ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನದಿಂದ ಸುಮಾರು 55 ಲಕ್ಷ ಮೌಲ್ಯದ 50 ಬೈಕ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಇತ್ತೀಚಿಗೆ ಹೊಸಕೋಟೆ ಟೌನಿನಲ್ಲಿ ಆರೋಪಿಗಳು ಬೈಕ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವಾಗ ಹೊಸಕೋಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇದರಿಂದ ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳು ಕಾಡುಗೋಡಿ ಹತ್ತಿರ ಇರುವ ಗೋಡನ್ನಲ್ಲಿ ಕೆಲಸ ಮಾಡಿಕೊಂಡಿದ್ದು ಮೋಜು ಮಸ್ತಿ ಗಾಗಿ ದೇವಸ್ಥಾನ, ಮನೆ, ಅಂಗಡಿಗಳು, ಮತ್ತು ಪಾರ್ಕಿಂಗ್ ನಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತಿದ್ದರು,ಹಾಗೆ ಕದ್ದ ವಾಹನಗಳನ್ನು ಆಂಧ್ರಪ್ರದೇಶದ ನೆಲ್ಲೂರಿನ ಮತ್ತೊಬ್ಬ ಆರೋಪಿಯ ಮೂಲಕ ಮಾರಾಟ ಮಾಡಿಸುತಿದ್ದರು.
ಆರೋಪಿತರ ಬಂಧನದಿಂದ ಹೊಸಕೋಟೆ ಠಾಣೆಯ 6 ಪ್ರಕರಣಗಳು, ಮಾಲೂರು ಪೊಲೀಸ್ ಠಾಣೆಯ 18, ಬಂಗಾರಪೇಟೆಯ 6, ಕಾಡುಗೋಡಿಯ 5, ಕೋಲಾರ ಟೌನ್ ನ 1, ಬೇತಮಂಗಲದ 1, ಗಲ್ಪೇಟೆಯ 1, ಕಾಟನ್ ಪೇಟೆಯ 1, ಇತರ ಠಾಣೆಗಳ 12 ಬೈಕ್ ಕಳ್ಳತನ ಪ್ರಕರಣಗಳಿಗೆ ಮುಕ್ತಿ ಸಿಕ್ಕಿದೆ.
ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಚಂದ್ರಕಾಂತ್, ಅಡಿಷನಲ್ ಎಸ್ ಪಿ ಗಳಾದ ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ, ಹೊಸಕೋಟೆ ಉಪ ವಿಭಾಗದ ಡಿವೈಎಸ್ಪಿ ಎಂ ಮಲ್ಲೇಶ್ ರವರುಗಳ ಮಾರ್ಗದರ್ಶನದಲ್ಲಿ ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿಟಿ ಗೋವಿಂದ್ ರವರ ಸಾರಥ್ಯದಲ್ಲಿ ಸಬ್ ಇನ್ಸ್ಪೆಕ್ಟರ್ ಮುನಿರಾಜು, ಹಾಗೂ ಸಿಬ್ಬಂದಿಗಳಾದ ಏಎಸ್ಐ ಸೈಯದ್ ಅಫ್ರೋಜ್, ಗೋಪಾಲಕೃಷ್ಣ, ಧನಶೇಖರ, ಜಗನ್ನಾಥ, ದತ್ತಾತ್ರೇಯ, ರಮೇಶ್, ಬಸವರಾಜ್ ಬಕಾಲಿ, ಸತೀಶ್, ನಾರಾಯಣ, ಮತ್ತು ಅಂಬರೀಶ್, ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.










