ರಾತ್ರಿ 10:30ಗಂಟೆಯ ಸಮಯದಲ್ಲಿ ಪಿ.ಎಸ್.ಐ ಶ್ರೀ, ನಂದಕುಮಾರ ರವರಿಗೆ ಸಾರ್ವಜನಿಕರು ಠಾಣೆಯ ಸರಹದ್ದಿನಲ್ಲಿ ಬರುವ ಬರಗೇನ್ ತಾಂಡ ಹತ್ತಿರ ವಡಗಾವ್ – ಚಿಂತಾಕಿ ರೋಡಿನ ಮಧ್ಯದಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ದೊಡ್ಡ ತಗ್ಗು ರೋಡಿನ ಸಮವಾಗಿದ್ದರಿಂದ ವಾಹನ ಚಾಲಕರಿಗೆ ಕಣ್ಣಿಗೆ ಕಾಣದ ರೀತಿಯಲ್ಲಿ ಇರುವುದರಿಂದ ರಸ್ತೆ ಅಪಘಾತಗಳು ಸಂಭವಿಸಬಹುದು ಎಂದು ಫೋನ್ ಮುಖಾಂತರ ತಿಳಿಸಿದ ಕೂಡಲೇ ಕಾರ್ಯ ಪ್ರವರ್ತರಾದ ಪಿಎಸ್ಐ ರವರು ರಾತ್ರಿ 11 ಗಂಟೆಯಸುಮಾರಿಗೆ ತಮ್ಮ ಠಾಣಾ ಸಿಬ್ಬಂದಿ ಶ್ರೀ, ರಾಮರೆಡ್ಡಿ, ಮತ್ತು ಗೃಹ ರಕ್ಷಕ ದಳದ ಶ್ರೀ, ರಾಜಕುಮಾರ್ ರವರನ್ನು ಸ್ಥಳಕ್ಕೆ ಕರೆದೊಯ್ದು ಅಲ್ಲೇ ಇದ್ದ ಕಲ್ಲು ಮಣ್ಣುಗಳಿಂದ ಗುಂಡಿಯನ್ನು ಮುಚ್ಚಿಸಿ, ಮುಂಜಾನೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಊರಿನ ಮುಖಂಡರು ಹಾಗೂ ಗ್ರಾಮ್ ಪಂಚಾಯತ್ ಸದಸ್ಯರಾದ ಶ್ರೀ, ಶಿವಾಜಿರಾವ್ ಚೌಹ್ಹಾಣ್ ರವರ ಸಹಾಯದಿಂದ ಸಿಮೆಂಟ್, ಉಸುಕು, ಹಾಗೂ ಕಂಕರೇಟಗಳಿಂದ ತಗ್ಗನ್ನು ಮುಚ್ಚಿಸಿರುತ್ತಾರೆ.

ಪಿಎಸ್ಐ ರವರ ಕರ್ತವ್ಯ ನಿಷ್ಠೆ ಮತ್ತು ಸಾರ್ವಜನಿಕರ ಮೇಲಿರುವ ಕಳಕಳಿಯನ್ನು ಪರಿಗಣಿಸಿ ಸಾರ್ವಜನಿಕರಿಂದಲೇ ಉತ್ತಮವಾದ ಪ್ರತಿಕ್ರಿಯೆ ಬರುತ್ತಿದ್ದು. ಪಿ.ಎಸ್.ಐ ಶ್ರೀ, ನಂದಕುಮಾರಮತ್ತು ಸಿಬ್ಬಂದಿ ಶ್ರೀ, ರಾಮರೆಡ್ಡಿ, ಗೃಹ ರಕ್ಷಕ ದಳದ ಶ್ರೀ, ರಾಜಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಶ್ರೀ, ಶಿವಾಜಿರಾವ ಚವ್ಹಾಣ ರವರ ಉತ್ತಮ ಕಾರ್ಯಕ್ಕೆ ಶ್ಲಾಘಿಸಿ, ಅಭಿನಂದಿಸಲಾಗಿದೆ.









