ಡಾ. ಜಿ. ಪರಮೇಶ್ವರ, ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ ರವರು ಸಾರ್ವಜನಿಕ ಬಳಕೆಗಾಗಿ “ASTraM Mobile application” ಅನ್ನು ಬಿಡುಗಡೆ ಮಾಡಿದರು. ಈ ಆಪ್ಲಿಕೇಶನ್ ಅನ್ನು ಎಲ್ಲಾ ಪ್ರಯಾಣಿಕರ ಅಗತ್ಯಗಳಿಗಾಗಿ “ಒಂದೇ ಪರಿಹಾರ” (“one-stop solution”) ವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಆಪ್ಲಿಕೇಶನ್‌ನಿಂದ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳವನ್ನು ಶೀಘ್ರವಾಗಿ ತಲುಪಲು ಉತ್ತಮ ಪ್ರಯಾಣ ಯೋಜನೆಯನ್ನು ಸೃಜಿಸಲು ಸಹಕರಿಸುತ್ತದೆ. ಹಾಗೂ ಈ ಆಪ್‌ನ ಮುಖಾಂತರ ರಸ್ತೆ ಅಪಘಾತಗಳನ್ನು ವರದಿ ಮಾಡಬಹುದಾಗಿದ್ದು, ಪಾಲ್ಗೊಳ್ಳುವಿಕೆ ಮತ್ತು ಜವಾಬ್ದಾರಿಯ ಹಂಚಿಕೆ ಸಂಸ್ಕೃತಿಯನ್ನು ಬೆಳೆಸುತ್ತದೆ.

ಸಾರ್ವಜನಿಕರು ಈ ಆಪ್ ಮುಖೇನ ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡಬಹುದಾಗಿರುತ್ತದೆ. ಹಾಗೂ ಅನ್‌ಲೈನ್ ನಲ್ಲಿ ವಾಹನಗಳ ಮೇಲಿನ ಸಂಚಾರ ನಿಯಮ ಉಲ್ಲಂಘನೆ, ದಂಡಗಳನ್ನು ವೀಕ್ಷಣೆ ಮಾಡಿ, ಸಂಚಾರ ದಂಡವನ್ನು ಪಾವತಿಸಬಹುದಾಗಿರುತ್ತದೆ. ತಪ್ಪಾಗಿ ದಂಡವನ್ನು ವಿಧಿಸಿದ್ದಲ್ಲಿ ಅದನ್ನು ವಿವಾದಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ.
ಈ ಅಪ್ಲಿಕೇಶನ್ ನ ಉದ್ದೇಶವು ಪ್ರಯಾಣಿಕರನ್ನು ನಗರದ ಸಂಚಾರ ನಿರ್ವಹಣೆ, ಪರಿಸರ ವ್ಯವಸ್ಥೆಯ ಸಕ್ರಿಯ ಭಾಗವನ್ನಾಗಿ ಮಾಡಬಹುದಾಗಿದೆ. ಹೆಚ್ಚಿನ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆಯನ್ನು ಇದು ನೀಡುತ್ತದೆ.
ಈ ಅಪ್ಲಿಕೇಶನ್, iOS ಮತ್ತು Android ಎರಡು ಪ್ಲಾಟ್ ಫಾರ್ಮ್‌ಗಳಲ್ಲಿ ಲಭ್ಯವಿದೆ.









