ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ರವರ ನಿರ್ದೇಶನದಂತೆ, ಶ್ರೀ ಜೆ.ಎಸ್ ನ್ಯಾಮಗೌಡರ ರವರು ಶ್ರೀ ಅಲಿಸಾಬ್, ಸಿ.ಪಿ.ಐ ಬ.ಕಲ್ಯಾಣ ನಗರ ವೃತ್ತ, ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಸಿದ್ದೇಶ್ವರ ರವರೊಂದಿಗೆ ಬ.ಕಲ್ಯಾಣ ವೃತ್ತದ ಅಧಿಕಾರಿ ಸಿಬ್ಬಂದಿ ರವರೊಂದಿಗೆ ದ್ವಿಚಕ್ರ ವಾಹನ ಅಪಘಾತದ ಪ್ರಕರಣಗಳಲ್ಲಿ ಅಧಿಕ ಪ್ರಕರಣಗಳಲ್ಲಿ ತಲೆಗೆ ಪೆಟ್ಟಾಗಿಯೇ ವಾಹನ ಚಾಲಕರು, ಸವಾರರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಯಲು ಮತ್ತು ಅಪಘಾತದಲ್ಲಿ ಸಂಭವಿಸುವ ಅಮಾಯಕರ ಪ್ರಾಣ ರಕ್ಷಣೆ ಮಾಡುವುದು ಹಾಗು ಸಂಚಾರಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಸವಕಲ್ಯಾಣ ಪಟ್ಟಣದಲ್ಲಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ರಾಲಿ ಮೂಲಕ ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎಂಬ ವಾಕ್ಯದೊಂದಿಗೆ ಹೆಲ್ಮೆಟ್ ಧರಿಸಿದ ವಾಹನ ಚಾಲಕರಿಗೆ ಗುಲಾಬಿ ಹೂವುಗಳನ್ನು ನೀಡಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

ಹುಮನಾಬಾದ ಉಪವಿಭಾಗದ ಬಸವಕಲ್ಯಾಣ ನಗರ ವೃತ್ರದ ಪೊಲೀಸ ಅಧಿಕಾರಿ, ಸಿಬ್ಬಂದಿರವರ ಉತ್ತಮ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಜನ ಸಾಮಾನ್ಯರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿ. ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ









