5.50 ಲಕ್ಷ ಬೆಳೆಬಾಳುವ 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ವಸ್ತುಗಳ ವಶ. ಆಡುಗೋಡಿ ಪೊಲೀಸ್ ಠಾಣಾ ಸರಹದ್ದಿನ ವಿ.ಎಸ್.ಆರ್ ಲೇಔಟ್‌ನಲ್ಲಿ ವಾಸವಿರುವ ಫಿರಾದುದಾರರು ದಿನಾಂಕ:20/03/2024 ರಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರ ಗಂಡನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಫಿರಾದುದಾರರ ಅಕ್ಕನ ಮನೆಗೆ ವಿಶ್ರಾಂತಿ ಪಡೆಯಲು ದಿನಾಂಕ:15/03/2024 ರಂದು ಹೋಗಿದ್ದು, ದಿನಾಂಕ:20/03/2024 ರಂದು ವಾಪಸ್ ಮನೆಗೆ ಬಂದು ನೋಡಲಾಗಿ ಯಾರೋ ಅಪರಿಚಿತರು ಮನೆಯೊಳಗೆ ಪ್ರವೇಶಿಸಿ ಬೀರುವಿನ ಲಾಕರ್‌ನ ಲಾಕ್ ಮುರಿದು ಲಾಕರ್‌ನಲ್ಲಿಟ್ಟಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ದಿನಾಂಕ:21/08/2024 ರಂದು ಪಿರ್ಯಾದುದಾರರ ಅಕ್ಕನನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಿರುತ್ತಾರೆ. ವಿಚಾರಣೆ ವೇಳೆಯಲ್ಲಿ ಆಕೆಯು ದಿನಾಂಕ:18/08/2024 ರಂದು ಔಷಧಿಯನ್ನು ತರುವಂತೆ ಫಿರಾದುದಾರರ ಅಕ್ಕನಿಗೆ ಹೊಂಡಾ ಆಕ್ಟಿವಾ ದ್ವಿ-ಚಕ್ರ ವಾಹನದ ಕೀ ಬಂದನ್ನು ನೀಡಿದ್ದು, ಆ ಬಂಚಿನಲ್ಲಿ ಫಿರಾದುದಾರರ ಮನೆಯ ಕೀ ಸಹ ಇರುತ್ತದೆ. ಫಿರಾದಿಯವರ ಅಕ್ಕನವರು ಮನೆಯ ಬೀಗದ ಕೀ ಯನ್ನು ಗಮನಿಸಿ ಬೊಮ್ಮನಹಳ್ಳಿ ಹತ್ತಿರವಿರುವ ಹೊಸರೋಡ್‌ನಲ್ಲಿ ವಾಸವಿರುವ ಆಕೆಯ ದೊಡ್ಡಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಫಿರಾದುದಾರರ ಮನೆಯ ಸ್ವಲ್ಪ ದೂರದಲ್ಲಿ ದ್ವಿ-ಚಕ್ರ ವಾಹನ ನಿಲ್ಲಿಸಿ ದೊಡ್ಡಮ್ಮಳಿಗೆ ಅಲ್ಲೇ ಇರುವಂತೆ ತಿಳಿಸಿ ಔಷಧಿಯನ್ನು ತೆಗೆದುಕೊಂಡು ಬರುತ್ತೇನೆಂದು ಹೇಳಿ ಫಿರಾದುದಾರರ ಮನೆಗೆ ಬಂದು ಮನೆಯ ಬಾಗಿಲನ್ನು ತೆಗೆದು ಒಳ ಪ್ರವೇಶಿಸಿ, ಕೊಠಡಿಯ ಬೀರುವಿನ ಲಾಕ್ ತೆಗೆದು ಲಾಕರ್‌ನ್ನು ಮುರಿದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ವಿಚಾರಣೆ ವೇಳೆಯಲ್ಲಿ ತನ್ನೊಪ್ಪಿಕೊಂಡಿರುತ್ತಾಳೆ.
ದಿನಾಂಕ:21/08/2024 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 3 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿತೆಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ ದಿನಾಂಕ: 22/08/2024 ರಂದು ಶಿಕಾರಿಪಾಳ್ಯ ಮತ್ತು ಹೋಸರೋಡ್‌ನ ಜ್ಯೂವೆಲರಿ ಶಾಪ್‌ಗಳಲ್ಲಿ ಅಡಮಾನವಿಟ್ಟಿದ್ದ 42 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು. ದಿನಾಂಕ:23/08/2024 ರಂದು ಆರೋಪಿತೆಯು ವಾಸವಿರುವ ಮನೆಯಿಂದ 32 ಗ್ರಾಂ ತೂಕದ ಚಿನ್ನಾಭರಣ ಮತ್ತು 354 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 75,50,000/-(ಐದು ಲಕ್ಷದ ಐವತ್ತು ಸಾವಿರ ರೂಪಾಯಿ).
ದಿನಾಂಕ:23/03/2024 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ. ಸಾರಾ ಫಾತಿಮಾ ಐ.ಪಿ.ಎಸ್ ರವರು ಹಾಗೂ ಮಡಿವಾಳ ಉಪ ವಿಭಾಗದ ಎ.ಸಿ.ಪಿ ಶ್ರೀ.ಲಕ್ಷ್ಮೀನಾರಾಯಣ ರವರ ಮಾರ್ಗದರ್ಶನದಲ್ಲಿ ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ರವಿಕುಮಾರ್.ಸಿ ಹಾಗೂ ಅಧಿಕಾರಿ/ಸಿಬ್ಬಂದಿಯವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









