ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರದನಲ್ಲಿ ಮಳಿಗೆಯಂದರ ಮಾಲೀಕರಾದ ಪಿರಿಯಾಗುದಾರರು ಎರಡು ಕೋಟಿ ನಗದನ್ನು ದರೋಡೆ ಮಾಡಿಕೊಂಡು ಹೋದ ಬಗ್ಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ
ಈ ಕುರಿತು ದರೋಡೆ ಪ್ರಕರಣ ದಾಖಲಾಗಿರುತ್ತದೆ
ಶ್ರೀಮಂತರ ಬಳಿಯಿಂದ ಹಣವನ್ನು ಪಡೆದು ಅದನ್ನು ಯು ಎಸ್ ಡಿ ಟಿ ಕರೆನ್ಸಿ ಡಿಜಿಟಲ್ ಕರೆನ್ಸಿಗೆ ಪರಿವರ್ತಿಸಿ ಆ ಹಣವನ್ನು ಆರ್‌ಟಿಜಿಎಸ್ ್ರೀಮಿಯ ಮೂಲಕ ಜಿಎಸ್‌ಟಿ ಸಮೇತ ದ್ವಿಗುಣಗೊಳಿಸಿ ಹಿಂದಿರುಗಿಸುವುದಾಗಿ ನಂಬಿಸಿ ಅನಾಥರಿಸಿಕೊಂಡು ಆ ಹಣವನ್ನು ಅವರ ಸಹಚರರಿಂದ ದರೋಡೆ ಮಾಡಿಸಿದಂತೆ ನಟಿಸಿ ಮೋಸದಿಂದ ಹಣವನ್ನು ದೋಚಿರುವ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಯನ್ನು ಮುಂದುವರಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆ ಹಾಕಿ ಜಮೀಯ ಮಸೀದಿ ಬಳಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಒಳಪಡಿಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದು ಇತರೆ 17 ಜನಸಹಚರರು ಈ ಕೃತ್ಯದಲ್ಲಿ ಭಾಗಿಯಾಗಿರುತ್ತಾರೆಂದು ಆರೋಪಿಗಳು ತಿಳಿಸಿರುತ್ತಾರೆ
ತನಿಖೆಯನ್ನು ಮುಂದುವರಿಸಿದ ವಿದ್ಯಾರಣ್ಯ ಪೊಲೀಸರು ಆರೋಪಿಗಳ ಸಹಚರರಾದ ಏಳು ವ್ಯಕ್ತಿಗಳನ್ನು ಬೆಂಗಳೂರಿನ ಬಾಗಲಗುಂಟೆ, ಚಿಕ್ಕ ಮಂಗಳೂರಿನ ಜಿಲ್ಲೆಯ ಹಾಲೆನಹಳ್ಳಿಯಿಂದ ಮಂಗಳೂರು, ಅಜ್ಮೀರ್ ಹಾಗೂ ಬೀದರ್ ನ ಓಲ್ಡ್ ಸಿಟಿಯಿಂದ ಪೊಲೀಸರು ಆರೋಪಿತರನ್ನು ಬಂಧಿಸಿದರು.
ತನಿಖೆಯನ್ನು ಮುಂದುವರಿಸಿದ ಪೊಲೀಸರು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮತ್ತೆ ಆರು ವ್ಯಕ್ತಿಗಳನ್ನು ಬಂಧಿಸಿದ ಪೊಲೀಸರು ಒಟ್ಟಾರೆ ಈ ಪ್ರಕರಣದಲ್ಲಿ 15 ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳಿಂದ ಒಂದು ಕೋಟಿ 11 ಲಕ್ಷ ನಗದು,ಕೃತ್ಯಕ್ಕೆ ಬಳಸಿದ ನಾಲ್ಕು ಕಾರುಗಳು, 4 ದ್ವಿಚಕ್ರ ವಾಹನಗಳು, ಎರಡು ಪ್ಯಾಸೆಂಜರ್ ಆಟೋಗಳು, ಎರಡು ಚಾಕುಗಳು, ಒಂದು ಲಾಂಗ್, 8 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದಲ್ಲಿ ಒಟ್ಟು 15 ಆರೋಪಿಗಳನ್ನು ದಸ್ತಗಿರಿ ಮಾಡಿ ಉಳಿದ ನಾಲ್ವರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಹಾಗೂ ಉಳಿದ ಹಣ ಮತ್ತು ಕಾರುಗಳನ್ನು ವಶ ಪಡಿಸಿಕೊಳ್ಳಬೇಕಾಗಿರುತ್ತದೆ ಎಂದು ಪೊಲೀಸರು ತಿಳಿಸಿರುತ್ತಾರೆ
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ ಸಜಿತ್ ವಿಜೆ ಐಪಿಎಸ್, ಎಸಿಪಿ ನರಸಿಂಹಮೂರ್ತಿ ಯಲಹಂಕ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಸ್ವಾಮಿ ಸಿಬಿ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









