ದಿನಾಂಕ: 26ನೇ ಜೂನ್ 2024 ರಂದು ಅಂತರ್‌ರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನದ ಪ್ರಯುಕ್ತ, ಈ ದಿನ ದಿನಾಂಕ:29/06/2024 ರಂದು ಬೆಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಿ.ಎಸ್.ಐ ಮಟ್ಟದ ಅಧಿಕಾರಿಯಿಂದ ಹಿಡಿದು ಪೊಲೀಸ್ ಆಯುಕ್ತರವರೆಗೆ ಒಟ್ಟು 635 ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಾದ 362 ಶಾಲೆಗಳು, 266 ಕಾಲೇಜುಗಳು ಹಾಗೂ 39 ವೃತ್ತಿಪರ ಕಾಲೇಜುಗಳಿಗೆ ಭೇಟಿ ನೀಡಿ, ಒಟ್ಟು-1,22,846 ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳಾದ ಪ್ರಶೋತ್ತರ, ಪವರ್ ಪಾಯಿಂಟ್ ಪ್ರೆಸೆಂಟೇಷನ್, ಭಿತ್ತಿ ಪತ್ರಗಳು, ವಿಡಿಯೋಗಳು, ಸಾಮಾಜಿಕ ಜಾಲಾತಾಣಗಳಿಗೆ ಪ್ರಕಟಣೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

(ಎನ್.ಡಿ.ಪಿ.ಎಸ್) ಕಾಯಿದೆಯ ವಿದ್ಯಾರ್ಥಿಗಳಿಗೆ ನಾರ್ಕೋಟಿಕ್ಸ್ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು ಹಾಗೂ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ನಿರ್ಮೂಲನೆಗೆ ಸಂಕಲ್ಪ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ BCP NDPS Portal E Pledge Q.R Codeಮತ್ತು ವೆಬ್‌ಸೈಟ್ ಲಿಂಕ್ https://pledge.cybersapiens.in/ನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ, ಜಾಗೃತಿ
ಮೂಡಿಸಲಾಯಿತು.










