ಬೀದರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿರವರು ರಾತ್ರಿ ಗಸ್ತು ಕರ್ತವ್ಯವನ್ನು ಅತೀ ಚುರುಕಾಗಿ ಅನುಮಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣನ್ನು ಇಟ್ಟಿದ್ದು, ನಿನ್ನೆ ರಾತ್ರಿ ಬೀದರ ನಗರದ ರಾತ್ರಿ ಗಸ್ತು ಚೇಕಿಂಗ್ ಕರ್ತವ್ಯದಲ್ಲಿದ್ದ ಮಾರ್ಕೇಟ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಶ್ರೀ ಅಬ್ದುಲ್ ಜಬ್ಬಾರ ರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವ ಸಿಬ್ಬಂದಿರವರೊಂದಿಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಎಮ್.ಸಿ.ಸಿ.ಟಿ.ಎನ್.ಎಸ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿಚಾರಣೆ ಮಾಡಿ ಕಳುಹಿಸಿರುತ್ತಾರೆ.
ಜಿಲ್ಲೆಯ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣನ್ನಿಟ್ಟು ಎಮ್.ಸಿ.ಸಿ.ಟಿ.ಎನ್.ಎಸ್ ತಂತ್ರಾಂಶವನ್ನು ಸರಿಯಾಗಿ ಬಳಸಿ ಯಾವುದೇ ಸ್ವತ್ತಿನ ಅಪರಾಧಗಳು, ಅಪರಾಧಿಕ ಕೃತ್ಯಗಳು ಜರುಗದಂತೆ ನಿಗಾ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾರ್ಕೇಟ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಶ್ರೀ ಅಬ್ದುಲ್ ಜಬ್ಬಾರ ಮತ್ತು ರಾತ್ರಿ ಗಸ್ತು ಸಿಬ್ಬಂದಿರವರ ಕಾರ್ಯವು ಶ್ಲಾಘಿನಿಯವಾಗಿದೆ.
ರಾತ್ರಿ ಸಮಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವಂತಿಲ್ಲ ಅನುಮಾಸ್ಪದವಾಗಿ ಓಡಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಚುರುಕಾದ ರಾತ್ರಿಗಸ್ತು, ಅಪರಾಧ ಪತ್ತೆ ಕಾರ್ಯಾಚರಣೆಯು ಮುಂದುವರೆಯುತ್ತದೆ. ಅನುಮಾನಾಸ್ಪದ ಜನರ ಮೇಲೆ ನಮ್ಮ ನಿಗಾ. ನಿಮ್ಮ ಸುರಕ್ಷತೆ ನಮ್ಮ ಹೊಣೆ









