪಿಯು ಪರಿಚಯಸ್ಥ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುತ್ತಿರುವುದಾಗಿ ತಿಳಿಸಿರುತ್ತಾನೆ. ಮಹಿಳಾ ಡಗ್ ಪೆಡರ್ ತಲೆ ಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ.
ದಿನಾಂಕ:25/10/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಯ ಮಾದಕದವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.









