CCB ಅಪರಾಧ 2 ಉಪ ಪೋಲಿಸ್ ಆಯುಕ್ತರದ ಶ್ರೀ.ರಾಜಾ ಇಮಾಮ್ ಖಾಸೀಂ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೊಸ ವರ್ಷ ಪಾರ್ಟಿಗಳ ಹಿನ್ನೆಲೆಯಲ್ಲಿ ಡ್ರಗ್ಸ್ ಮಾರಾಟಗಾರರ ಮೇಲೆ ಭರ್ಜರಿ ಕಾರ್ಯಾಚರಣೆ
ನಗರದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, 23.74 ಕೋಟಿ ರೂ. ಮೌಲ್ಯದ ಬೃಹತ್ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳು: 11 ಕೆ.ಜಿ 640 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ಸ್, 1,040 ಎಕ್ಸ್ಟೆಸಿಪಿಲ್ಸ್ಗಳು, 2 ಕೆ.ಜಿ 235 ಗ್ರಾಂ ಡ್ರಗ್ ತಯಾರಿಕೆಯ ಕಚ್ಚಾ ಸಾಮಾಗ್ರಿ ಮತ್ತು ತೂಕದ ಯಂತ್ರಗಳು.

ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿದ್ದ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.ಬಂಧಿತ ವ್ಯಕ್ತಿ 2017 ರಲ್ಲಿ ವೀಸಾ ಅವಧಿ ಮುಗಿದ ನಂತರವೂ ಅನಧಿಕೃತವಾಗಿ ವಾಸವಾಗಿದ್ದು, ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ. ಈತನ ವಿರುದ್ಧ ಈ ಹಿಂದೆ 2019 ಮತ್ತು 2020 ರಲ್ಲಿ ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿದ್ದವು.ವಿದೇಶಿ ನಾಗರಿಕರಿಗೆ ಕಾನೂನುಬದ್ಧ ನಿಯಮಗಳನ್ನು ಪಾಲಿಸದೆ ಮನೆ ಬಾಡಿಗೆಗೆ ನೀಡಿದ ಹಿನ್ನೆಲೆಯಲ್ಲಿ ಮನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಬಾಗಲೂರು ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಮಾನ್ಯ ಶ್ರೀ. ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಶ್ರೀ.ಅಜಯ್ ಹಿಲೋರಿ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ಮತ್ತು ಶ್ರೀ.ರಾಜಾ ಇಮಾಮ್ ಖಾಸೀಂ, ಉಪ ಪೊಲೀಸ್ ಆಯುಕ್ತರು, ಅಪರಾಧ-2. ರವರ ನೇತೃತ್ವದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಹೆಚ್.ಕೆ.ಮಹಾನಂದ್. ಪೊಲೀಸ್ ಇನ್ಸ್ಪಕ್ಟರ್ ಶ್ರೀ.ಮಂಜಪ್ಪ, ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಯಶಸ್ವಿಯಾಗಿ ಕೈಗೊಂಡಿರುತ್ತಾರೆ









