ನಗರದ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೆಳ್ಳಿಯ ಗಟ್ಟಿಗಳ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಕಳುವಾಗಿದ್ದ ಸಂಪೂರ್ಣ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 22/11/2025 ರಂದು ರಾತ್ರಿ, ಚಿನ್ನ-ಬೆಳ್ಳಿ ಅಂಗಡಿಯ ಮಾಲೀಕರ ಮಗನು ದ್ವಿಚಕ್ರ ವಾಹನದ ಫುಟ್‌ಬೋರ್ಡ್‌ನಲ್ಲಿ ಇರಿಸಿದ್ದ 23 ಕೆಜಿ 260 ಗ್ರಾಂ ಬೆಳ್ಳಿಯ ಗಟ್ಟಿಗಳ ಬ್ಯಾಗನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿದ್ದ.
ಹಲಸೂರುಗೇಟ್ ಪೊಲೀಸರು ಕ್ಷಿಪ್ರ ತನಿಖೆ ನಡೆಸಿ, ದಿನಾಂಕ 23/11/2025 ರಂದು ಓರ್ವ ಆರೋಪಿಯನ್ನು ಕಾಟನ್‌ಪೇಟೆಯಲ್ಲಿ ವಶಕ್ಕೆ ಪಡೆದರು. ಆತನ ವಿಚಾರಣೆ ನಂತರ, ಕಳವು ಮಾಡಿದ 49 ಬೆಳ್ಳಿಯ ಗಟ್ಟಿಗಳನ್ನು (23.260 ಕೆಜಿ) ವಶಪಡಿಸಿಕೊಳ್ಳಲಾಯಿತು.
ವಶಪಡಿಸಿಕೊಂಡ ಮೌಲ್ಯ: ವಶಪಡಿಸಿಕೊಂಡ ಬೆಳ್ಳಿಯ ಮೌಲ್ಯ ಸುಮಾರು 37 ಲಕ್ಷ ಆಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ ರವರಾದ ಶ್ರೀ ಅಕ್ಷಯ್ ಎಂ ಹಾಕೆ. ಐ.ಪಿ.ಎಸ್ ಮತ್ತು ಸಹಾಯಕ ಪೊಲೀಸ್ ಆಯುಕ್ತರು ಹಲಸೂರುಗೇಟ್ ಉಪ-ವಿಭಾಗ ರವರಾದ ಶ್ರೀ ಸುಧೀರ್.ಎಸ್ ರವರ ಮಾರ್ಗದರ್ಶನದಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಅಶ್ವತ್ಥನಾರಾಯಣಸ್ವಾಮಿ.ಬಿ.ಎನ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.







