ದಿನಾಂಕ 13-10-2024 ರಂದು ಗೋಕರ್ಣದ ಪ್ರಮುಖ ಲಾಡೊಂದರಲ್ಲಿ ಲಾಡ್ ಸಿಬ್ಬಂದಿಗಳ ಹಾಗೂ ಪ್ರವಾಸಿಗರ ಸುಮಾರು 1,08,000/- ರೂ ಮೌಲ್ಯದ 06 ಮೊಬೈಲ್ ಸೆಟ್‌ಗಳು ಕಳ್ಳತನವಾದ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ರಿ ಪ್ರಕರಣದಲ್ಲಿ ಆರೋಪಿತನ ಬಗ್ಗೆ ಸಿಕ್ಕ ಚಿಕ್ಕ ಸುಆವಿನ ಆಧಾರದ ಮೇಲೆ ಕಾರ್ಯಪ್ರವರ್ತರಾದ ಗೋಕರ್ಣ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ದಿನಾಂಕ 15-10-2024 ರಂದು ರಾತ್ರಿ ಆರೋಪಿತನಾದ ನಾಗರಾಜ ಎಸ್ ತಂದೆ ವಿ ಶಿವಕುಮಾರ, ಪ್ರಾಯ- 37 ವರ್ಷ, ವೃತ್ತಿ- ಮಾರ್ಕೆಟಿಂಗ್ ಸಾ ಮನೆ ನಂ 949, ಮಜ್ಜಿಗೆಯವರ ಬೀದಿ, 18 ನೇ ವಾರ್ಡ, ದೇವನಹಳ್ಳಿ, ಬೆಂಗಳೂರು ಆತನಿಂದ ಸುಮಾರು 1,08,000/-ರೂ ಮೌಲ್ಯದ 1) ರೆಡ್‌ಮಿ 13 5ಜಿ ಮೊಬೈಲ್ ಸೆಟ್-01 ಅಕಿ 16000/- 2) ರೆಡ್‌ಮಿ 10 ಮೊಬೈಲ್ ಸೆಟ್-01. 3) ರಿಯಲ್ ಮೊಬೈಲ್ ಸೆಟ್-01 4) One Plus Nord CE2 Lite 5G ಮೊಬೈಲ್ ಸೆಟ್-01 5) One Plus Nord 3 5G ಮೊಬೈಲ್ ಸೆಟ್-01 6) Vivo IQ00 ಮೊಬೈಲ್ ಸೆಟ್-01 ಗಳನ್ನು ವಶಕ್ಕೆ ಪಡೆದು ಆರೋಪಿತನಿಗೆ ಅರೆಸ್ಟ್ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಸದ್ರಿ ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಪ್ರಕರಣದ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಎಮ್ ನಾರಾಯಣ, ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ, ಮಾನ್ಯ ಹೆಚ್ಚುವರಿ ಪೊಅಸ್ ಅಧೀಕ್ಷಕರಾದ ಮಾನ್ಯ ಶ್ರೀ ಸಿ.ಟಿ ಜಯಕುಮಾರ್ ಮತ್ತು ಶ್ರೀ ಎಮ್ ಜಗದೀಶ, ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಾನ್ಯ ಶ್ರೀ ಮಹೇಶ್ ಕೆ.ಎಮ್ ರವರುಗಳ ಮಾರ್ಗದರ್ಶನದಲ್ಲಿ ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ವಸಂತ್ ಆಚಾರ್, ಪಿ.ಎಸ್.ಐ ಶ್ರೀ ಶಶಿಧರ್ ಕೆ,ಹೆಚ್, ಶ್ರೀ ಖಾದರ್‌ಭಾಷಾ, ಎ.ಎಸ್.ಐ ಶ್ರೀ ಅರವಿಂದ ಶೆಟ್ಟಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಹೆಚ್ ನಾಯ್ಕ, ಪರಮೇಶ್ವರ ಬೆಂಡ್ಡಗಟ್ಟಿ, ಹಾಗೂ ಸಿಬ್ಬಂದಿಯವರಾದ ಶ್ರವಣಕುಮಾರ್, ಕಿರಣ್ ಬಾಳೂರ, ಪ್ರಕಾಶ್ ಎಮ್, ಗಣೇಶ ದಾಸರ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಉದಯ ಗುನಗಾ ರವರು ಭಾಗವಹಿಸಿದ್ದರು.









