ವರ್ತೂರು ಪೊಲೀಸ್ ಠಾಣಾ ಸರಹದ್ದಿನ ರಾಮಾಲೇಔಟ್ನಲ್ಲಿವಾಸವಿರುವ ಪಿರಾದುದಾರರು, ದಿನಾಂಕ:23/07/2024 ರಂದು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:23/07/2024 ರಂದು ಮನೆಯ ಮುಂದೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ದಿನಾಂಕ:25/08/2024 ರಂದು ವರ್ತೂರಿನ ಮುತಂದ ರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ಒಂದು ದ್ವಿ- ಚಕ್ರ ವಾಹನ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಕಳುವು ಮಾಡಿರುವುದಾಗಿ ತಪ್ಪಿಕೊಂಡಿರುತ್ತಾನೆ. ಆರೋಪಿಯನ್ನು ಠಾಣೆಗೆ ಕರೆತಂದು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಈ ಹಿಂದೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಳಗಾಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಕಳವು ಮಾಡಿದ್ದ 11 ದ್ವಿ-ಚಕ್ರ ವಾಹನಗಳನ್ನು ವರ್ತೂರಿನ ಸೋರುಹುಣಿಸೆಯ ನೀಲಗಿರಿ ತೋಪಿನಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ಅವುಗಳನ್ನು ದಿನಾಂಕ:25/08/2024 ರಂದು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 9,00,000/- (ಒಂಬತ್ತು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ 1) ಬೈಯಪ್ಪನಹಳ್ಳಿ ಪ್ರೊ.ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, 2) ಹೆಚ್.ಎಸ್.ಆರ್ ಲೇಔಟ್ ಮೊ.ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, 3) ತಿಲಕ್ ನಗರ ಮೊ.ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, 4) ಮಡಿವಾಳ ಪ್ರೊ.ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, 5) ಪರಪ್ಪನ ಅಗ್ರಹಾರ ಪ್ರೊ.ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, 6) ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ಜಾಮರ ಪೊಲೀಸ್ ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, 7) ಕೊಳ್ಳೆಗಾಲ ಪೊಲೀಸ್ ಠಾಣೆಯ 1-ದ್ವಿ-ಚಕ್ರ ವಾಹನ ಕಳುವು ಪ್ರಕರಣ, ಸೇರಿದಂತೆ ಒಟ್ಟು 07 ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ 4 ದ್ವಿ-ಚಕ್ರ ವಾಹನ ಕಳವು ಪ್ರಕರಣಗಳ ಬಗ್ಗೆ ತನಿಖೆ ಮುಂದುವರೆದಿದೆ.
ದಿನಾಂಕ:26/08/2024 ರಂದು ಪ್ರಕರಣದ ಆರೋಪಿಯನ್ನು ನೋಟಿಸ್ ಜಾರಿ ಮಾಡಿ ಬಿಡುಗಡೆ
ಮಾಡಿರುತ್ತದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಡಾ.ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ಮಾರತಹಳ್ಳಿ ಉಪ ವಿಭಾಗ ಶ್ರೀಮತಿ ಪ್ರಿಯದರ್ಶಿನಿ ಈಶ್ವ ಸಾಣೇಕೊಪ್ಪ ರವರ ಮಾರ್ಗದರ್ಶನದಲ್ಲಿ ವರ್ತೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ ಹಾಗೂ ಅಧಿಕಾರಿ/ಸಿಬ್ಬಂದಿರವರು ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









