ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ನಾಲ್ಕು ಜನರು ಎರಡು ದ್ವೀಚಕ್ರ ವಾಹನದ ಮೇಲೆ ಮನ್ನಳ್ಳಿ ಬಾರ್ಡರ್ ಎನ್.ಹೆಚ್-65 ರ ಮುಖಾಂತರ ಮಹಾರಾಷ್ಟ್ರ ರಾಜ್ಯದ ಪೂನ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಸುವರ್ಣಾ ರವರು ತಮ್ಮ ಠಾಣೆಯ ಸಿಬ್ಬಂದಿರವರಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಪ್ರಕಾಶ, ಶ್ರೀ ಅನಿಲ, ಶ್ರೀ ಆಕಾಶ, ಶ್ರೀ ಬೀರಪ್ಪಾ, ಶ್ರೀ ಶಿವಕುಮಾರ ರವರೊಂದಿಗೆ ಪಿ.ಎಸ್.ಐರವರು ತಮ್ಮ ಸಿಬ್ಬಂದಿ ರವರೊಂದಿಗೆ ಪತ್ರಾಂಕಿತ ಅಧಿಕಾರಿ ಡಾ: ಅಜಯ ಪಾಟೀಲ್, ರವರ ಸಮಕ್ಷಮ ಆರೋಪಿತರ ಮೇಲೆ ದಾಳಿ ಮಾಡಿ ಆರೋಪಿತರು ಸಾಗಿಸುತ್ತಿದ್ದ 5 ಕೆ.ಜಿ 600 ಗ್ರಾಂ ಗಾಂಜಾ ಅ:ಕಿ: 2,80,000=00 ರೂಪಾಯಿ ಮೌಲ್ಯದ್ದು ಮತ್ತು ಸಾಗಿಸಲು ಬಳಸಿದ ಎರಡೂ ದ್ವೀಚಕ್ರ ವಾಹನಗಳ ಅ:ಕಿ: 24,000=00 ರೂಪಾಯಿ ಹೀಗೆ ಒಟ್ಟು ಅ:ಕಿ: 3,04,000=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗಿದೆ.
ದಾಳಿಯಲ್ಲಿ ಶ್ರಮಿಸಿದ ಮಂಠಾಳ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ









