- ಹೊಸ ವರ್ಷಾಚರಣೆಯನ್ನು ಶಾಂತಿಯುತವಾಗಿ ಆಚರಿಸುವುದು.
- ಕಾನೂನು ನಿಯಮಗಳನ್ನು ಪಾಲನೆ ಮಾಡಿ, ನಿಯಮಿತವಾಗಿ ವಾಹನ ಚಾಲನೆ ಮಾಡಿ ಮತ್ತು ಸಂಚಾರಿ ನಿಮಯಗಳನ್ನು ಕಡ್ಡಾಯವಾಗಿ ಪಾಲಿಸಿ.
- ಸಾರ್ವಜನಿಕರು ಶಾಂತಿ ಮತ್ತು ಶಿಸ್ತನ್ನು ಕಾಪಾಡಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಯವರ ಜೊತೆ ಸಹಕರಿಸಿ
- ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮೋದಿಸಲ್ಪಟ್ಟ ಅಧೀಕೃತ ಸ್ಥಳಗಳಲ್ಲಿ ವರ್ಷಾಚರಣೆಯನ್ನು ಆಚರಿಸಿ.
- ತುರ್ತು ಸಂದರ್ಭಗಳಲ್ಲಿ 112ಅಥವಾ ಸಮೀಪದ ಪೊಲೀಸ್ ಠಾಣೆಯನ್ನು/ಪೊಲೀಸ್ ಕಿಯೋಸ್ಕ್ ಅನ್ನು ಸಂಪರ್ಕಿಸುವುದು.
- ವರ್ಷಾಚರಣೆಯ ಸಂದರ್ಭದಲ್ಲಿ ಅಕ್ಕಪಕ್ಕದವರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು.
- ಹೆಚ್ಚು ಬೆಳಕಿರುವ ಪ್ರದೇಶಗಳಲ್ಲಿ ವರ್ಷಾಚರಣೆಯನ್ನು ಆಚರಿಸಿ.
- ಸಾರ್ವಜನಿಕರು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಸುರಕ್ಷತೆ ಬಗ್ಗೆ ಗಮನಹರಿಸುವುದು.
- ಸಾರ್ವಜನಿಕರು ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು.
- ಯಾವುದೇ ಅಹಿತಕರ ಘಟನೆ/ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸರಿಗೆ ಮಾಹಿತಿಯನ್ನು ನೀಡುವುದು.
- ಸಾರ್ವಜನಿಕರು ತಮ್ಮ ಚಲನವಲನಗಳ ಬಗ್ಗೆ ಕುಟುಂಬಕ್ಕೆ ಮಾಹಿತಿಯನ್ನು ಆಗಿದ್ದಾಂಗೆ ನೀಡುತ್ತಿರಿ.
- ವರ್ಷಾಚರಣೆಯನ್ನು ಆಚರಿಸುವ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಬೆಲೆಬಾಳುವ ಆಭರಣಗಳನ್ನು ಧರಿಸದೇ ಇರುವುದು ಒಳಿತು. ಅಲ್ಲದೇ ಮೊಬೈಲ್ ಫೋನ್ ಮತ್ತು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
- ಇತರೆ ಧರ್ಮದವರಿಗೆ ಘಾಸಿಯಾಗದಂತೆ ವರ್ಷಚರಣೆಯನ್ನು ಆಚರಿಸಿ.
- ಭದ್ರತಾ ಸಿಬ್ಬಂಧಿಗಳಾದ ಪೊಲೀಸ್, ಹೋಂ ಗಾರ್ಡ್, ಜೊತೆ ಸಹಕರಿಸಿ
- ಆಟೋ ಮತ್ತು ಕ್ಯಾಬ್ಗಳಲ್ಲಿ ಪ್ರಯಾಣಿಸುವಾಗ ಅದೀಕೃತವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
- ಪೊಲೀಸರು ಸೂಚಿಸಿರುವ ರಸ್ತೆಗಳಲ್ಲಿಯೇ ಸಂಚರಿಸಿ.
ಸಾರ್ವಜನಿಕರು ಮಾಡಬಾರದ ಅಂಶಗಳು
- ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡಬೇಡಿ, ಇದು ಕಾನೂನು ಬಾಹಿರವಾಗಿದ್ದು, ಜೀವಕ್ಕೆ ಹಾನಿ ಉಂಟು ಮಾಡಬಹುದು.
- ಪಟಾಕಿಗಳನ್ನು ಸಿಡಿಸಬಾರದು. ಪರಿಸರ ಮಾಲಿನ್ಯ ಉಂಟಾಗುವುದನ್ನು ತಪ್ಪಿಸಿ.
- ಅನಾವಶ್ಯಕವಾಗಿ ವಾಹನದ ಹಾರ್ನ್ಮೊಳಗಿಸಬೇಡಿ, ಹಾಗೂ ಪೀಪಿ ಯನ್ನು ಊದಬೇಡಿ.
- ಅಪಾಯಕಾರಿಯಾಗಿ, ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವಂತಿಲ್ಲ.
- ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೇ ಯಾವುದೇ ಸಮಾರಂಭಗಳನ್ನು ಆಯೋಜಿಸುವಂತಿಲ್ಲ.
- ವಯಸ್ಸಾದವರಿಗೆ,ಖಾಯಿಲೆ ಮನುಷ್ಯರಿಗೆ ತೊಂದರೆಯಾಗುವಂತೆ ಸಮಾರಂಭಗಳನ್ನು ಆಯೋಜಿಸಬಾರದು.
- ಅವಧಿ ಮೀರಿ ಶಬ್ದಮಾಲಿನ್ಯವನ್ನುಂಟು ಮಾಡುವುದು ಕಾನೂನುಬಾಹಿರವಾಗಿದೆ. ವರ್ಷಾಚರಣೆಯ
- ಪೊಲೀಸರು ಮತ್ತು ಸ್ಥಳೀಯ ಆಡಳಿತ ರೂಪಿಸುವ ಭದ್ರತಾ ಮಾರ್ಗದರ್ಶಿಗಳನ್ನು ಉಲ್ಲಂಘಿಸುವಂತಿಲ್ಲ.
- ಸಾರ್ವಜನಿಕರು ಅನಾವಶ್ಯಕವಾಗಿ ಗೊಂದಲ ಮತ್ತು ದ್ವಂದ್ವಗಳಿಗೆ ಎಡೆ ಮಾಡಿಕೊಡಬೇಡಿ.
- ನಿರ್ಭಂಧಿತ ಸ್ಥಳ/ಪ್ರದೇಶಗಳಿಗೆ ಪ್ರವೇಶಿಸಬೇಡಿ.
- ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ದೂಮಪಾನವನ್ನು ಮಾಡುವುದು ಕಾನೂನು ಬಾಹಿರವಾಗಿರುತ್ತದೆ.
- ಸಾರ್ವಜನಿಕರು ಇತರರಿಗೆ ತೊಂದರೆಯಾಗುವಂತೆ ನಡೆದುಕೊಳ್ಳಬೇಡಿ.
- ಪೊಲೀಸ್ ಬ್ಯಾರಿಕೇಡ್ಗಳನ್ನು ಹಾಯ್ದು ಹೋಗಲು ಪ್ರಯತ್ನಿಸಬೇಡಿ
- ತಮಾಷೆ ಮತ್ತು ಮೋಜಿಗಾಗಿ ತುರ್ತು ಕರೆಗಳಿಗೆ ಸಂಪರ್ಕಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಡಿ.
- ರಸ್ತೆ ಮಧ್ಯೆ ಅನಾವಶ್ಯಕವಾಗಿ ನಿಂತುಕೊಳ್ಳುವುದು ಮತ್ತು ಗುಂಪುಗೂಡುವಂತಿಲ್ಲ.
- ಸಮಾಜದ ಶಾಂತಿ ಕದಡುವಂತಹ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಡಿ.
- ರಸ್ತೆ ದೀಪ ಸೇರಿದಂತೆ ಸರ್ಕಾರಿ ಸ್ವತ್ತುಗಳನ್ನು ಹಾನಿಗೊಳಿಸಬೇಡಿ.
- ಪೋಷಕರು ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ನೀಡಬೇಡಿ.
- ಅನಾವಶ್ಯಕವಾಗಿ ಸಾರ್ವಜನಿಕರೊಂದಿಗೆ ಹಾಗೂ ಅಪರಿಚಿತರೊಂದಿಗೆ ವಾದ, ವಾಗ್ವಾದಗಳಲ್ಲಿ ತೊಡಗಿಸಿಕೊಳ್ಳಬೇಡಿ.
- ಸಾರ್ವಜನಿಕರು ಕೃತಕ ವಿಕೃತ ಮುಖವಾಡಗಳನ್ನು ಧರಿಸಿ, ಬೇರೆಯವರಿಗೆ ಕಿರಿಕಿರಿ ಮಾಡಬೇಡಿ










