ಹುಳಿಮಾವು ಪೊಲೀಸ್ ಠಾಣಾ ಸರಹದ್ದಿನ, ಕಾಮಾಕ್ಷಿ ಲೇಔಟ್ನ ಗೊಟ್ಟಿಗೆರೆಯಲ್ಲಿ ವಾಸವಿರುವ ಪಿರಾದುದಾರರು, 0:31/12/2024 ರಂದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಕಿರಾಣಿ ಅಂಗಡಿಯೊಂದನ್ನಿಟ್ಟುಕೊಂಡಿದ್ದು, ಈಗ್ಗೆ 4 ತಿಂಗಳ ಹಿಂದೆ ಓರ್ವ ಮಹಿಳೆಯು ಪರಿಚಯವಾಗಿದ್ದು, ಪಿರಾದುದಾರರ ಅಂಗಡಿಗೆ ತರಕಾರಿ, ಇನ್ನಿತರೆ ವಸ್ತುಗಳನ್ನು ತಂದು ಕೊಡುತ್ತಿರುತ್ತಾಳೆ. ಪಿರಾದುದಾರರ ಅಂಗಡಿಯ ಪಕ್ಕದಲ್ಲೆ ಪಿರಾದುದಾರರ ವಾಸದ ಮನೆಯಿದ್ದು, ಪರಿಚಯಸ್ಥ ಮಹಿಳೆಯು ಅಂಗಡಿಗೆ ಬಂದ ಸಮಯದಲ್ಲಿ, ಆಗ್ಗಾಗ್ಗೆ ರೆಸ್ಟ್ ರೂಮ್ಗೆ ಹೋಗುವ ಸಲುವಾಗಿ ಪಿರಾದುದಾರರ ಮನೆಯ ಬೀಗದ ಕೀಯನ್ನು ತೆಗೆದುಕೊಂಡು ಹೋಗಿ, ನಂತರ ವಾಪಸ್ ಬಂದು ಕೀಯನ್ನು ನೀಡುತ್ತಿದ್ದಳು. ದಿನಾಂಕ:01/11/2024 ರಿಂದ 30/12/2024 ರ ಅವಧಿಯಲ್ಲಿ ಪಿರಾದುದಾರರ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳು ಇಲ್ಲದಿರುವುದನ್ನು ಕಂಡು ಪಿರಾದುದಾರರು ಪರಿಚಯಸ್ಥ ಮಹಿಳೆಯ ಮೇಲೆ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ದಿನಾಂಕ:09/01/2025 ರಂದು ದೊಡ್ಡಕಮ್ಮನಹಳ್ಳಿಯಲ್ಲಿ ವಾಸವಿರುವ ಆ ಪರಿಚಯಸ್ಥ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆಯಲ್ಲಿ ಆ ಪರಿಚಯಸ್ಥ ಮಹಿಳೆಯು ಈ ಪ್ರಕರಣದಲ್ಲಿ ಚಿನ್ನಾಭರಣವನ್ನು ಕಳವು ಮಾಡಿರುವುದಾಗಿ ತಪ್ಪಿಪ್ಪಿಕೊಂಡಿರುತ್ತಾಳೆ.
ದಿನಾಂಕ:10/01/2025 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 4 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿತೆಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ, ಅರ್ಧದಷ್ಟು ಚಿನ್ನಾಭರಣವನ್ನು ವಾಸದ ಮನೆಯಲ್ಲಿಟ್ಟಿರುವುದಾಗಿ, ಇನ್ನೂಳಿದ ಅರ್ಧದಷ್ಟು ಚಿನ್ನಾಭರಣವನ್ನು ಮಾವಳ್ಳಿಯ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿರುತ್ತಾಳೆ.
ದಿನಾಂಕ:11/01/2025 ರಂದು ಆರೋಪಿತೆಯು ವಾಸವಿರುವ ಮನೆಯಿಂದ 69 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಯಿತು.
ದಿನಾಂಕ:13/01/2025 ರಂದು ಮಾವಳ್ಳಿಯ ಜ್ಯೂವೆಲರಿ ಅಂಗಡಿಯಲ್ಲಿ ಅಡಮಾನವಿಟ್ಟಿದ್ದ 67 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿತೆಯ ವಶದಿಂದ ಒಟ್ಟಾರೆ 136 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 9,00,000/-(ಒಂಬತ್ತು ಲಕ್ಷ ರೂಪಾಯಿ).
ದಿನಾಂಕ:13/01/2025 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ಕೆ.ಎಂ ಸತೀಶರವರ ಉಸ್ತುವಾರಿಯಲ್ಲಿ ಹುಳಿಮಾವು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಿ.ಜಿ.ಕುಮಾರಸ್ವಾಮಿ ರವರ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









