300 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ ಬೆಳ್ಳಿ ವಸ್ತುಗಳ ವಶ ಮೌಲ್ಯ 1 20 ಲಕ್ಷ
ಬ್ಯಾಡರಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಅಂದ್ರಹಳ್ಳಿ ಮುಖ್ಯರಸ್ತೆಯ ಚೇತನ ಸರ್ಕಲ್ ಬಳಿ ವಾಸವಿರುವ ಫಿರಾದುದಾರರು, ದಿನಾಂಕ:10/1/2023 ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:10/ll/2023 ರಂದು ಬೆಳಿಗ್ಗೆ 9-30 ಗಂಟೆಗೆ ಕೆಲಸಕ್ಕೆ ಹೋಗಿರುತ್ತಾರೆ. ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ಫಿರಾದುದಾರರ ಮಗನು ಶಾಲೆಯಿಂದ ವಾಪಸ್ ಮನೆಗೆ ಬಂದಿರುತ್ತಾನೆ. ಆ ಸಮಯದಲ್ಲಿ ಓರ್ವ ಅಪರಿಚಿತ ವ್ಯಕ್ತಿಯೊಬ್ಬನು ಫಿರಾದುದಾರರ ಮಗನನ್ನು ಉದ್ದೇಶಿಸಿ ನಿಮ್ಮ ತಂದೆಯವರು ಈ ಮನೆಯಲ್ಲಿ ಅಳವಡಿಸಿರುವ ಡಿಶ್ ರಿಪೇರಿ ಮಾಡಲು ತಿಳಿಸಿರುತ್ತಾರೆಂದು ಅಪರಿಚಿತ ವ್ಯಕ್ತಿಯು ಫಿರಾದಿಯವರ ಮಗನಿಗೆ ತಿಳಿಸಿರುತ್ತಾನೆ. ಇದನ್ನು ನಂಬಿದ ಫಿಲ್ಯಾದಿಯವರ ಮಗನು ಅಪರಿಚಿತ ವ್ಯಕ್ತಿಯನ್ನು ಮನೆಯೊಳಗೆ ಬರಮಾಡಿಕೊಂಡಿರುತ್ತಾನೆ. ಫಿರಾದುದಾರರ ಮಗನು ಮತ್ತು ಅಪರಿಚಿತರ ವ್ಯಕ್ತಿಯು ಮನೆಯ ಟೆರೇಸ್ ಮೇಲೆ ಹೋಗಿ ಡಿನ್ನು ಪರಿಶೀಲಿಸಿ, ಅಪರಿಚಿತ ವ್ಯಕ್ತಿಯು ಡಿನ್ನು ಹಿಡಿದುಕೊಳ್ಳುವಂತೆ ಅಪರಿಚಿತ ವ್ಯಕ್ತಿಯು ಫಿಲ್ಯಾದಿಯವರ ಮಗನಿಗೆ ತಿಳಿಸಿ, ಅಪರಿಚಿತ ವ್ಯಕ್ತಿಯು ಮನೆಯ ಒಳಗೆ ಹೋಗಿ ಕೊಠಡಿಯ ಬೀರುವಿನಲ್ಲಿದ್ದ ಸುಮಾರು 15 ಗ್ರಾಂ ಚಿನ್ನಾಭರಣ, 460 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ 35,000/-ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು 10 ತಿಂಗಳ ಕಾಲ ಕೈಗೊಂಡರು ಆರೋಪಿಯ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿ ದೊರೆತಿರುವುದಿಲ್ಲ.

ದಿನಾಂಕ:11/08/2024 ರಂದು ಆರೋಪಿಯ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಸಂಗ್ರಹಿಸಿ, ನೈಸ್ರಸ್ತೆಯ ಕೊಡಿಗೆಹಳ್ಳಿ ಬ್ರಿಡ್ಜ್ ಹತ್ತಿರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:12/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಆತನು ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಲಗ್ಗೆರೆ ಹಾಗೂ ಇಂದಿರಾನಗರದಲ್ಲಿರುವ ಜ್ಯೂವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
08:23/08/2024 ರಂದು ಲಗ್ಗೆರೆ ಹಾಗೂ ಇಂದಿರಾನಗರದಲ್ಲಿರುವ ಜ್ಯೂವೆಲರಿ ಶಾಪ್ಗಳಿಂದ ಕ್ರಮವಾಗಿ 300 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 20,00,000/- (ಇಪ್ಪತ್ತು ಲಕ್ಷ ರೂಪಾಯಿ).
ದಿನಾಂಕ:23/08/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀಗಿರೀಶ್.ಎಸ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಕೆಂಗೇರಿ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಬಸವರಾಜ.ಎ.ತೇಲಿ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ವೀರಣ್ಣ ಎಸ್ ಮಗಿ ಮತ್ತು ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









